Breaking News

ಜನರು ಆತಂಕ ಪಡುವ ಅಗತ್ಯವಿಲ್ಲ: ಸಚಿವ ರಮೇಶ ಜಾರಕಿಹೊಳಿ

Spread the love

ಗೋಕಾಕ : ಎಲ್ಲೆಡೆ ಹರಡುತ್ತಿರುವ ಮಾರಕ ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಪ್ರಧಾನಮಂತ್ರಿ ‌ನರೇಂದ್ರ ಮೋದಿಯವರು ಭಾರತದ ಲಾಕ್ ಡೌನ್ ಅವಧಿಯನ್ನು ಮೇ 3ರ ವರೆಗೆ‌ ವಿಸ್ತರಿಸಿರುವುದನ್ನು‌ ನಾನು‌ ಸ್ವಾಗತಿಸುತ್ತೇನೆ.ಸೊಂಕು ನಿಯಂತ್ರಣಕ್ಕೆ ಹಗಲಿರುಳು ಶ್ರಮಿಸುತ್ತಿರುವ ಕೊರೋನಾ ವಾರಿಯರ್ಸ್‌ ಗಳನ್ನು ಮುಕ್ತಕಂಠದಿಂದ ಗೌರವಿಸೋಣ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು, ವಿಶ್ವವ್ಯಾಪಿಯಾಗಿರುವ ಕೊರೊನಾ ವೈರಸ್ ನ್ನು ನಿರ್ಮೂಲನೆ ಮಾಡುವುದೇ ನಮ್ಮ ಆದ್ಯ ಧ್ಯೇಯವಾಗಬೇಕು. ಪ್ರಪಂಚದ ಬಹುದೊಡ್ಡ ದೇಶಗಳೇ ಇಂದು‌ ಕೊರೊನಾ ಸೋಂಕಿ ನಿಂದ ತತ್ತರಿಸಿರುವಾಗ, ನಾವು ಲಾಕ್ ಡೌನ್ ನಿಯಮಗಳನ್ನು‌ ಪಾಲಿಸಿ ಸೋಂಕು ಮುಕ್ತ ಸಮಾಜವನ್ನು ನಿರ್ಮಿಸಬೇಕಾಗಿದೆ.

ಹಾಗಾಗಿ‌ ನಾವು ಎಲ್ಲರೂ ಸಾಮಾಜಿಕ ‌ಅಂತರ ಕಾಯ್ದು ಕೊಂಡು, ಮನೆಯಲ್ಲಿಯೇ ಇದ್ದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಕೊಳ್ಳೋಣ. ಬಡವರಿಗೆ, ಅಶಕ್ತರಿಗೆ ಸಹಾಯ ‌ಮಾಡೋಣ.‌ ಆರೋಗ್ಯ ಸೇತು ಮೊಬೈಲ್ ಆ್ಯಪ್‌ ನ್ನು ಡೌನ್ ಲೋಡ್ ಮಾಡಿಕೊಳ್ಳುವಂತೆ ಅರಿವು ಮೂಡಿಸೋಣ.‌

ದಿನನಿತ್ಯದ ಜೀವನಕ್ಕೆ ಅವಶ್ಯಕವಾದ ‌ವಸ್ತುಗಳು ಸಿಗುವಂತೆ ನಮ್ಮ ಸರ್ಕಾರವು ಕ್ರಮವಹಿಸಿದ್ದು, ಜನರು ಆತಂಕ ಪಡುವ ಅಗತ್ಯವಿಲ್ಲ. ಸಾಮಾಜಿಕ ಅಂತರ ಕಾಪಾಡಿಕೊಂಡು‌ ಮನೆಯೊಳಗೆ ಇದ್ದು ಕೊರೋನಾ ಸೋಂಕು ಹರಡುವಿಕೆಯನ್ನು ತಡೆಗಟ್ಟೋಣ.


Spread the love

About Laxminews 24x7

Check Also

ಇವತ್ತು ನೀರು ಕಡಿಮೆಯಾಗುತ್ತೆ:ಉಪವಿಭಾಗಧಿಕಾರಿ ಸುಭಾಷ ಸಂಪಗಾವಿ ನದಿತೀರದ ಜನರಲ್ಲಿ ಅಭಯ

Spread the love ಇವತ್ತು ನೀರು ಕಡಿಮೆಯಾಗುತ್ತೆ:ಉಪವಿಭಾಗಧಿಕಾರಿ ಸುಭಾಷ ಸಂಪಗಾವಿ ನದಿತೀರದ ಜನರಲ್ಲಿ ಅಭಯ ಚಿಕ್ಕೋಡಿ: ಕೃಷ್ಣಾ ಸೇರಿದಂತೆ ದೂಧಗಂಗಾ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ