ದೆಹಲಿ : ಭಾರತವೂ ಕೂಡ ಲಸಿಕೆ ತಯಾರಿಕೆಯಲ್ಲಿ ಹಿಂದೆ ಬೀಳಲಿಲ್ಲ. ಅಸಲಿಗೆ ಭಾರತವೇ ಲಸಿಕೆ ತಯಾರಿಕೆಯ ವೇಗ ಹೆಚ್ಚಿಸಿ ಅಪಾರ ಪ್ರಮಾಣದ ಲಸಿಕೆ ಪೂರೈಕೆ ಮಾಡಿತು. ಭಾರತದ ಜನರಿಗೆ ಮಾತ್ರವಲ್ಲದೆ ಇತರ ಕೆಲವು ದೇಶಗಳಿಗೆ ಕೂಡ ಭಾರತದಿಂದ ಲಸಿಕೆ ರಫ್ತಾಯಿತು. ಈ ಲಸಿಕಾ ಅಭಿಯಾನದಲ್ಲಿ ಮುಖ್ಯವಾಗಿ ಕೆಲಸ ಮಾಡಿದ ಎರಡು ಭಾರತೀಯ ಸಂಸ್ಥೆಗಳು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಹಾಗೂ ಪುಣೆ ಮೂಲದ ಸೆರಂ ಇನ್ಸ್ಟಿಟ್ಯೂಟ್. ಇದೀಗ ಆ ಎರಡೂ ಸಂಸ್ಥೆಯ ಸಂಸ್ಥಾಪಕರಿಗೆ ಪದ್ಮ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ಭಾರತದ ಲಸಿಕೆ ತಯಾರಕರಿಗೆ ದೇಶದ ಪ್ರತಿಷ್ಠಿತ ಗೌರವವಾದ ಪದ್ನ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಹೈದರಾಬಾದ್ ಮೂಲದ ಸಂಸ್ಥೆ, ಭಾರತದ ಲಸಿಕೆ ಕೊವ್ಯಾಕ್ಸಿನ್ ಕಂಡುಹಿಡಿದು ತಯಾರು ಮಾಡಿದ ಕೃಷ್ಣ ಎಲ್ಲಾ ಮತ್ತು ಸುಚಿತ್ರಾರಿಗೆ ಪ್ರಶಸ್ತಿ ಪ್ರಕಟವಾಗಿದೆ. ಪೂನಾವಾಲ ಕುಟುಂಬದ ಒಡೆತನದಲ್ಲಿ ಇರುವ, ಕೊರೊನಾ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿ ಇದ್ದ ಸೆರಂ ಸಂಸ್ಥೆಯ ಹಾಗೂ ಕೊವಿಶೀಲ್ಡ್ ತಯಾರಕ ಸೈರಸ್ ಪೂನಾವಾಲಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ.