ಗೋಕಾಕ : ಒಂದೆಡೆ ಮಾರಕ ಕೊರೊನಾ ಸೋಂಕು ಅಟ್ಟಹಾಸ ಮುಂದುವರೆದರೆ ಮತ್ತೊಂದೆಡೆ ಬೇಸಿಗೆಯಿಂದ ಪ್ರಾಣಿ, ಪಕ್ಷಿಗಳು ಆಹಾರ ಸಿಗದೆ ಸಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಾಣಿ ಪಕ್ಷಿಗಳಿಗೆ ಆಹಾರ ಸಿಗುವಂತೆ ನೋಡಿಕೊಳ್ಳಬೇಕು ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಮಾರಕ ಕೊರೊನಾ ಸೋಂಕು ಎಲ್ಲೆಡೆ ಭೀತಿ ಹುಟ್ಟಿಸುತ್ತಿದೆ. ಬೇಸಿಗೆಯ ಬಿಸಿಲ ಬೇಗೆ ಮತ್ತು ಲಾಕ್ ಡೌನ್ ಪರಿಣಾಮಗಳಿಂದ ಬೆಕ್ಕುಗಳು, ನಾಯಿಗಳು, ಇತರ ಪಶುಗಳು ಹಾಗೂ ಪಕ್ಷಿಗಳು ನೀರು ಮತ್ತು ಆಹಾರ ಸಿಗದೇ ತತ್ತರಿಸುತ್ತಿವೆ. ನಗರಗಳಲ್ಲಿ ಇದರ ಪರಿಣಾಮ ಇನ್ನೂ ಗಂಭೀರವಾಗಿದೆ. ಹಾಗಾಗಿ, ಬೀದಿ ಬದಿಯಲ್ಲಿರುವ ದನ, ಆಕಳುಗಳಿಗೆ, ನಾಯಿಗಳಿಗೆ ಮತ್ತು ಪಕ್ಷಿಗಳಿಗೆ ನೀರು, ಆಹಾರ ಸಿಗುವಂತೆ ನೋಡಿಕೊಳ್ಳಬೇಕು ಎಂದಿದ್ದಾರೆ