ರಾಮದುರ್ಗ :ನಿತ್ಯ ಗ್ರಾಮದಲ್ಲಿ ಸರಾಯಿ ಕುಡಿತದಿಂದ ಸಾಕಷ್ಟು ಕುಟುಂಬದಲ್ಲಿ ಕಲಹಗಳು ಉಂಟಾಗಿ ಶಾಂತಿ ನೆಮ್ಮದಿ ಇಲ್ಲದೆ ಜೀವನ ಮಾಡುವುದು ಕಠಿಣವಾಗಿದೆ. ಇದರಿಂದ ಹೆಂಡಿರ ಮಕ್ಕಳ ಭವಿಷ್ಯದಲ್ಲಿ ಸಂತೋಷದ ಜೀವನ ನಡೆಸುವುದು ಕಷ್ಟಕರವಾದ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಆರೋಪಿಸಿ ಇವತ್ತು
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮನಿಹಾಳ ಸುರೇಬಾನ ಗ್ರಾಮದಲ್ಲಿ ಮದ್ಯದ ಅಂಗಡಿ ಬಂದ್ ಮಾಡಿಸಿ ಎಂದು ರೈತ ಸಂಘ, ಮಹಿಳಾ ಸಂಘ ಗಳಿಂದ ಒತ್ತಾಯಿಸಲಾಯಿತು…
ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ರೈತ ಸಂಘದ ಅಧ್ಯಕ್ಷ ಶ್ರೀ ಬಸವರಾಜ ವಿ,ಕರಿಗಾರ ಮಾತನಾಡಿ ಸರಾಯಿ ಮುಕ್ತ ಗ್ರಾಮಮಾಡಬೇಕು ಅಂತಾ ನಮ್ಮ ಉತ್ತರ ಕರ್ನಾಟಕ ಭಾಗದಿಂದ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳುತ್ತಾ ಬಂದಿದೆವೆ ಇದನ್ನು ಸರ್ಕಾರ ಆದಷ್ಟೂ ಬೇಗ ಈಡೇರಿಸಬೇಕು ಇಲ್ಲದಿದ್ದರೆ ಇದು ಇನ್ನೂ ಉಗ್ರವಾದ ರೂಪ ಪಡೆದುಕೊಳ್ಳುತ್ತದೆ ಎಂದರು
ಈ ಸಂದರ್ಭದಲ್ಲಿ ರೈತ ಮಹಿಳೆಯರಾದ ಗಂಗಮ್ಮ ಬನಸೋಡಿ,ಯಲ್ಲಮ್ಮ ಮೋಟೆ, ಗೀರಿಜ್ಜವ್ವಾ ಶೇಲಿಕೇರಿ,ಮಲ್ಲವ್ವಾ ನೇಸರಗಿ,ಯಲ್ಲವ್ವ ಹನಮನೇರಿ, ಸಾವಿತ್ರಿ ಭಜಂತ್ರಿ,ಮುಂತಾದವರು ಹಾಜರಿದ್ದರು