ಚಿತ್ರದುರ್ಗ: ಕೋವಿಡ್ ಆಸ್ಪತ್ರೆ ಹತ್ರಚಸುಳಿದಾಡೋಕೂ ಜನ್ರು ಹೆದರುತ್ತಾರೆ. ಆದರೆ ಕೋಟೆ ನಾಡಿನ ಜನರು ಮಾತ್ರ ಇಲ್ಲಿ ಹೋಗಿ ಸೆಲ್ಫಿ ತೆಗೆಯೋದು, ಒಳಗೆ ಹೋಗಿ ಬರೋದು ಮಾಡ್ತಾರಂತೆ ಅದಕ್ಕೆ ಆರೋಗ್ಯಾಧಿಕಾರಿಗಳು ಆಸ್ಪತ್ರೆಯನ್ನೆ ಸೀಲ್ ಡೌನ್ ಮಾಡಿದ್ದಾರೆ
ಕೋಟೆ ನಾಡಿನ ಜನರು ಬೆಚ್ಚೋದಿಲ್ಲ. ಕೋರೋನಾ ಸೋಂಕಿಗೂ ಬಗ್ಗೋಲ್ಲ ಎನ್ನೋದನ್ನು ಸಾಬೀತು ಮಾಡಿದ್ದಾರೆ. ಚಿತ್ರದುರ್ಗದ ಕೋವಿಡ್ ಆಸ್ಪತ್ರೆಯಲ್ಲಿದ್ದ ಪಾಸಿಟಿವ್ ಪ್ರಕರಗಳು ಒಂದೂ ಇಲ್ಲದೆ ಕೋರೋನಾ ಮುಕ್ತವಾಗಿದೆ.
ಇದಕ್ಕಾಗಿ ಆಸ್ಪತ್ರೆ ಹಾಗೂ ಅದರ ಮುಂದಿನ ರಸ್ತೆಯನ್ನು ಓಡಾಟಕ್ಕೆ ಮುಕ್ತವಾಗಿ ಬಿಡಲಾಗಿತ್ತು.ಆದರೆ ಅಲ್ಲಿ ಓಡಾಡುವ ಸಾರ್ವಜನಿಕರು ಹಾಗೂ ಬೇರೆ ಬೇರೆ ರೋಗಿಗಳೂ ಕ್ಯೂರಿಯಾಸಿಟಿ ತಡೆಯಲಾರದೆ ಆಸ್ಪತ್ರೆ ಒಳಗೆ ಹೋಗಿ ಫೋಟೊಗಳನ್ನು ತೆಗೆಸಿಕೊಳ್ಳೊದು ಸೆಲ್ಫಿ ತಗೋಳೋದು ಮಾಡಿದ್ದಾರೆ. ಇದರಿಂದ ಮೊದಲೇ ಕೋರೋನಾ ಸೋಂಕು ಇರುವ ವರಿಗೆ ಚಿಕಿತ್ಸೆ ನೀಡಿರುವುದರಿಂದ ಕಂಟೈನ್ಮೆಂಟ್ ಆಗಿರುವುದರಿಂದ ಇದರ ಮುಂಭಾಗದಲ್ಲಿರುವ ರಸ್ತೆಗಳನ್ನು ಸೀಲ್ ಡೌನ್ ಮಾಡಲಾಗಿದೆ. ಎಂದು ಡಿಎಚ್ ಓ ಡಾ. ಫಾಲಾಕ್ಷಪ್ಪ ಹೇಳಿದರು.