ಚಿಕ್ಕೋಡಿ : ಹಾರೋಗೇರಿ ಪಿಕೆಪಿಎಸ್ ಬ್ಯಾಂಕ್ ನ ಸಿಬ್ಬಂದಿಗಳು ಬೆಳೆ ಸಾಲ ನೀಡುತ್ತಿಲ್ಲ. ಮುಚ್ಚಿಹೋಗಿರುವ ಬ್ಯಾಂಕ್ ನಿಂದ ಕ್ಲಿಯರೆನ್ಸ್ ಸರ್ಟಿಫಿಕೇಟ್ ಕೊಡಿ ಅಂತ ಕಾಡುತ್ತಿದ್ದಾರೆ. ಈ ಸಮಸ್ಯೆಯನ್ನು ಬಗೆ ಹರಿಸುವಂತೆ ರಾಯಬಾಗ ತಹಶೀಲ್ದಾರ್ ಕಚೇರಿಯ ಮುಂದೆ ರಾಯಬಾಗ ತಾಲೂಕಿನ ಅಲಖನೂರ ಗ್ರಾಮದ ರೈತ ಲಕ್ಷ್ಮಣ ತಿಪ್ಪಣ್ಣ ವಡಗೋಲೆ ವಿಷದ ಬಾಟಲಿ ಹಿಡಿದು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
ರಾಯಬಾಗ ತಾಲೂಕಿನ ಪರಮಾನಂದವಾಡಿ ಗ್ರಾಮದ ಷಡಕ್ಷರಿ ಬ್ಯಾಂಕ್ ನಲ್ಲಿ ಅಲಖನೂರ ಗ್ರಾಮದ ರೈತ ಲಕ್ಷ್ಮಣ ಸಾಲ ಪಡೆದಿದ್ದರು. ಆದ್ರೇ ಆ ಬ್ಯಾಂಕ್ 20 ವರ್ಷಗಳ ಹಿಂದೆಯೇ ಮುಚ್ಚಿ ಹೋಗಿದೆ.ಇಂತಹ ಬ್ಯಾಂಕ್ ನಿಂದ ಕ್ಲಿಯರೆನ್ಸ್ ಸರ್ಟಿಫಿಕೇಟ್ ನೀಡಿದ್ರೇ ಮಾತ್ರ, ಹಾರೋಗೇರಿ ಪಿಕೆಪಿಎಸ್ ಬ್ಯಾಂಕ್ ಸಿಬ್ಬಂದಿ ಕೇಳುತ್ತಿದ್ದಾರೆ. ಅಲ್ಲದೇ ಕಿರುಕುಳ ಕೂಡ ನೀಡುತ್ತಿದ್ದಾರೆ. ಕ್ಲಿಯರೆನ್ಸ್ ಸರ್ಟಿಫಿಕೇಟ್ ಇಲ್ಲದೇ ಸಾಲ ನೀಡುತ್ತಿಲ್ಲ.
ಈಗ ನನಗೆ ಸಾಲದ ಅವಶ್ಯಕತೆ ಇದೆ. ನನ್ನ ಜಮೀನಿನ ಮೇಲೆ ಬೆಳೆ ಸಾಲ ಕೊಡಿಸಿ. ಸಾಲ ಕೊಡದೇ ಇದ್ದರೇ ತಾವು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರೈತ ಲಕ್ಷ್ಮಣ್ ರಾಯಬಾಗ ಗ್ರೇಡ್-2 ತಹಶೀಲ್ದಾರ ಪರಮಾನಂದ ಮಂಗಸೂರಿ ಅವರ ಬಳಿ ಅಳಲು ತೋಡಿಕೊಂಡರು.