Breaking News

ನಟಿ ರಮ್ಯಾ ಕೃಷ್ಣ ಕಾರಿನಲ್ಲಿ 96 ಬಿಯರ್​, 8 ಲಿಕ್ಕರ್​ ಬಾಟಲಿ ಪತ್ತೆ; ವಶಪಡಿಸಿಕೊಂಡ ಪೊಲೀಸರು

Spread the love

ಕನ್ನಡ, ತಮಿಳು, ತೆಲುಗಿನ ಅನೇಕ ಸಿನಿಮಾದಲ್ಲಿ ನಟಿಸಿ ಖ್ಯಾತಿಗಳಿಸಿರುವ ರಮ್ಯಾ ಕೃಷ್ಣ ಅವರ ಕಾರಿನಲ್ಲಿ ಮದ್ಯದ ಬಾಟಲಿ ಸಿಕ್ಕಿದ್ದು, ತಮಿಳುನಾಡಿನ ಕಾನತ್ತೂರು ಪೊಲೀಸರು ವಶಕೊಂಡಿರುವ ಘಟನೆ ನಡೆದಿದೆ.
ರಮ್ಯಾ ಕೃಷ್ಣ ಮತ್ತು ಅವರ ತಂಗಿ ವಿನಯ​ ಕೃಷ್ಣ ತಮ್ಮ ಇನೋವಾ ಕಾರಿನಲ್ಲಿ ಮಹಾಬಲಿಪುರಂನಿಂದ ಹಿಂತಿರುಗುತ್ತಿದ್ದರು.  ಮುತ್ತುಕಾಡು ಚೆಕ್​ಪೋಸ್ಟ್​ನಲ್ಲಿ ಪೊಲೀಸರು ತಪಾಸಣೆ ಮಾಡಿದ್ದಾರೆ. ಈ ವೇಳೆ ಕಾರಿನಲ್ಲಿ 96 ಬಿಯರ್​ ಬಾಟಲ್ ಸೇರಿದಂತೆ 8 ಲಿಕ್ಕರ್​ ಬಾಟಲಿ ಸಿಕ್ಕಿದ್ದು, ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇನ್ನೂ ಕಾರಿನಲ್ಲಿ ಮದ್ಯವನ್ನು ತೆಗೆದುಕೊಂಡು ಹೋಗುತ್ತಿದ್ದ ಕಾರಣಕ್ಕೆ ರಮ್ಯಾ ಕೃಷ್ಣ ಅವರ ಕಾರಿನ ಚಾಲಕ ಸೆಲ್ವಕುಮಾರ್​​ನನ್ನು ಪೊಲೀಸರು ಬಂಧಿಸಿದ್ದಾರೆ. ನಂತರ ಚಾಲಕನನ್ನು ರಮ್ಯಾಕೃಷ್ಣ ಅವರು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಸದ್ಯ ಕೊರೋನಾ ವೈರಸ್​ ನಿಯಂತ್ರಿಸುವ ದೃಷ್ಠಿಯಿಂದ ಚೆನ್ನೈ ಪೊಲೀಸರು ತಪಾಸಣೆಯನ್ನು ತೀವ್ರಗೊಳಿಸಿದ್ದಾರೆ. ಲಾಕ್​ಡೌನ್​ ಸಡಿಲಗೊಂಡಿದ್ದರು ಜನರು ಲಿಕ್ಕರ್​ಗಾಗಿ ಚೆನ್ನೈ ಸಿಟಿಗಳಿಗೆ ತೆರಳುತ್ತಿದ್ದಾರೆ. ಹಾಗಾಗಿ ಅಲ್ಲಿನ ಪೊಲೀಸರು ಟೋಲ್​ ಪ್ಲಾಜಾಗಳಲ್ಲಿ ವಾಹನಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಈ ವೇಳೆ ನಟಿ ರಮ್ಯಾ ಕೃಷ್ಣ ಅವರ ಇನೋವಾ ಕಾರನ್ನು ಪರಿಶೀಲಿಸುತ್ತಿದ್ದ ವೇಳೆ ಮದ್ಯದ ಬಾಟಲಿಗಳು ದೊರೆತಿವೆ.


Spread the love

About Laxminews 24x7

Check Also

ಈಗ 41 ದೇಶಗಳಿಂದ ಇಂಧನ ಅಮದು, ಗಲ್ಫ್‌ನಲ್ಲಿರುವ ಪ್ರತಿಯೊಬ್ಬ ಭಾರತೀಯನ ಸುರಕ್ಷತೆ ನಮಗೆ ಮುಖ್ಯ: ಮೋದಿ

Spread the loveದೆಹಲಿ: ಈಗ ನಾವು 41 ದೇಶಗಳಿಂದ ಇಂಧನವನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ