ರಾಜ್ಯ ಸರ್ಕಾರದ ಪ್ರಕಾರ ೦ಸೋಂಕು ಬೆಳಗಾವಿ ಜಿಲ್ಲೆಯ ಹೆಲ್ತ್ ಬುಲೆಟಿನ್ ಪ್ರಕಾರ 12 …!???

Spread the love

ಬೆಂಗಳೂರು – ರಾಜ್ಯ ಆರೋಗ್ಯ ಇಲಾಖೆ ಇಂದು ಬಿಡುಗಡೆ ಮಾಡಿರುವ ಬುಲಿಟಿನ್ ನಲ್ಲಿ ರಾಜ್ಯದಲ್ಲಿ 267 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ತಿಳಿಸಿದೆ.

ಇದರಿಂದಾಗಿ ಕರ್ನಾಟಕದಲ್ಲಿ ಒಟ್ಟೂ 4063 ಜನರಿಗೆ ಸೋಂಕು ತಗುಲಿದಂತಾಗಿದೆ.

ಇದರಲ್ಲಿ ಕಲಬುರಗಿಯಲ್ಲಿ 105, ಉಡುಪಿಯಲ್ಲಿ 62, ರಾಯಚೂರಿನಲ್ಲಿ 35, ಬೆಂಗಳೂರು ನಗರದಲ್ಲಿ 20 ಜನರಿಗೆ ಸೋಂಕು ತಗುಲಿರುವುದಾಗಿ ತಿಳಿಸಲಾಗಿದೆ. ಬೆಳಗಾವಿಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ.

ಆದರೆ ಬೆಳಗಾವಿ ಜಿಲ್ಲಾ ಆರೋಗ್ಯ ಇಲಾಖೆ ನೀಡಿರುವ ಮಾಹಿತಿಯಲ್ಲಿ ಬೆಳಗಾವಿ ತಾಲೂಕಿನಲ್ಲಿ ಇಂದು 12 ಜನರಿಗೆ ಕೊರೋನಾ ಸೋಂಕು ತಗುಲಿರುವುದಾಗಿ ತಿಳಿಸಲಾಗಿದೆ.

ಇಂದು ಸೋಂಕು ಪತ್ತೆಯಾದ 267 ಜನರ ಪೈಕಿ 34 ಜನರನ್ನು ಹೊರತುಪಡಿಸಿದರೆ ಉಳಿದವರೆಲ್ಲ ಮಹಾರಾಷ್ಟ್ರದಿಂದ ಹಿಂತಿರುಗಿದವರೇ ಆಗಿದ್ದಾರೆ


Spread the love

About Laxminews 24x7

Check Also

ಅಜಿತ್ ಪವಾರ್ ಅವರದ್ದು ವಿಮಾನ ದುರಂತವಲ್ಲ ವ್ಯವಸ್ಥಿತ ಕೊಲೆ – ಬೆಂಗಳೂರಲ್ಲಿ ಝೀರೋ ಎಫ್‌ಐಆರ್‌ ದಾಖಲು

Spread the loveಬೆಂಗಳೂರು: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ವಿಮಾನ ದುರಂತ ಪ್ರಕರಣ ಮತ್ತೆ ಮುನ್ನಲೆಗೆ ಬಂದಿದೆ. ಅಜಿತ್ ಪವಾರ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ