ಮಂಡ್ಯ ಜಿಲ್ಲೆ ಬಸರಾಳು ಪಟ್ಟಣದ ನಂದಹಳ್ಳಿ ಗ್ರಾಮದೇವತೆ ಶ್ರೀ ಮಾರಮ್ಮನವರ ದೇವಸ್ಥಾನದಲ್ಲಿ ಕೊರೋನಾ ಮಹಾಮಾರಿಯ ಬೆಚ್ಚಿ ಅಟ್ಟಹಾಸವನ್ನು ಮಟ್ಟಹಾಕಿ ಸಮಾಜದಲ್ಲಿ, ಶಾಂತಿ, ಸಮೃದ್ಧಿ ಹಾಗೂ ನೆಮ್ಮದಿಯನ್ನು ತಾಯಿ ಮಾರಮ್ಮನು ಕರುಣಿಸುವಂತೆ ಕೋರಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ವಿಶ್ವದಾದ್ಯಂತ ಕೊರೋನಾ ಅಟ್ಟಹಾಸವು ಎಲ್ಲೆ ಮೀರಿದೆ. ಕೊರೋನಾ ವೈರಾಣುಗಳನ್ನು ಸಂಹರಿಸಿ ತಾಯಿ ಮಾರಮ್ಮ ದೇವಿಯು ಆರೋಗ್ಯ, ಸಮೃದ್ಧಿಯನ್ನು ಕರುಣಿಸುವಂತೆ
ಗ್ರಾಮದ ಗ್ರಾಮಸ್ಥರು ಪ್ರಾರ್ಥನೆ ಸಲ್ಲಿಸಿದರು.
ಕರೋನ್ ವೈರಸ್ ಹೆದರಿದ ಗ್ರಾಮಸ್ಥರು ತಮ್ಮ ಕೋರಿಕೆಯನ್ನು ಇಟ್ಟು
ತಾಯಿ ಮಾರಮ್ಮ ನಮ್ಮ ಕಷ್ಟಗಳನ್ನು ಈಡೇರಿಸಿ ಕೊಡು ಎಂದು ಗ್ರಾಮ ದೇವತೆ ಮಾರಮ್ಮನಿಗೆ
ತಂಬಿಟ್ಟು ಆರತಿಯನ್ನು ವಿಶೇಷವಾಗಿ ಹರಿಪಿಸಿದ ಗ್ರಾಮಸ್ಥರು
ಪೂಜಾ ಕಾರ್ಯಕ್ರಮದಲ್ಲಿ ಗ್ರಾಮದ ಹೆಣ್ಣುಮಕ್ಕಳು ಹಾಗೂ ಮುಖಂಡರಾದ ಪಟೇಲ್ ಜೋಗಿ ಗೌಡನ ಮಗ ಮರಿಗೌಡ.
ಎರಡನೆ ಯಜಮಾನ ದೊಳೇಗೌಡ
ಯಜಮಾನ ಶಿವಲಿಂಗಯ್ಯ ಗ್ರಾಮದ ಉಸ್ತುವಾರಿ
ಕೆ. ರಾಮೇಗೌಡ ಹಾಲಿನ ಡೈರಿ ಎಸ್ ಸಿದ್ಧರಾಜು ಚೇರ್ಮನ್ ನಾಥೇಗೌಡ ಚಿಕ್ಕ ಯಜಮಾನ
ಸಿದ್ದಲಿಂಗಯ್ಯ ಮತ್ತು ಮಹಿಳೆಯರ ಮೈಯಮೇಲೆ ದೇವರುಗಳು ಬರುವಂತ ಜಯಮ್ಮ ಚಿಕ್ಕತಾಯಮ್ಮ ಮಂಗಳಮ್ಮ
ಮತ್ತಿತರರು ಭಾಗವಹಿಸಿದ್ದರು.