ಬೆಂಗಳೂರು: ಮೂರು ದಿನಗಳ ಹಿಂದೆ ಬೆಂಗಳೂರು ಖಾಲಿ ಮಾಡಿದ್ದ ಜನ ಇದೀಗ ಮತ್ತೆ ರಾಜಧಾನಿಗೆ ಮುಖಮಾಡಿದ್ದಾರೆ. ಪರಿಣಾಮ ಸಂಜೆಯಿಂದ ತುಮಕೂರು ರಸ್ತೆಯಲ್ಲಿ ಫುಲ್ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಸಂಜೆ 7 ಗಂಟೆಯ ಒಳಗಡೆ ಮನೆ ಸೇರಬೇಕಾದ ಹಿನ್ನೆಲೆಯಲ್ಲಿ ನೆಲಮಂಗಲ ಟೋಲ್ ಬಳಿ ಕಿಲೋಮೀಟರ್‌ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿತ್ತು. ಇನ್ನೊಂದು ಕಡೆ ಉತ್ತರ ಭಾರತ ಕಾರ್ಮಿಕರು ಬೆಂಗಳೂರು ಬಿಟ್ಟು ದೊಡ್ಡ ಸಂಖ್ಯೆಯಲ್ಲಿ ತಮ್ಮೂರುಗಳಿಗೆ ತೆರಳುವುದು ಮುಂದುವರಿದಿದೆ.
ಇವತ್ತು ಕೂಡ ಮಿಜೋರಾಂ, ಒಡಿಶಾ ರಾಜ್ಯಗಳಿಗೆ ತೆರಳಲು ಸಾವಿರಾರು ಕಾರ್ಮಿಕರು ಅರಮನೆ ಮೈದಾನದಲ್ಲಿ ಜಮಾಯಿಸಿದ್ರು. ಯಾರೂ ಸಾಮಾಜಿಕ ಅಂತರ ಪಾಲಿಸಿದ್ದು ಕಂಡು ಬರಲಿಲ್ಲ. ಎಲ್ಲರೂ ರೈಲು ಹತ್ತಲು ಅವಕಾಶ ಸಿಕ್ಕಿದರೆ ಸಾಕು ಅಂತಾ ನೋಂದಣಿ ಮಾಡಿಸಿಕೊಳ್ಳಲು ಮುಗಿಬಿದ್ದಿದ್ದರು.
ಇತ್ತ ಹಾಸನದಲ್ಲೂ ವಲಸೆ ಕಾರ್ಮಿಕರು ಊರುಗಳಿಗೆ ತೆರಳಲು ನೋಂದಣಿ ಮಾಡಿಸಲು ಪರದಾಡಿದರು. ಸರಿಯಾದ ಮಾಹಿತಿ ಸಿಗದೇ ಲಗೇಜ್ ಸಮೇತ ಬಂದಿದ್ದವರು ಒಂದು ಕಿಲೋ ಮೀಟರ್ ಕ್ಯೂ ನಿಂತಿದ್ರು. ಮಕ್ಕಳು, ವೃದ್ಧರು ಬಸವಳಿದುಹೋಗಿದ್ದರು.