ಪ್ರತಿಷ್ಠಿತ ಮಠದ ಕಾವಿ ಕಾಮಿಯ ಕಾಮದಾಟ ಬಯಲಾಗಿದ್ದು, ಅನಾದಿಕಾಲದಿಂದಲೂ ಮಠವನ್ನು ನಂಬಿದ್ದ ಭಕ್ತವರ್ಗದಲ್ಲಿ ಭಾರಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿದೆ.
ಅಣ್ಣಿಗೇರಿ ತಾಲೂಕಿನ ನಲವಡೆ ಸಮೀಪದ ಮನಕವಾಡ ಗ್ರಾಮದಲ್ಲಿ ಈ ನಡೆಯಬಾರದ ಘಟನೆ ನಡೆದು ಹೋಗಿದೆ.
ಮಹಿಳೆಯೊಂದಿಗಿನ ಕಾಮದಾಟ ವಿಡಿಯೋ ವೈರಲ್ ಆಗಿದ್ದು, ಪಡ್ಡೆ ಹುಡುಗರ ಮೊಬೈಲ್ ನಲ್ಲಿ ಈಗ ಇದು ಹವಾ ಸೃಷ್ಟಿಸಿದೆ.

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮಠಾಧೀಶರ ಕಾಮದಾಟ ಈಗ ಮಳೆಯಲ್ಲಿ ಅಬ್ಬರವಾಗಿ ಸಾಗಿದ್ದು, ಗುಡುಗು ಮಳೆಯನ್ನೇ ಮೀರಿಸುವಂತಿದೆ.
ಪ್ರತಿಷ್ಠಿತ ಮಠದ ಸ್ವಾಮಿಜೀಯ ಕಾಮದ ವಿಡಿಯೋ ಆಗಿರುವುದರಿಂದ ಇದು ವ್ಯಾಪಕವಾಗಿ ಸುದ್ದಿಗೆ ಗ್ರಾಸವಾಗಿದೆ.ಮಹಿಳೆಯೊಂದಿಗೆ ಮತ್ತೊಬ್ಬ ಸ್ವಾಮಿಯ ೧೫ ನಿಮಿಷ ಸಂಭಾಷಣೆಯ ಆಡಿಯೋ ಕೂಡ ವೈರಲ್ ಸನ್ನಿವೇಶವಿದೆ.ಕಾಮಿ ಸ್ವಾಮಿಗಳ ಕಾಮದ ಆಡಿಯೋ, ವಿಡಿಯೋ ವೈರಲ್ ಸದ್ದಿನಾಟಕ್ಕೆ ಭಕ್ತವಲಯ ಬೆಚ್ಚಿ ಬಿದ್ದಿದೆ.
ಆಡಿಯೋದಲ್ಲಿ ಮೂರು ಮಠಾಧೀಶರ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. ಮಾಂಸ, ಮದ್ಯ ಸೇವನೆ ಬಗ್ಗೆಯೂ ಉಲ್ಲೇಖ ಇದೆ.
ಸ್ವಾಮೀಜಿ ಮಠದಲ್ಲಿಯೇ ಇದ್ದು,ಎಲ್ಲಿಯೂ ಹೋಗಿಲ್ಲ.ಯಾರೇ ಬಂದ್ರೂ ನಾ ಸ್ಪಷ್ಟೀಕರಣ ಕೊಡ್ತಿನಿ ಅಂತಿದಾರೆ ಮನಕವಾಡ ಸ್ವಾಮೀಜಿ.
Laxmi News 24×7