ನವದೆಹಲಿ: ಕೊರೊನಾವೈರಸ್‌ನಿಂದ ಶಂಕಿತ ಸಾವು ವರದಿಯಾಗಿದೆ, ಇದು ವೈರಸ್ ಹರಡಿದ ನಂತರದ ಭಾರತದ ಮೊದಲ ಸಾವಿನ ಪ್ರಕರಣವಾಗಿರಬಹುದು ಎನ್ನಲಾಗುತ್ತಿದೆ. ಭಾನುವಾರ ಬೆಳಿಗ್ಗೆ, ಲಡಾಖ್‌ನ ಸೋನಮ್ ನಾರ್ಬು ಆಸ್ಪತ್ರೆಗೆ ದಾಖಲಾದ ರೋಗಿಯೊಬ್ಬರು ಅನುಮಾನಾಸ್ಪದ ಪರಿಸ್ಥಿತಿಯಲ್ಲಿ ಸಾವನ್ನಪ್ಪಿದ್ದಾರೆ,ಹೀಗಾಗಿ ಅವರು ಕರೋನವೈರಸ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ.
ಲೇಹ್‌ನ ಯೌಕುಮಾ ಚೋಚುಕ್ ಗ್ರಾಮದವರಾಗಿದ್ದ 73 ವರ್ಷದ ಅಲಿ ಮೊಹಮ್ಮದ್ ಅವರು ತೀವ್ರ ಜ್ವರದಿಂದ ಮಾರ್ಚ್ 7 ರಂದು ಆಸ್ಪತ್ರೆಗೆ ದಾಖಲಾಗಿದ್ದರು, ಭಾನುವಾರ ಬೆಳಿಗ್ಗೆ ನಿಧನರಾಗಿದ್ದಾರೆ ಎನ್ನಲಾಗಿದೆ. ಲಡಾಖ್ನ ಪ್ರವಾಸೋದ್ಯಮ ಕಾರ್ಯದರ್ಶಿ ರಿಂಗ್ಜಿನ್ ಸೆಮ್ಫಾಲ್ ಅವರ ಪ್ರಕಾರ, ರೋಗಿಗೆ ಕರೋನವೈರಸ್ನ ಯಾವುದೇ ವಿಶಿಷ್ಟ ಲಕ್ಷಣಗಳಿರಲಿಲ್ಲ, ಮೂತ್ರದ ಸೋಂಕು ಮತ್ತು ಜ್ವರಕ್ಕಾಗಿ ಆಸ್ಪತ್ರೆಗೆ ಕರೆತರಲಾಯಿತು ಮತ್ತು ಅವರು ಅದೇ ಕಾರಣಗಳಿಂದ ಸಾವನ್ನಪ್ಪಿರಬಹುದು, ಸೆಮ್ಫಾಲ್ ಪ್ರಕಾರ, ಹೊಸದಾಗಿ ಬಿಡುಗಡೆಯಾದ ಕರೋನಾ ಪ್ರೋಟೋಕಾಲ್ ಅಡಿಯಲ್ಲಿ, ಮೃತ ವ್ಯಕ್ತಿಯು ಮಾದರಿ ಪರೀಕ್ಷೆಗೆ ಹೋಗಿದ್ದರು ಅಂತ ಹೇಳಿದ್ದಾರೆ.
ಆದರೆ ಮೂಲಗಳ ಪ್ರಕಾರ, ಲೇಹ್‌ನಲ್ಲಿ, ಅಲಿ ಮೊಹಮ್ಮದ್ ಅವರು ಫೆಬ್ರವರಿ 26 ರಂದು ಕರೋನಾ ಪಾಸಿಟಿವ್ ರೋಗಿಗಳಾದ ಮೊಹಮ್ಮದ್ ಹುಸೇನ್ ಮತ್ತು ಮೊಹಮ್ಮದ್ ಹಾಡಿ ಅವರೊಂದಿಗೆ ಸಂಪರ್ಕದಲ್ಲಿದ್ದರು. ಅವರು ಲೇಹ್ ವಿಮಾನ ನಿಲ್ದಾಣದ ಹವಿ ಚೆಕ್‌ನಲ್ಲಿ ವೈರಸ್ ತಪಾಸಣೆಯಲ್ಲಿ ನಕಾರಾತ್ಮಕವಾಗಿರುವುದು ಕಂಡುಬಂದಿತ್ತು, ಆ ನಂತರ ಅವರು ಮನೆಗೆ ಹೋಗಿದ್ದರು ಎನ್ನಲಾಗಿದೆ. ಮೃತ ರೋಗಿಯ ಲ್ಯಾಬ್ ಪರೀಕ್ಷಾ ಮಾದರಿಯನ್ನು ನಿರೀಕ್ಷಿಸಲಾಗಿದೆ. ಕರೋನಾ-ಸೋಂಕಿನಿಂದಾಗಿ ಸಾವು ಸಂಭವಿಸಿದೆ ಎಂದು ಪರೀಕ್ಷಾ ಫಲಿತಾಂಶಗಳಲ್ಲಿ ಸಾಬೀತಾದರೆ, ಇದು ದೇಶದ ಮೊದಲ ಕರೋನಾ ಸಾವು ಎನ್ನಲಾಗುತ್ತಿದೆ.