Breaking News

ಕೊರೋನಾ: ಭಾರತದ ಸಹಾಯ ಕೇಳಿದ ಪಾಕಿಸ್ತಾನ..!

Spread the love

ಪಾಕಿಸ್ತಾನದಲ್ಲೂ ಕೂಡ ಕೊರೋನಾ ವೈರಸ್ ಹಾವಳಿ ಮಿತಿ ಮೀರುತ್ತಿದೆ. ಹೀಗಾಗಿ ಪಾಕಿಸ್ತಾನದ ಇಮ್ರಾನ್ ಖಾನ್ ಸರ್ಕಾರ ಭಾರತದ ಬಳಿ HCQ ಅಥವಾ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಕೊಟ್ಟು ಸಹಾಯ ಮಾಡಿ ಅಂತ ಕೇಳಿಕೊಂಡಿದೆ. ಪಾಕಿಸ್ತಾನ ಈ ಕಾಯಿಲೆ ವಿರುದ್ಧ ಹೋರಾಡಲು ಸಾಧ್ಯವಾಗದೇ ಒದ್ದಾಡುತ್ತಿದೆ. ಅಲ್ಲಿ ಸರಿಯಾಗಿ ಚಿಕಿತ್ಸೆಗೆ ಬೇಕಾದ ಔಷಧಿ ಇಲ್ಲ, ಅಗತ್ಯ ಸಾಮಗ್ರಿ ಕೂಡ ಇಲ್ಲ. ಈಗಾಗಲೇ 6 ಸಾವಿರಕ್ಕೂ ಅಧಿಕ ಜನ ಪಾಕಿಸ್ತಾನದಲ್ಲಿ ಈ ಕಾಯಿಲೆಗೆ ತುತ್ತಾಗಿದ್ದಾರೆ. ಇದು ಅಧಿಕೃತ ಸರ್ಕಾರಿ ಲೆಕ್ಕ. ಆದರೆ ವಿಶ್ವ ಸಮುದಾಯಕ್ಕೆ, ಬರೀ 6000 ಅಲ್ಲ! ಪಾಕಿಸ್ತಾನದಲ್ಲಿ ಇದಕ್ಕೂ ಹಲವು ಪಟ್ಟು ಹೆಚ್ಚಿನ ಜನ ಕಾಯಿಲೆ ಪೀಡಿತರಾಗಿದ್ದಾರೆ ಎನ್ನುವ ಅನುಮಾನವಿದೆ. ಅಷ್ಟು ಗಂಭೀರ ಪರಿಸ್ಥಿತಿ ಇದೆ ನಮ್ಮ ಪಕ್ಕದ ದೇಶದಲ್ಲಿ
ಹೀಗಾಗಿ ಈಗ ಕಡೆಯದಾಗಿ ಪಾಕಿಸ್ತಾನ ಭಾರತದ ಬಳಿ ಔಷಧಿಗಳನ್ನು ಪೂರೈಸುವಂತೆ ಕೇಳಿಕೊಂಡಿದೆ.

ಹೈಡ್ರಾಕ್ಸಿಕ್ಲೋರೋಕ್ವಿನ್ ಮಲೇರಿಯಾ ಕಾಯಿಲೆ ಬಂದಾಗ ಬಳಸುವ ಔಷಧಿ. ಇದೀಗ ಬಂದಿರುವ ಕೊರೋನಾ ವೈರಸ್ ಚಿಕಿತ್ಸೆಗೂ ಈ ಔಷಧಿಯ ಬಳಕೆ ವಿಶ್ವಾದ್ಯಂತ ನಡೆಯುತ್ತಿದೆ. ತೀರ ಇತ್ತೀಚೆಗಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನ ಪೂರೈಸುವಂತೆ ಭಾರತಕ್ಕೆ ಮನವಿ ಮಾಡಿದ್ದರು. ಭಾರತ ಅಮೆರಿಕವೂ ಸೇರಿದಂತೆ ಬ್ರೆಜಿಲ್, ಸ್ಪೇನ್, ಫ್ರಾನ್ಸ್, ಜರ್ಮನಿ, ಬ್ರಿಟನ್ ಹಾಗೂ ವಿಶ್ವದ ಹಲವು ರಾಷ್ಟ್ರಗಳಿಗೆ ಈ ಮಾತ್ರೆಗಳ ರಫ್ತಿನ ಮೇಲಿನ ನಿರ್ಬಂಧವನ್ನು ತೆಗೆದು ಹಾಕಿತ್ತು. ಅಂದರೆ ಎಲ್ಲೆಲ್ಲಿ ಕಾಯಿಲೆ ಜಾಸ್ತಿ ಇದೆಯೋ ಆ ದೇಶಗಳಿಗೆ ರಫ್ತು ಮಾಡಬಹುದು ಅಂತ ಅನುಮತಿ ಕೊಟ್ಟಿತ್ತು. ಈಗಾಗಲೇ ಅಮೆರಿಕಕ್ಕೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳ ಬಾಕ್ಸ್‌ಗಳು ತುಂಬಿದ್ದ ಒಂದು ವಿಮಾನ ಭಾರತದಿಂದ ಹಾರಿ ಆಗಿದೆ. ಈಗಾಗಲೇ ಔಷಧಿ ಅಮೆರಿಕ ತಲುಪಿದ್ದು ಅಲ್ಲಿ ರೋಗಿಗಳಿಗೆ ಬಳಸಲಾಗುತ್ತಿದೆ. ಇದಕ್ಕೆ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಧನ್ಯವಾದಗಳನ್ನೂ ಅರ್ಪಿಸಿದ್ದಾರೆ. ಈ ನಡುವೆ ಪಾಕಿಸ್ತಾನ ಕೂಡ ಭಾರತದ ಬಳಿ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿ ಪೂರೈಸುವಂತೆ ಮನವಿ ಮಾಡಿದೆ. ಸ್ನೇಹಿತರೆ ನಿಮಗೆ ಗೊತ್ತಿರಲಿ ವಿಶ್ವದ 72 ಪರ್ಸೆಂಟ್ ‌ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳು ಉತ್ಪತ್ತಿಯಾಗುವುದು ಭಾರತದಲ್ಲೇ. ಹೀಗಾಗಿ ವಿಶ್ವದ ಬಹುತೇಕ ದೇಶಗಳು ಭಾರತದ ಬಳಿ ಈ ಔಷಧಿ ಪೂರೈಸುವಂತೆ ಮನವಿ ಮಾಡುತ್ತಿವೆ. ಅದೇ ರೀತಿ ಪಾಕಿಸ್ತಾನವೂ ಮನವಿ ಮಾಡಿದೆ. ಕಾಯಿಲೆ ಬಂದಾಗ ಇಡೀ ಮನುಕುಲಕ್ಕೆ ಬರುತ್ತದೆ. ಹೀಗಾಗಿ ಎಲ್ಲ ದೇಶಗಳು ಶತ್ರುತ್ವ ಮರೆತು ಒಂದಾಗಿ ಹೋರಾಡಬೇಕಿದೆ. ಜೊತೆಗೆ ಇದರಿಂದ ಪಾಠ ಕಲಿತು ಇನ್ನು ಮುಂದಾದರೂ ಸಹೋದರತ್ವದೊಂದಿಗೆ ಬದುಕಲು ಕಲಿಯಬೇಕಿದೆ. ಮನುಷ್ಯರಿಗೆ ಮನುಷ್ಯರು ಸಹಾಯ ಮಾಡದೆ ಇನ್ಯಾರು ಮಾಡುತ್ತಾರೆ. ಇದನ್ನು ವಿಶ್ವದ ಎಲ್ಲ ದೇಶಗಳು ಅರ್ಥಮಾಡಿಕೊಳ್ಳಬೇಕಿದೆ.


Spread the love

About Laxminews 24x7

Check Also

ವಿಶ್ವಕಪ್‌ನಲ್ಲಿಂದು 2ನೇ ಸೆಮಿ ಫೈನಲ್‌

Spread the love ಕೋಲ್ಕತ್ತಾ(ಪಶ್ಚಿಮ ಬಂಗಾಳ): ಕ್ರಿಕೆಟ್​ ಕಾಶಿ ಖ್ಯಾತಿಯ ಕೋಲ್ಕತ್ತಾದ ಈಡನ್​ ಗಾರ್ಡನ್ಸ್ ಸ್ಟೇಡಿಯಂನಲ್ಲಿ ಇಂದು ಆಸ್ಟ್ರೇಲಿಯಾ ಮತ್ತು ದಕ್ಷಿಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ