ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಎಲ್ಲ ರಾಜ್ಯಗಳ ಸಿಎಂಗಳ ಜೊತೆಗೆ ಮಾತುಕತೆ ನಡೆಸುತ್ತಿದ್ದು ಇಂದು ಎರಡನೇ ಹಂತದ ಸಭೆ ನಡೆಯಲಿದೆ. ಮಧ್ಯಾಹ್ನ ಮೂರು ಗಂಟೆಗೆ ಸಭೆ ನಡೆಯಲಿದ್ದು, ಅತಿ ಹೆಚ್ಚು ಸೋಂಕು ಕಾಣಿಸಿಕೊಂಡಿರುವ ಹದಿನೈದು ರಾಜ್ಯಗಳ ಮುಖ್ಯಮಂತ್ರಿಗಳು ಜೊತೆ ಮೋದಿ ಸಭೆ ನಡೆಯಲಿದ್ದಾರೆ.
ಮಂಗಳವಾರ ಕೇಂದ್ರಾಡಳಿತ ಪ್ರದೇಶಗಳು ಒಳಗೊಂಡಂತೆ ಒಟ್ಟು 21 ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಸಭೆ ನಡೆಸಿದ್ದು, ಸೋಂಕು ನಿಯಂತ್ರಣದ ಜೊತೆಗೆ ಆರ್ಥಿಕ ಚಟುವಟಿಕೆಗಳನ್ನು ಮುಂದುವರಿಸುವ ಬಗ್ಗೆ ಪಿಎಂ ಸಿಎಂಗಳಿಂದ ಸಲಹೆ ಪಡೆದುಕೊಂಡಿದ್ದಾರೆ. ಇಂದು ನಡೆಯುತ್ತಿರುವ ಸಭೆಯಲ್ಲಿ ಪಶ್ಚಿಮ ಬಂಗಾಳ ಸಿಎಂ ಭಾಗಿಯಾಗುತ್ತಿಲ್ಲ ಅಂತಾ ತಿಳಿಸಿದ್ದು ಬದಲಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಭಾಗಿಯಾಗುವ ಸಾಧ್ಯತೆ ಇದೆ.
ಇಂದು ಯಾವ ರಾಜ್ಯಗಳ ಸಿಎಂಗಳ ಜೊತೆಗೆ ಸಭೆ?
ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಕರ್ನಾಟಕ, ಬಿಹಾರ್, ಆಂಧ್ರಪ್ರದೇಶ, ಹರಿಯಾಣ, ಜಮ್ಮು ಕಾಶ್ಮೀರ, ತೆಲಂಗಾಣ, ಒಡಿಶಾ ಸಿಎಂಗಳ ಜೊತೆಗೆ ಚರ್ಚೆ ನಡೆಸಲಿದ್ದಾರೆ.
ಇಂದಿನ ಸಭೆ ಮಹತ್ವ ಯಾಕೆ?
* ದೇಶದಲ್ಲಿ ಅತಿ ಹೆಚ್ಚು ಸಕ್ರಿಯ ಪ್ರಕರಣಗಳಿರುವ ಹದಿನೈದು ರಾಜ್ಯಗಳು
* ಆರೋಗ್ಯ ಇಲಾಖೆ ಅಂಕಿ ಅಂಶಗಳ ಪ್ರಕಾರ ಹದಿನೈದು ರಾಜ್ಯಗಳಲ್ಲಿ 95% ಸಕ್ರಿಯ ಪ್ರಕರಣಗಳಿವೆ.
* ಐದು ರಾಜ್ಯಗಳಲ್ಲಿ ಅತಿ ಹೆಚ್ಚು ಸೋಂಕು.
* ಒಟ್ಟು 3.43.091 ಪ್ರಕರಣಗಳ ಪೈಕಿ 237,747 ಪ್ರಕರಣಗಳು ಐದು ರಾಜ್ಯಕ್ಕೆ ಸೇರಿದ್ದು.
* ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶದಲ್ಲಿ ಹೆಚ್ಚು ಸೋಂಕು.
* ಬಾಕಿ ಹತ್ತು ರಾಜ್ಯಗಳ 105,344 ಮಂದಿಯಲ್ಲಿ ಸೋಂಕು.
* ಈ ಐದು ರಾಜ್ಯಗಳಲ್ಲಿ 7,911 ಮಂದಿ ಕೊರೊನಾಗೆ ಬಲಿ.
ಇಂದಿನ ಸಭೆಯಲ್ಲಿ ಏನು ಚರ್ಚೆ ನಡೆಯಬಹುದು?
* ಕೊರೊನಾ ಸೊಂಕು ನಿಯಂತ್ರಣ ಸಂಬಂಧ ಚರ್ಚೆ.
* ಸದ್ಯದ ಅಂಕಿ ಸಂಖ್ಯೆ ಪರಿಸ್ಥಿತಿಗಳ ಬಗ್ಗೆ ಅವಲೋಕನ.
* ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶ ಹೆಚ್ಚು ಆದ್ಯತೆ.
* ಸೋಂಕು ಹೆಚ್ಚು ಕಾಣಿಸಿಕೊಳ್ಳುತ್ತಿರುವ ಕಾರಣ ಟೆಸ್ಟಿಂಗ್ ಹೆಚ್ಚು ಮಾಡುವ ಬಗ್ಗೆ ಚರ್ಚೆ ನಡೆಯಬಹುದು.
* ಕೇಂದ್ರದಿಂದ ವೈದ್ಯಕೀಯ ನೆರವು ನೀಡುವ ಬಗ್ಗೆ ಮಾತುಕತೆ.
* ಟೆಸ್ಟಿಂಗ್ ಕಿಟ್, ವೆಂಟಿಲೇಟರ್, ಆಕ್ಸಿಜನ್ ಕಿಟ್, ಪಿಪಿಇ ಕಿಟ್ ಮತ್ತು ಇತರೆ ವೈದ್ಯಕೀಯ ಸೌಲಭ್ಯಗಳ ಬಗ್ಗೆ ಚರ್ಚೆ.
* ಆಸ್ಪತ್ರೆಗಳ ಕೊರತೆ ಹಿನ್ನೆಲೆ ರೈಲ್ವೆ ಕೋಚ್ ಗಳನ್ನು ನೀಡುವ ಬಗ್ಗೆ ಸಮಾಲೋಚನೆ.
* ಸಾವುಗಳನ್ನು ತಡೆಯುವ ನಿಟ್ಟಿನಲ್ಲಿ ಪರ್ಯಾಯ ಮಾರ್ಗಗಳ ಬಗ್ಗೆ ಚರ್ಚೆ.
ರಾಜ್ಯಗಳು ಏನು ಡಿಮ್ಯಾಂಡ್ ಮಾಡಬಹುದು?
* ಎರಡನೇ ಹಂತದ ಅನ್ ಲಾಕ್ ವಿನಾಯತಿ ಸಂಬಂಧ ಚರ್ಚೆ ನಡೆಯಬಹುದು.
* ಜಿಮ್, ಸ್ವಿಮೀಂಗ್ ಫೂಲ್, ಸಿನಿಮಾ ಮಂದಿರ, ಶಾಲೆ ಕಾಲೇಜು, ಮೆಟ್ರೋಗಳನ್ನು ಪುನಾರಂಭಿಸಲು ಮನವಿ ಮಾಡಬಹುದು.
* ನೈಟ್ ಕಫ್ರ್ಯೂ ರದ್ದು, ಬಾರ್ ರೆಸ್ಟೊರೆಂಟ್ ಹೋಟೇಲ್ ಗಳ ಮೇಲಿರುವ ಷರತ್ತುಗಳನ್ನು ಮತ್ತಷ್ಟು ಸಡಿಲಗೊಳಿಸುವ ಬಗ್ಗೆ ಸಿಎಂಗಳು ಮನವಿ ಮಾಡಬಹುದು.
* ವಲಸೆ ಕಾರ್ಮಿಕರ ವಿಚಾರ ಸಂಬಂಧ ಸುಪ್ರೀಂಕೋರ್ಟ್ ಆದೇಶ ಪಾಲನೆ ಬಗ್ಗೆ ಚರ್ಚೆ ನಡೆಯಬಹುದು.
* ಶಾಲೆ ಕಾಲೇಜುಗಳು ಆರಂಭಿಸುವ ಬಗ್ಗೆ ಕೇಂದ್ರ ಸರ್ಕಾರವೇ ನಿರ್ಧಾರ ತೆಗೆದುಕೊಳ್ಳಲು ಬಿಟ್ಟು ಕೊಡಬಹುದು.