Breaking News

ಗೋಕಾಕ್ : ಕ್ವಾರಂಟೈನಲ್ಲಿದ್ದ ಮಹಿಳೆ ಪರಾರಿ, ಜನರಲ್ಲಿ ಆತಂಕ

Spread the love

ಗೋಕಾಕ : ಗೋಕಾಕನಗರದ ಹಾಸ್ಟೇಲೊಂದರಲ್ಲಿ ಕ್ವಾರಂಟನ್‍ನಲ್ಲಿದ್ದ ಮಹಿಳೆಯೊರ್ವಳು ಪರಾರಿಯಾಗಿದ್ದ ಘಟನೆ ಶನಿವಾರದಂದು ಸಂಜೆ ಜರುಗಿದೆ.
ಮಹಾರಾಷ್ಟ್ರದ ಗಡಹಿಂಗ್ಲಜ್‍ದ ನೂಲಿ ಗ್ರಾಮದ ಮಹಿಳೆಯು ತನ್ನ ಮೂರು ವರ್ಷದ ಹೆಣ್ಣು ಮಗುವಿನೊಂದಿಗೆ ಕಳೆದ 4 ದಿನಗಳ ಹಿಂದೆ ಗೋಕಾಕ ತಾಲೂಕಿನ ಪಂಜಾನಟ್ಟಿ ಗ್ರಾಮದ ತವರು ಮನೆಗೆ ಬಂದಿದ್ದಳು. ಮಹಿಳೆಯು ಮಹಾರಾಷ್ಟ್ರ ರಾಜ್ಯದಿಂದ ಬಂದಿದ್ದಾಳೆಂದು ಗ್ರಾಮಸ್ಥರು ಪೋಲೀಸರಿಗೆ ತಿಳಿಸಿ ಅವರ ಸಹಾಯದಿಂದ ನಗರದ ಬಿಸಿಎಮ್ ಹಾಸ್ಟೇಲ್‍ನಲ್ಲಿ ಕ್ವಾರಂಟನ್‍ನಲ್ಲಿ ಇರಿಸಿದ್ದರು. ಆದರೆ ಮಹಿಳೆಯು ಫೇರೋಲ್ ಮೇಲೆ ಬಂದಿದ್ದ ಗಂಡನ್ನು ಪದೆ-ಪದೇ ಫೋನ ಮುಖಾಂತರ ಸಂಪರ್ಕಿಸಿ ಕರೆದುಕೊಂಡು ಹೋಗುವಂತೆ ಪಟ್ಟು ಹಿಡಿದಾಗ ಪರಿಣಾಮ ಮಹಿಳೆಯ ಪತಿಯು ಶನಿವಾರದಂದು ನಗರದ ಬಸ್ ನಿಲ್ದಾಣಕ್ಕೆ ಬಂದಾಗ ಕ್ವಾರಂಟನಲ್ಲಿದ್ದ ಮಹಿಳೆಯು ಹಾಸ್ಟೇಲ್‍ನಿಂದ ತಪ್ಪಿಸಿಕೊಂಡು ಗಂಡನೊಂದಿಗೆ ಸಮೀಪದ ಬೆಲ್ಲದ ಬಾಗೇವಾಡಿ ಗ್ರಾಮದ ಸಂಬಂಧಿಕರೊಬ್ಬರ ಮನೆಯಲ್ಲಿ ವಾಸವಾಗಿದ್ದರು. ಈ ವಿಷಯ ನಗರದಲ್ಲಿ ಕಾಡ್ಗಿಂಚಿನಂತೆ ಹಬ್ಬಿ ಆತಂಕದ ವಾತಾವರಣ ಸೃಷ್ಠಿಯಾಗಿತ್ತು. ಈ ವಿಷಯದ ಗಂಭಿರತೆಯನ್ನು ಅರಿತ ಪೋಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಮಹಿಳೆ ಸೇರಿದಂತೆ ಪತಿ ಹಾಗೂ ಮಗುವನ್ನು ವಶಕ್ಕೆ ಪಡೆದು ಮತ್ತೇ ಕ್ವಾರಂಟನಲ್ಲಿ ಇಡುವಲ್ಲಿ ಯಶಸ್ವಿಯಾಗಿದ್ದಾರೆ. ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗಬಾರದೆಂದು ಪೋಲೀಸ ಮೂಲಗಳು ತಿಳಿಸಿವೆ.
ಈ ಕುರಿತು ಗೋಕಾಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

8 ನೇ ದಿನಕ್ಕೆ ಕಾಲಿಟ್ಟ ಕಬ್ಬು ಬೆಳೆಗಾರರ ಹೋರಾಟ, ಸರ್ಕಾರಕ್ಕೆ ಸಂಜೆ 7 ಗಂಟೆಯ ಡೆಡ್‌ಲೈನ್‌

Spread the loveಬೆಳಗಾವಿ, ನವೆಂಬರ್ 6: ಬೆಲೆ ನಿಗದಿಗೆ ಆಗ್ರಹಿಸಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಪ್ರತಿಭಟನೆ (Farmers Protest), ಹೋರಾಟದ ಕಾವು ದಿನದಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ