ಮಂಡ್ಯ :ಅಖಿಲ ಭಾರತ ಕ್ಷತ್ರಿಯ ಮಹಾಸಭಾದ ಕರ್ನಾಟಕ ರಾಜ್ಯ ಘಟಕದ ನೂತನ ಅಧ್ಯಕ್ಷರಾಗಿ ಜನಪರ ಹೋರಾಟಗಾರ, ಸಂಘಟನಾ ಚತುರ.
ಮಂಡ್ಯ ಅಕ್ಕಿಹೆಬ್ಬಾಳು ಆರ್.ವಾಸು ಅವರನ್ನು ನೇಮಕ ಮಾಡಿ ಅಖಿಲ ಭಾರತೀಯ ಕ್ಷತ್ರಿಯ ಮಹಾಸಭಾದ ಅಧ್ಯಕ್ಷ ರಾಜರಾಜೇಂದ್ರ ಸಿಂಗ್ ಆದೇಶ ಹೊರಡಿಸಿದ್ದಾರೆ.
ಅಖಿಲ ಭಾರತೀಯ ಕ್ಷತ್ರಿಯ ಮಹಾಸಭಾದ ಅಧ್ಯಕ್ಷ ರಾಜರಾಜೇಂದ್ರಸಿಂಗ್ ಅವರು ನೀಡಿರುವ ನೇಮಕಾತಿ ಆದೇಶ ಪತ್ರವನ್ನು ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರಿಗೆ ನೀಡಿ ಮಾತನಾಡಿದ ವಾಸು ರಾಜ್ಯ ಘಟಕಕ್ಕೆ ಪದಾಧಿಕಾರಿಗಳನ್ನು ನೇಮಕ ಮಾಡಿಕೊಂಡು.
ಸಮಾಜದಲ್ಲಿ.ಅಸಂಘಟಿತರಾಗಿರುವ ಕ್ಷತ್ರಿಯ ಸಮಾಜದ ಬಂಧುಗಳನ್ನು ಸಂಘಟಿಸಿ, ತುಳಿತಕ್ಕೊಳಗಾದ ಸಮಾಜದ ಬಂಧುಗಳಿಗೆ ಅರಿವಿನ ಜಾಗೃತಿ ಮೂಡಿಸಿ ಸರ್ಕಾರದ ಸಂವಿಧಾನ ಬದ್ಧವಾದ ಸವಲತ್ತುಗಳನ್ನು ಕೊಡಿಸಲು ಹೋರಾಟ ನಡೆಸುವುದಾಗಿ ಆರ್. ವಾಸು ತಿಳಿಸಿದರು.
ಅಖಿಲ ಭಾರತೀಯ ಕ್ಷತ್ರಿಯ ಮಹಾಸಭಾದ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Laxmi News 24×7