Breaking News

ಮತಾಂತರಗೊಂಡು ಮದುವೆಯಾದಳು : ಹಿಂಸೆಯನ್ನು ಸಹಿಸಲಾರದೇ ವಿಧಾನಸಭೆಯ ಕಟ್ಟಡದೆದುರೇ ಬೆಂಕಿ ಹಚ್ಚಿಕೊಂಡಳು

Spread the love

ಲಖನೌ: ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡ ಯುವತಿಯೊಬ್ಬಳು, ಗಂಡನ ಮನೆಯವರು ಕೊಡುವ ಹಿಂಸೆಯನ್ನು ಸಹಿಸಿಲಾರದೇ ಇಲ್ಲಿಯ ವಿಧಾನಸಭೆಯ ಕಟ್ಟಡದೆದುರೇ ಎದುರೇ ಬೆಂಕಿಹಚ್ಚಿಕೊಂಡಿರುವ ಘಟನೆ ನಡೆದಿದೆ.

ಅಂಜನಾ ತಿವಾರಿ ಅಲಿಯಾಸ್​ ಆಯೇಷಾ ಇಂಥದ್ದೊಂದು ಕೃತ್ಯ ಎಸಗಿದ್ದಾಳೆ. ಗಂಭೀರವಾಗಿ ಗಾಯಗೊಂಡಿರುವ ಈಕೆಯನ್ನು ಇದೀಗ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಅಂಜನಾ ಈ ಮೊದಲು ಅಖಿಲೇಶ್​ ಎಂಬುವವರನ್ನು ವಿವಾಹವಾಗಿದ್ದರು. ದಾಂಪತ್ಯದಲ್ಲಿ ಬಿರುಕು ಉಂಟಾಗಿದ್ದ ಹಿನ್ನೆಲೆಯಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು. ನಂತರ ಅಂಜನಾ, ಆಸಿಫ್​ ಎಂಬುವವನ ಬಲೆಗೆ ಬಿದ್ದರು. ಈಕೆಯನ್ನು ಪ್ರೀತಿಸುವ ನಾಟಕವಾಗಿ, ಆಕೆಯನ್ನು ಬಲೆಗೆ ಬೀಳಿಸಿಕೊಂಡ ಆಸಿಫ್​, ಆಕೆಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿ ಮದುವೆಯಾಗಿ ಮನೆಯಲ್ಲಿ ಇಟ್ಟುಕೊಂಡ

ನಂತರ ಮನೆಯಲ್ಲಿ ಈಕೆಯನ್ನು ಬಿಟ್ಟು ಸೌದಿಗೆ ಹಾರಿದ. ನಂತರ ಆತ ಇತ್ತ ಸುಳಿಯಲೇ ಇಲ್ಲ. ಗಂಡನ ಮನೆಯಲ್ಲಿ ಅಂಜನಾ ಇನ್ನಿಲ್ಲದ ಹಿಂಸೆ ಅನುಭವಿಸಲು ಶುರು ಮಾಡಿದರು. ಅತ್ತೆ-ಮಾವ ಇಬ್ಬರೂ ವಿಪರೀತ ಹಿಂಸೆ ಕೊಡಲು ಶುರುಮಾಡಿದರು.

ಹಿಂಸೆಯನ್ನು ತಾಳದೇ ಅಂಜನಾ, ಪೊಲೀಸರಲ್ಲಿ ದೂರು ದಾಖಲಿಸಲು ಹೋದರೆ, ಅವರು ದೂರು ದಾಖಲು ಮಾಡಿಕೊಳ್ಳಲಿಲ್ಲ. ತನಗಾಗಿರುವ ಅನ್ಯಾಯವನ್ನು ಮುಖ್ಯಮಂತ್ರಿ ಎದುರು ಹೇಳಿಕೊಳ್ಳಲು ವಿಫಲ ಯತ್ನ ಮಾಡಿದರು ಅಂಜನಾ.

ನಂತರ ತನ್ನನ್ನು ಮೋಸಗೊಳಿಸಿದವರಿಗೆ ಶಿಕ್ಷೆಯಾಗಲೇಬೇಕು, ಇದಕ್ಕಾಗಿ ತನ್ನ ಜೀವ ಹೋದರೂ ಪರವಾಗಿಲ್ಲ ಎಂದು ವಿಧಾನಸಭಾದ ಕಟ್ಟಡದೆದುರೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದರು. ನಂತರ ಅಲ್ಲಿದ್ದ ಸಿಬ್ಬಂದಿ ದೌಡಾಯಿಸಿ, ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದರು.

ಎಲ್ಲಾ ವಿಷಯಗಳನ್ನು ತಿಳಿಸಿರುವ ಅಂಜನಾ, ಇದೀಗ ಸಾಯುವ ಸ್ಥಿತಿಗೆ ಬಂದಿದ್ದಾರೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಗಂಡನ ಮನೆಯವರ ವಿರುದ್ಧ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಜಿಲ್ಲೆ ವಿಭಜನೆಗೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಒತ್ತಾಯ

Spread the loveಬೆಳಗಾವಿ: 2025ರ ಡಿಸೆಂಬರ್‌ 31ರೊಳಗೆ ಕ್ರಮವಹಿಸಿ ಹೊಸ ಜಿಲ್ಲೆಗಳನ್ನು ಘೋಷಣೆ ಮಾಡದೇ ಹೋದರೆ ಈ ಸರ್ಕಾರದ ಅವಧಿಯಲ್ಲಿ ಜಿಲ್ಲಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ