Breaking News

ಹೆತ್ತ ತಾಯಿಯೇ ಮಗಳಿಗೆ ನಿರಂತರವಾಗಿ ದೈಹಿಕ ಹಿಂಸೆ ನೀಡಿ ವಿಕೃತಿ ಮೆರೆದಿದ್ದಾಳೆ ಮಗುವನ್ನು ಪೊಲೀಸರ ರಕ್ಷಣೆಯಲ್ಲಿ ಮಕ್ಕಳ ಸಹಾಯವಾಣಿಗೆ ಒಪ್ಪಿಸಲಾಗಿದೆ

Spread the love

ನೆಲಮಂಗಲ : ಕೆಲಸಕ್ಕಾಗಿ ಮುಂಜಾನೆ 5.30ಕ್ಕೆಲ್ಲಾ ಹೊರಡುತ್ತಿದ್ದ ಚಂದ್ರಮ್ಮ ಮಗುವನ್ನ ಮನೆಯ ಹೊರಗೆ ಬಿಟ್ಟು ಬೀಗ ಹಾಕಿಕೊಂಡು ಹೋದರೆ ರಾತ್ರಿ ಮನೆಗೆ ಬರುತ್ತಿದ್ದಳು. ಕರೋನಾ ಹಿನ್ನಲೆಯಲ್ಲಿ ಶಾಲೆಗೆ ರಜೆ ಇರುವುದರಿಂದ ತಾನು ವಾಸವಿದ್ದು ಬಾಡಿಗೆ ಮನೆಯ ಮಾಲೀಕರ ತೋಟದಲ್ಲಿ ದನ ಕುರಿ ಮೇಯಿಸುವ ಕೆಲಸಕ್ಕೆ ಸೇರಿಸಿದ್ದಳು.ಬಾಲಕಿ ಮನೆಮಾಲೀಕರ ಮನೆ ಹಾಗೂ ಅಕ್ಕಪಕ್ಕದ ಮನೆಯವರು ಕೊಟ್ಟ ತಿಂಡಿ, ಊಟ ಮಾಡಿಕೊಂಡು ತಾಯಿ ಬರುವವರೆಗೂ ಕಾಯುತ್ತಿದ್ದಳು. ಈ ನಡುವೆ ನಿತ್ಯ ಒಂದಲ್ಲ ಒಂದು ಕಾರಣಕ್ಕೆ ಮಗುವಿಗೆ ಈಕೆ ಹಿಂಸೆ ನೀಡುತ್ತಿದ್ದಳು. ಇತ್ತೀಚೆಗೆ ಮನೆ ಮಾಲೀಕ ಮಗು ತೋಟದ ಮನೆಗೆ ಬಂದಿರುವುದಾಗಿ ತಿಳಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಚಂದ್ರಮ್ಮ ಮುದ್ದೆ ಮಾಡುವ ಕೋಲಿನಿಂದ ಮನಬಂದಂತೆ ಥಳಿಸಿದ್ದಲ್ಲದೇ, ಬೆಂಕಿಯಲ್ಲಿ ಚಾಕುವನ್ನು ಕಾಯಿಸಿ ಮುಖದ ಮೇಲೆ ಬರೆ ಎಳೆದು ವಿಕೃತಿ ಮರೆದಿದ್ದಾಳೆ.

ಈ ನೋವಿನಿಂದಾಗಿ ಮಗು ಭಯಗೊಂಡು ಅರ್ಚಕ ರಂಗಶ್ಯಾಮಾಚಾರ್ ಬಳಿ ಓಡಿ ಬಂದಿದೆ. ಈ ವಿಚಾರವನ್ನು ಬಾಲಕಿಯ ಶಾಲೆ ಶಿಕ್ಷಕರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಮಗುವಿನಿಂದ ಹೇಳಿಕೆ ಪಡೆದಿದ್ದು, ಆಕೆಯನ್ನು ಮಕ್ಕಳ ಕೇಂದ್ರಕ್ಕೆ ಒಪ್ಪಿಸಿದ್ದಾರೆ.

ದೈಹಿಕ ಹಿಂಸೆ ನೀಡಿರುವ ತಾಯಿ ಹಾಗೂ ಬಾಲಕಾರ್ಮಿಕ ಕಾಯ್ದೆಯಡಿ ಮನೆಯ ಮಾಲೀಕರ ವಿರುದ್ಧವೂ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸುವುದಾಗಿ ಮತ್ತು ಕೂಡಲೇ ಕಲ್ಯಾಣ ಸಮಿತಿ ಸಭೆಯಲ್ಲಿ ಚರ್ಚಿಸಿ ಬಾಲಕಿಯ ಪಾಲನೆ ಕುರಿತಾಗಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಗ್ರಾಮಾಂತರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರಾಮುಜೋಗಿಹಳ್ಳಿ ತಿಳಿಸಿದ್ದಾರೆ.


Spread the love

About Laxminews 24x7

Check Also

ರಾಜ್ಯದ ಪೊಲೀಸ್ ಸಿಬ್ಬಂದಿಗಳಿಗೆ ಸೈಬರ್ ತರಬೇತಿ

Spread the loveಬೆಂಗಳೂರು : ಸಿಐಡಿ ಕರ್ನಾಟಕ, ಇನ್ಫೋಸಿಸ್ ಫೌಂಡೇಶನ್ ಆ್ಯಂಡ್ ಡೇಟಾ ಸೆಕ್ಯುರಿಟಿ ಕೌನ್ಸಿಲ್ ಆಫ್ ಇಂಡಿಯಾ (ಡಿಎಸ್‌ಸಿಐ) ದಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ