Breaking News

ದೀಪಿಕಾ ಪಡುಕೋಣೆ ಶನಿವಾರ ವಿಚಾರಣೆಗೆ ಹಾಜರಾಗಲಿದ್ದಾರೆ

Spread the love

ಬೆಂಗಳೂರು: ಬಾಲಿವುಡ್​ನಲ್ಲಿ ಭುಗಿಲೆದ್ದಿರುವ ಡ್ರಗ್ ಮಾಫಿಯಾಕ್ಕೆ ಸಂಬಂಧಿಸಿದಂತೆ ದೀಪಿಕಾ ಪಡುಕೋಣೆ ಶನಿವಾರ ವಿಚಾರಣೆಗೆ ಹಾಜರಾಗಲಿದ್ದಾರೆ. ಸಾರಾ ಅಲಿಖಾನ್​, ರಾಕುಲ್​ ಪ್ರೀತ್​ ಸಿಂಗ್​, ಶ್ರದ್ಧಾ ಕಪೂರ್​ ಸಹ ವಿಚಾರಣೆ ಎದುರಿಸಲಿದ್ದಾರೆ. ಇದೀಗ ಈ ಎಲ್ಲ ಬೆಳವಣಿಗೆಗಳ ಬಗ್ಗೆ ನಟಿ, ರಾಜಕಾರಣಿ ಮಾಳವಿಕಾ ಅವಿನಾಶ್​ ಪ್ರತಿಕ್ರಿಯಿಸಿದ್ದಾರೆ.

ನಿಮಗೆಲ್ಲರಿಗೂ ಗೊತ್ತಿರುವಂತೆ, ಖಿನ್ನತೆ ಎನ್ನುವ ಕಥೆ ಕಟ್ಟಿ ಅದರ ಮೂಲಕ ಸಾಮಾಜಿಕ ಕಳಕಳಿಯ ಪ್ರಚಾರ ಪಡೆದ ದೀಪಿಕಾ, ಇದೀಗ ಆ ಮಾಲ್​ ಎಂಬ ಹೊಗೆ ಅವರನ್ನೇ ಆವರಿಸಿದೆ. ಅವಳನ್ನೇ ರೋಲ್​ ಮಾಡೆಲ್​ ಎಂದು ಹಿಂಬಾಲಿಸುತ್ತಿರುವವರಿಗೆ ಇದು ನಿಜಕ್ಕೂ ಬೇಸರದ ಸಂಗತಿ’ ಎಂದು ಟ್ವೀಟ್​ ಮಾಡಿದ್ದಾರೆ.ಸುಶಾಂತ್​ ಸಿಂಗ್​ ಆತ್ಮಹತ್ಯೆಗೆ ಖಿನ್ನತೆಯೂ ಮುಖ್ಯ ಕಾರಣ ಎಂದು ತಿಳಿಯುತ್ತಿದ್ದಂತೆ, ಆ ಬಗ್ಗೆ ದೀಪಿಕಾ ಪಡುಕೋಣೆ ಮಾತನಾಡಿದ್ದರು. ತಾವು ಆ ಖಿನ್ನತೆಯನ್ನು ಎದುರಿಸಿದ ಹಿನ್ನೆಲೆ ಮತ್ತು ಅದರಿಂದ ಆಚೆ ಬರುವ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಸಲಹೆ ನೀಡಿದ್ದರು. ಇದೀಗ ಅದೇ ವಿಚಾರ ದೀಪಿಕಾ ಉರುಳಾಗಿ ಪರಿಣಮಿಸಿದೆ.


Spread the love

About Laxminews 24x7

Check Also

ಸ್ನೇಹಿತರೊಂದಿಗೆ ಪಾನಿಪುರಿ ತಿನ್ನಲು ಹೋದವನ ಮೇಲೆ ಹಲ್ಲೆ ; ಚಿಕಿತ್ಸೆ ಫಲಿಸದೇ ಸಾವು

Spread the loveಬೆಂಗಳೂರು : ಪಾನಿಪುರಿ ತಿನ್ನಲು ಹೋದಾಗ ಹಲ್ಲೆಗೊಳಗಾಗಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ನಂದಿನಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ