Breaking News

ಯಶ್, ಅಲ್ಲು ಅರ್ಜುನ್​ ಫೋಟೋ ಹಂಚಿಕೊಂಡು ಸಲಹೆ ನೀಡಿದ ಕಂಗನಾ; ಇದಕ್ಕಿದೆ ವಿಶೇಷ ಕಾರಣ

Spread the love

ಕಂಗನಾ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಕಂಗನಾ ದಕ್ಷಿಣದ ಚಿತ್ರಗಳು ಹಾಗೂ ನಾಯಕ ನಟರನ್ನು ಹಾಡಿ ಹೊಗಳಿದ್ದಾರೆ. ಇತ್ತೀಚೆಗಷ್ಟೇ ‘ಪುಷ್: ದಿ ರೈಸ್’ ಬಾಲಿವುಡ್​ನಲ್ಲಿ ಪಡೆದ ಅಪಾರ ಜನಪ್ರಿಯತೆ ಹಾಗೂ ಯಶ್ ನಟನೆಯ ಕೆಜಿಎಫ್ ಗಳಿಸಿದ್ದ ಮೆಚ್ಚುಗೆ ಮೊದಲಾದವುಗಳ ಹಿನ್ನೆಲೆಯಲ್ಲಿ ಕಂಗನಾ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ದಕ್ಷಿಣದ ಚಿತ್ರಗಳು ಹಾಗೂ ಇಲ್ಲಿನ ನಾಯಕ ನಟರು ಏಕೆ ಖ್ಯಾತಿ ಗಳಿಸುತ್ತಿದ್ದಾರೆ ಎಂಬುದನ್ನು ವಿವರಿಸಿರುವ ಕಂಗನಾ, ‘‘ಭಾರತೀಯ ಪರಂಪರೆಯನ್ನು ಪ್ರತಿಬಿಂಬಿಸುತ್ತಾರೆ. ಪಾಶ್ಚಾತ್ಯರಿಂದ ಪ್ರಭಾವಿತರಾಗದೇ ತಮ್ಮ ಕುಟುಂಬವನ್ನು ಹಾಗೂ ಸಂಬಂಧವನ್ನು ಪ್ರೀತಿಸುತ್ತಾರೆ. ಅವರ ವೃತ್ತಿಪರತೆಗೆ ಸರಿಸಾಟಿ ಇಲ್ಲ’’ ಎಂದು ಬರೆದಿದ್ದಾರೆ.

ಇಷ್ಟೆಲ್ಲಾ ವಿವರಿಸಿರುವ ಕಂಗನಾ ದಕ್ಷಿಣದವರಿಗೆ ಒಂದು ಸಲಹೆಯನ್ನೂ ನೀಡಿದ್ದು, ಬಾಲಿವುಡ್​ನಿಂದ ಈ ಪರಂಪರೆಯನ್ನು ಹಾಳಾಗಲು ಬಿಡಬೇಡಿ. ಬಾಲಿವುಡ್​ನಿಂದ ಭ್ರಷ್ಟರಾಗಬೇಡಿ ಎಂದಿದ್ದಾರೆ.


Spread the love

About Laxminews 24x7

Check Also

ತರುಣ್ ಸುಧೀರ್ ನಿರ್ಮಾಣದ ‘ಏಳುಮಲೆ’ ಸಿನಿಮಾದ ಮೆಲೋಡಿ ಹಾಡು ರಿಲೀಸ್..

Spread the love ತರುಣ್ ಸುಧೀರ್ ನಿರ್ಮಾಣದ ‘ಏಳುಮಲೆ’ ಸಿನಿಮಾದ ಮೆಲೋಡಿ ಹಾಡು ರಿಲೀಸ್.. ರಾಣಾ-ಪ್ರಿಯಾಂಕಾ ಜೋಡಿಯ ಏಳುಮಲೆ ಸಿನಿಮಾದ‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ