ಶಿರಗುಪ್ಪಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಸಂಸದರ ಕಟ್ಟಡ ಕಾರ್ಮಿಕರ ಅನುದಾನದಲ್ಲಿ ಮಂಜೂರಾದ ಸಂತ್ರಸ್ತರಿಗೆ ಆಹಾರ ಧಾನ್ಯಗಳ ಕಿಟ್ಟನ್ನು ರಾಜ್ಯ ಸರ್ಕಾರದ ಜವಳಿ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವರಾದ ಸನ್ಮಾನ್ಯ ಶ್ರೀ ಶ್ರೀಮಂತ ಪಾಟೀಲ ಅವರು ಹಾಗೂ ವಿಧಾನ ಪರಿಷತ್ ಮುಖ್ಯ ಸಚೇತಕರಾದ ಮಾನ್ಯ ಶ್ರೀ ಮಹಾಂತೇಶ ಕವಟಗಿಮಠ ಅವರ ನೇತೃತ್ವದಲ್ಲಿ ವಿತರಿಸಲಾಯಿತ್ತು.
ಈ ಸಮಯದಲ್ಲಿ ಶಿರಗುಪ್ಪಿ ಗ್ರಾಮದ ಮುಖಂಡರು ಪ್ರೀತಿಯಿಂದ ಮಾಡಿದ ಸನ್ಮಾನವನ್ನು ಸಚಿವರು ಸ್ವೀಕರಿಸಿದರು.
ಈ ಸಮಯದಲ್ಲಿ ಮುಖಂಡರಾದ ಶ್ರೀ ಅಭಯಕುಮಾರ ಅಕ್ಕಿವಾಟೆ, ಶ್ರೀ ಶಿವಾನಂದ ಪಾಟೀಲ, ಶ್ರೀ ರಾಮಗೊಂಡ ಪಾಟೀಲ, ಶ್ರೀ ಇಕ್ಬಾಲ ಕನವಡೆ, ಶ್ರೀಮತಿ ಸುನಂದಾ ನಾಂದನಿ, ಶ್ರೀ ದಾದಾ ಪಾಟೀಲ, ಶ್ರೀ ವಿನಾಯಕ ಬಾಗಡಿ, ಶ್ರೀ ಅಣ್ಣಾಸಾಬ ಪಾಟೀಲ, ಶ್ರೀ ತಮಣ್ಣಾ ಪಾರಶೆಟ್ಟಿ, ಶ್ರೀ ಮಹಾವೀರ ಕಾತ್ರಾಳೆ, ಶ್ರೀ ಸುಭಾಸ ಮೋನೆ, ಶ್ರೀ ಬಮಣ್ಣ ಚೌಗಲಾ ಹಾಗೂ ಹಲವಾರು ಮುಖಂಡರು, ಗ್ರಾಮಸ್ಥರು ಕಾರ್ಯಕರ್ತರು ಉಪಸ್ಥಿತರಿದ್ದರು