Breaking News

ದೇಶದ ಜನತೆಯ ಚಿತ್ತ ಪ್ರಧಾನಿ ಭಾಷಣದತ್ತ ನೆಟ್ಟಿದೆ.

Spread the love

HomeNational News
ಇಂದು ರಾತ್ರಿ 8 ಗಂಟೆಗೆ ದೇಶವನ್ನುದ್ದೇಶಿ ಪ್ರಧಾನಿ ಮೋದಿ ಮಾತು
ಲಾಕ್ ಡೌನ್ ಮುಗಿಯುತ್ತಾ? ಮುಂದುವರೆಯುತ್ತಾ?
By Pragativahini On May 12, 2020

Share
ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ರಾತ್ರಿ 8 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದು, ಇಡೀ ದೇಶದ ಜನತೆಯ ಚಿತ್ತ ಪ್ರಧಾನಿ ಭಾಷಣದತ್ತ ನೆಟ್ಟಿದೆ.

ಈ ಬಗ್ಗೆ ಪ್ರಧಾನಿಗಳ ಕಾರ್ಯಾಲಯ ಟ್ವೀಟ್ ಮಾಡಿದ್ದು, ಇಂದು ರಾತ್ರಿ 8 ಗಂಟೆಗೆ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ ಎಂದು ಹೇಳಿದೆ.

ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ಹೇರಲಾಗಿದ್ದ ಲಾಕ್ ಡೌನ್ ಬಗ್ಗೆ ಹಾಗೂ ಕೊರೊನಾ ಜತೆಗೆ ಜೀವನ ಶೈಲಿ ಕುರಿತಾಗಿ ಮಾತನಾಡಲಿದ್ದಾರೆ. ಇದರ ಜತೆಗೆ ಆರ್ಥಿಕ ಪ್ಯಾಕೆಜ್ ಬಗ್ಗೆ ಪ್ರಧಾನಿ ಮಾತನಾಡಲಿದ್ದಾರಾ ಎಂಬ ಕುತೂಹಲ ಕೂಡ ಇದೆ.

ನಿನ್ನೆಯಷ್ಟೇ ಪ್ರಧಾನಿ ಮೋದಿಯವರು ಹಲವು ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ್ದರು. ಈ ವೇಳೆ ಲಾಕ್ ಡೌನ್ ವಿಸ್ತರಣೆ ಬಗ್ಗೆ ಆಯಾ ರಾಜ್ಯಗಳೇ ನಿರ್ಧಾರ ಕೈಗೊಳ್ಳಬೇಕು ಎಂದು ತಿಳಿಸಿದ್ದರು


Spread the love

About Laxminews 24x7

Check Also

ಕಂಬಳ ಅತ್ಯಂತ ಜನಪ್ರಿಯ ಗ್ರಾಮೀಣ ಕ್ರೀಡೆ: ಸಿಎಂ ಸಿದ್ದರಾಮಯ್ಯ

Spread the love    ಮಂಗಳೂರು : ಕಂಬಳ ಕ್ರೀಡೆ ಮತ್ತು ಕಲೆಗೆ ಜಾತಿ-ಧರ್ಮದ ಬೇಲಿ ಇಲ್ಲ. ಇದು ಸರ್ವರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ