ಕಿಚ್ಚ ಸುದೀಪ್ ಅವರು ಡಾ ರಾಜ್‌ಕುಮಾರ್ () ಬಗ್ಗೆ ಮಾತನ್ನಾಡಿದ್ದಾರೆ. ಅವರು ಅಣ್ಣಾವ್ರ ಬಗ್ಗೆ ಅದೇನು ಹೇಳಿದ್ದಾರೆ ಅನ್ನೋದು ಇಲ್ಲಿದೆ. ಜೊತೆಗೆ, ಅವರು ಹೇಳಿದ್ದು ಯಾವಾಗಲೋ ಇರಬಹುದು. ಆದರೆ ಅದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಹಾಗಿದ್ದರೆ ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್ ಅವರು ಮೇರುನಟ ಡಾ ರಾಜ್‌ಕುಮಾರ್ ಬಗ್ಗೆ ಅದೇನು ಹೇಳಿದ್ದಾರೆ? ಬಹುಶಃ ನೀವು ಊಹಿಸಿರಲಿಕ್ಕೂ ಸಾಧ್ಯವಿಲ್ಲ. ಅಂತಹ ಮಾತನ್ನು ಸುದೀಪ್ ಹೇಳಿದ್ದಾರೆ. ಅದಕ್ಕೆ ತುಂಬಾ ಮೆಚ್ಚುಗೆಯ ಕಾಮೆಂಟ್ಸ್ ಸುರಿಮಳೆ ವಿಭಿನ್ನ ರೀತಿಯಲ್ಲಿ ಆಗುತ್ತಿದೆ.
ಕಿಚ್ಚ ಸುದೀಪ್ ‘ಬಹುಶಃ ಸಿಂಪ್ಲಿಸಿಟಿ ಅನ್ನೋದು ಹುಟ್ಟಿದ್ದೇ ಆ ಮಹಾನ್ ವ್ಯಕ್ತಿಯಿಂದ ಅನ್ಸುತ್ತೆ. ನನ್ನ ಸಿನಿಮಾಗಳನ್ನು ನೋಡಿ ನನಗೆ ಅವರು ಮುತ್ತು ಕೊಟ್ಟಿದ್ದು, ಆನಂದಭಾಷ್ಪ ಸುರಿಸಿದ್ದನ್ನು ನಾನೆಂದಿಗೂ ಮರೆಯಲಾರೆ. ಎಂದೂ ಅಷ್ಟು ಸಲುಭವಾಗಿ ಕಣ್ಣಿರು ಹಾಕದ ನಾನು ಅವರ ಮೆಚ್ಚುಗೆಯ ಮಾತುಗಳಿಂದ ಅಂದು ನನಗೂ ಅಳು ಬಂದಿತ್ತು. ಅಂಥವರನ್ನ ನೋಡೋಕೆ ಸಿಗೋದೇ ಅಪರೂಪ. ‘ಓಂ’ ಚಿತ್ರದ ಓಂ ಬ್ರಹ್ಮಾನಂದ ಓಂಕಾರ..’ ಹಾಡು ನನಗೆ ತುಂಬಾ ಇಷ್ಟವಾದದ್ದು. ಸ್ಟಿರಿಯೋ ಸೌಂಡ್ ಸಿಸ್ಟಮ್ ಕಾಲದಲ್ಲೇ ಅಣ್ಣಾವ್ರ ಆ ಹಾಡು, ಅವರ ಆ ಟೋನ್ ಅತ್ಯದ್ಭುತವಾಗಿತ್ತು. ಈಗಿನ ರೀತಿ ಡಿಟಿಎಸ್, ಇತರೆ ತಾಂತ್ರಕತೆ ಇದ್ದಿದ್ದರೆ ಬಹುಶಃ ಥಿಯೇಟರ್ ಕಿರ್ಕೊಂಡು ಹೋಗಿರ್ತಿತ್ತು’ ಎಂದಿದ್ದಾರೆ ಕಿಚ್ಚ ಸುದೀಪ್.