Breaking News

ಭಾರತಕ್ಕೆ ವಿಶ್ವ ಬ್ಯಾಂಕ್‌ನಿಂದ 1 ಶತಕೋಟಿ ಡಾಲರ್ ನೆರವು ……….

Spread the love

ನವದೆಹಲಿ, ಮೇ 15- ಕೊರೊನಾ ವೈರಸ್ ನಿಗ್ರಹಕ್ಕಾಗಿ ಹೋರಾಡುತ್ತಿರುವ ಭಾರತಕ್ಕೆ ವಿಶ್ವಬ್ಯಾಂಕ್(ಡಬ್ಲ್ಯುಬಿ) ಇಂದು ಒಂದು ಶತಕೋಟಿ ಡಾಲರ್ ಮೊತ್ತದ ನೆರವು ನೀಡಲು ಸಮ್ಮತಿಸಿದೆ.

ವೈರಸ್ ಹಾವಳಿಯಿಂದ ಸಂಕಷ್ಟಕ್ಕೀಡಾಗಿರುವ ಬಡವರು, ಶ್ರಮಿಕ ವರ್ಗದವರು ಮತ್ತಿತರಿಗೆ ಸಾಮಾಜಿಕ ನೆರವು ನೀಡಲು ಶ್ರಮಿಸುತ್ತಿರುವ ಭಾರತಕ್ಕೆ ಸಹಕಾರ ನೀಡಲೋಸುಗ ಕೋವಿಡ್-19 ಸಾಮಾಜಿಕ ರಕ್ಷಣಾ ಸ್ಪಂದನೆ ಕಾರ್ಯಕ್ರಮವನ್ನು ಚುರುಕುಗೊಳಿಸಲು ವಿಶ್ವವ್ಯಾಂಕ್ ಒಂದು ಶತಕೋಟಿ ಡಾಲರ್ ನೆರವಿಗೆ ಒಪಿಗೆ ನೀಡಿದೆ.

ಇದರೊಂದಿಗೆ ಭಾರತದಲ್ಲಿ ತುರ್ತು ಕೊರೊನಾ ನಿಗ್ರಹ ಹೋರಾಟಕ್ಕಾಗಿ ವಿಶ್ವಬ್ಯಾಂಕ್ ನೀಡಿರುವ ನೆರವು 2 ಶತಕೋಟಿ ಡಾಲರ್‍ಗೇರಿದೆ. ಕಳೆದ ತಿಂಗಳು ಭಾರತದ ಆರೋಗ್ಯ ವಲಯಕ್ಕೆ ಬೆಂಬಲ ನೀಡಲು ವಿಶ್ವಬ್ಯಾಂಕ್ ಒಂದು ಶತಕೋಟಿ ಡಾಲರ್ ನೆರವು ಘೋಷಿಸಿತ್ತು


Spread the love

About Laxminews 24x7

Check Also

ಕರ್ನಾಟಕ ಹವಾಮಾನ ವರದಿ: ರಾಜ್ಯದಲ್ಲಿ ಇಂದೂ ಬಿಡದ ಮೈಕೊರೆಯುವ ಚಳಿ, ಒಣ ಹವೆ!

Spread the loveಬೆಂಗಳೂರು: ಇಂದೂ ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿಯೂ ತೀವ್ರ ಚಳಿಯ  ಜೊತೆಗೆ ಒಣಹವೆಯಿರಲಿದೆ ಎಂದು ಹವಾಮಾನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ