ಮಂಡ್ಯ:ಸಂತೇಬಾಚಹಳ್ಳಿ ಹೋಬಳಿಯ ಮಾವಿನಕಟ್ಟೆಕೊಪ್ಪಲಿನಲ್ಲಿರುವ ಅದಾನಿ ಗ್ರೀನ್ ಎನರ್ಜಿ ಸೋಲಾರ್ ಸಿಸ್ಟಂ ಪವರ್ ಕಂಪನಿಯು ಕೊರೋನಾ ಸಂಕಷ್ಠದ ಹಿನ್ನೆಲೆಯಲ್ಲಿ ತಾಲ್ಲೂಕು ಆಡಳಿತಕ್ಕೆ 50ಸಾವಿರ ರೂಪಾಯಿ ಬೆಲೆ ಬಾಳುವ ಆಹಾರ ಪದಾರ್ಥಗಳನ್ನು ತಹಶೀಲ್ದಾರ್ ಎಂ.ಶಿವಮೂರ್ತಿ ಅವರಿಗೆ ಹಸ್ತಾಂತರಿಸಿದರು.
ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಇಡೀ ವಿಶ್ವವೇ ಇಂದು ಸಂಕಷ್ಠದಲ್ಲಿದೆ. ಜನಸಾಮಾನ್ಯರ ಸಂಕಷ್ಠಗಳು ಹಾಗೂ ನೋವು ನಲಿವುಗಳಿಗೆ ಪ್ರಾಮಾಣಿಕವಾದ ಸ್ಪಂದನೆಯಲ್ಲಿ ತೊಡಗಿಸಿಕೊಂಡಿರುವ ಅದಾನಿ ಗ್ರೀನ್ ಎನರ್ಜಿ ಸೋಲಾರ್ ಪವರ್ ಸಿಸ್ಟಂ ಕಂಪನಿಯು 50ಸಾವಿರ ರೂಪಾಯಿ ಬೆಲೆ ಬಾಳುವ ಆಹಾರ ಪದಾರ್ಥಗಳನ್ನು ನೀಡುತ್ತುರುವುದಕ್ಕೆ ತಹಶೀಲ್ದಾರ್ ಶಿವಮೂರ್ತಿ ಧನ್ಯವಾದಗಳನ್ನು ಸಮರ್ಪಿಸಿದರು.
ಅದಾನಿ ಗ್ರೀನ್ ಎನರ್ಜಿ ಸೋಲಾರ್ ಸಿಸ್ಟಂ ಕಂಪನಿಯ ಭದ್ರತಾ ಅಧಿಕಾರಿಗಳು ಹಾಗೂ ಸಿಬ್ಬಂಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
