ಮೀರತ್: ಐದು ವರ್ಷಗಳ ಕಾಲ ತಾನು ಹಿಂದು ಎಂದು ಹೇಳಿಕೊಂಡೇ ಆಕೆಯನ್ನು ವಂಚಿಸಿದ. ಆತನ ನಿಜವಾದ ಬಣ್ಣ ಬಯಲಾಗುತ್ತಿದ್ದಂತೆ ತಾಯಿ ಹಾಗೂ ಮಗುವನ್ನು ಕೊಲೆಗೈದು ಆಕೆಯ ಮನೆಯಲ್ಲಿಯೇ ಹೂತು ಹಾಕಿ ಪರಾರಿಯಾಗಿದ್ದಾನೆ.
ದುರಂತವೆಂದರೆ, ಕೈಗೆ ಸಿಕ್ಕ ಆರೋಪಿಯನ್ನು ವಿಚಾರಣೆ ನಡೆಸಿ ಕೈಬಿಟ್ಟ ಪೊಲೀಸರು ಆತನೇ ಕೊಲೆಗಾರ ಎಂಬುದು ತಿಳಿಯುತ್ತಿದ್ದಂತೆ ಹುಡುಕಿ ಕೊಟ್ಟವರಿಗೆ ಬಹುಮಾನ ಘೋಷಿಸಿದ್ದಾರೆ.ಲವ್ ಜಿಹಾದ್ನ ಈ ಪ್ರಕರಣ ನಡೆದದ್ದು ಉತ್ತರ ಪ್ರದೇಶದ ಮೀರತ್ನಲ್ಲಿ. ಬಯಲಿಗೆ ಬಂದದ್ದು ಮಹಿಳೆಯ ಗೆಳತಿ ಚಂಚಲ್ನಿಂದ. ಗೆಳತಿ ಪ್ರಿಯಾ ಮೂರು ತಿಂಗಳಿನಿಂದ ಕಾಣುತ್ತಿಲ್ಲ ಎಂದು ಪೊಲೀಸರಿಗೆ ದೂರು ನೀಡಿದ್ದಳು.
ತನಿಖೆ ಕೈಗೊಂಡ ಪೊಲೀಸರಿಗೂ ವಿಷಯ ಏನೆಂಬುದು ಗೊತ್ತಾಗಿರಲಿಲ್ಲ. ಆಕೆಯ ಜತೆ ಸಂಪರ್ಕದಲ್ಲಿದ್ದ ಶಂಷಾದ್ನನ್ನು ಕರೆಯಿಸಿ ವಿಚಾರಣೆ ನಡೆಸಿ ಕಳುಹಿಸಿ ಕೊಟ್ಟಿದ್ದರು.
ಇದಾದ ಕೆಲ ದಿನಗಳ ಬಳಿಕ ಮಹಿಳೆ ಮನೆಯ ಆವರಣದಲ್ಲಿ ಎರಡು ಅಸ್ಥಿಪಂಜರಗಳು ಪತ್ತೆಯಾಗಿವೆ. ಅದು ನಾಪತ್ತೆಯಾಗಿದ್ದ ಪ್ರಿಯಾ ಹಾಗೂ ಆಕೆಯ ಮಗಳು ಕಶೀಷ್ಳದ್ದು ಎಂದು ಗೊತ್ತಾಗಿದೆ.
ಪ್ರಿಯಾಳನ್ನು ಮದುವೆಯಾಗುವುದಾಗಿ ಹೇಳಿ ನಂಬಿಸಿದ್ದ ಶಂಷಾದ್ ತಾನು ಹಿಂದು ಆಗಿದ್ದು, ಹೆಸರು ಅಮಿತ್ ಎಂದು ಹೇಳಿಕೊಂಡಿದ್ದ. ಐದು ವರ್ಷಗಳವರೆಗೆ ಆಕೆಯೊಂದಿಗೆ ಸಂಬಂಧ ಹೊಂದಿದ್ದ. ಆದರೆ, ಆತ ಹಿಂದೂ ಅಲ್ಲ, ಮುಸ್ಲಿಂ ಎಂಬುದು ಗೊತ್ತಾಗುತ್ತಿದ್ದಂತೆ ಪ್ರಿಯಾ ಆತನಿಂದ ದೂರಾಗಿದ್ದಳು. ಇದೇ ಕಾರಣಕ್ಕೆ ಇವರಿಬ್ಬರ ನಡುವೆ ಭಾರಿ ಜಗಳ ನಡೆದಿತ್ತು. ಮಾರ್ಚ್ 28ರಂದು ಪ್ರಿಯಾ ಹಾಗೂ ಕಶೀಷ್ಳನ್ನು ಶಂಷಾದ್ ಕೊಂದು ಹಾಕಿದ್ದ. ಇಬ್ಬರ ಶವವನ್ನು ಮನೆಯಲ್ಲಿಯೇ ಹೂತು ಹಾಕಿದ್ದ.
ಸದ್ಯ ತಲೆಮರೆಸಿಕೊಂಡಿರುವ ಆರೋಪಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಶಂಷಾದ್ ಮೂಲತಃ ಬಿಹಾರ್ದವನಾಗಿದ್ದ, ಕಳೆದ 10 ವರ್ಷಗಳಿಂದ ಮೀರತ್ನಲ್ಲಿ ನೆಲೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.