ಮಂಡ್ಯ: ತಾನೇ ಸಾಕಿದ್ದ ಹಸು ಮುಂದೊಂದ್ದು ದಿನ ತನ್ನನ್ನೇ ಕೊಲ್ಲಬಹುದು ಎಂದು ಆ ಬಾಲಕ ಕನಸ್ಸಿನಲ್ಲೂ ಯೋಚಿಸಿರಲಿಲ್ಲ. ಆದರೆ ವಿಧಿಲಿಖಿತ ಅದೇ ಆಗಿತ್ತು. ಆ ಹಸುವಿನಿಂದಲೇ ಬಾಲಕ ಪ್ರಾಣಬಿಟ್ಟಿದ್ದಾನೆ.
ಇಂತಹದ್ದೊಂದು ಮನಕಲಕುವ ಘಟನೆ ಮಳವಳ್ಳಿ ತಾಲೂಕಿನ ಹಲಗೂರು ಪೊಲೀಸ್ ಠಾಣೆ ವ್ಯಾಪ್ತಿಯ ಯತ್ತಂಬಾಡಿ ಗ್ರಾಮದಲ್ಲಿ ಸಂಭವಿಸಿದ್ದು, 13 ವರ್ಷದ ಬಾಲಕ ಮಾದೇಶ್ (13) ಬಲಿಯಾಗಿದ್ದಾನೆ. ಸೋಮವಾರ ರಾತ್ರಿ ಹಸುವಿಗೆ ಹುಲ್ಲು ಹಾಕಲು ಹೋಗಿದ್ದ ಮಾದೇಶ್ಗೆ ಕೊಂಬಿನಿಂದ ತಿವಿದಿದೆ. ಮಾರಣಾಂತಿಕವಾಗಿ ಗಾಯಗೊಂಡ ಬಾಲಕ ತೀವ್ರ ರಕ್ತಸ್ರಾವವಾಗಿ ಅಸುನೀಗಿದ್ದಾನೆ.ಮನೆಯಲ್ಲೇ ಸಾಕಿದ್ದ ಹಸುಗೆ ಮನೆಮಗ ಬಲಿಯಾಗಿರುವುದು ಇಡೀ ಕುಟುಂಬವನ್ನು ಶೋಕದಲ್ಲಿ ಮುಳುಗಿಸಿದೆ. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.
Laxmi News 24×7