Breaking News

ಕೊರೊನಾದಿಂದ ಸಂಕಷ್ಟದಲ್ಲಿರುವ ಗೋವಿನ ಜೋಳ ಬೆಳೆದಿರುವ ಬೆಳೆಗಾರರಿಗೆ ಸರಕಾರ 5000ರೂ.ಗಳ ಪರಿಹಾರದ ನೆರವು ಘೋಷಣೆ:ಸಚೇತಕ ಮಹಾಂತೇಶ ಕವಟಗಿಮಠ

Spread the love

ಚಿಕ್ಕೋಡಿ : ಕೊರೊನಾದಿಂದ ಸಂಕಷ್ಟದಲ್ಲಿರುವ ಗೋವಿನ ಜೋಳ ಬೆಳೆದಿರುವ ಬೆಳೆಗಾರರಿಗೆ ಸರಕಾರ 5000ರೂ.ಗಳ ಪರಿಹಾರದ ನೆರವು ಘೋಷಣೆ ಮಾಡಲಾಗಿದೆ ಎಂದು ವಿಧಾನ ಪರಿಷತ್‍ನ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ  ಹೇಳಿದರು.

ಪಟ್ಟಣದಲ್ಲಿರುವ ಲೋಕೋಪಯೋಗಿ ಇಲಾಖೆ ಸಭಾಭವನದಲ್ಲಿ ಶುಕ್ರವಾರ ನಡೆದ ತಾಲೂಕಾ ಮಟ್ಟದ ಅಧಿಕಾರಿಗಳ ಸಭೆಯ ನಂತರ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ತಾಲೂಕಿನಲ್ಲಿ 17000 ಗೋವಿನ ಜೋಳ ಬೆಳೆದ್ದಿದ್ದಾರೆ. ಕೃಷಿ ಇಲಾಖೆ ಗೋವಿನ ಜೋಳ ಬೆಳೆಗಾರರ ಯಾದಿ ತಯಾರಿಸಿದೆ. ಆ ಯಾದಿಯನ್ನು ಗ್ರಾಮ ಪಂಚಾಯಲ್ಲಿ ಪ್ರಕಟಿಸಲಿದ್ದು, ಆ ಯಾದಿಯಿಂದ ಹೆಸರು ಬಿಟ್ಟು ಹೋಗಿದ್ದಲ್ಲಿ ಅಂತಹ ರೈತರು ಅರ್ಜಿ ಸಲ್ಲಿಸಬೇಕು. ಹೂ,ಹಣ್ಣು ಮತ್ತು ತರಕಾರಿ ಬೆಳೆಗಾರರ ಯಾದಿಯನ್ನು ತೋಟಗಾರಿಕೆ ಇಲಾಖೆ ಸಂಗ್ರಹಿಸಿದ್ದು, ಆ ಯಾದಿಯನ್ನು ಗ್ರಾಮ ಪಂಚಾಯತಿಯಲ್ಲಿ ಪ್ರಕಟಿಸಲಿದೆ. ಆ ಯಾದಿಯಲ್ಲಿ ಹೆಸರು ಬರದಿದ್ದಲ್ಲಿ ರೈತರು ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸುವ ಅವಕಾಶ ಕಲ್ಪಿಸಲಾಗಿದೆ ಎಂದರು.

ರೈತರಿಗೆ ಕಳಪೆ ಬೀಜ ವಿತರಣೆ ಮಾಡಿದವರ ವಿರುದ್ಧ ಕ್ರಮ ಜರುಗಿಸುವುದು ಮತ್ತು ಕಳಪೆ ಬೀಜ ಪೂರೈಕೆ ಮಾಡಿ ರೈತರಿಗೆ ಮೋಸ ಮಾಡಿರುವ ಬೀಜೋತ್ಪಾದನಾ ಕಂಪನಿಗಳನ್ನು ಬ್ಲ್ಯಾಕ್ ಲಿಸ್ಟಗೆ ಸೇರಿಸುವಂತೆ ಕೃಷಿ ಇಲಾಖೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಕೈಮಗ್ಗ ಮತ್ತು ನೇಕಾರರಿಗೂ ಸರಕಾರ ಸಮ್ಮಾನ ಯೋಜನೆ ಘೋಷಣೆ ಮಾಡಿ 2000 ರೂ.ಗಳ ನೆರವು ನೀಡಲಿದೆ. ಸಾರಿಗೆ ಇಲಾಖೆ ಮುಖಾಂತರ ರೀಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ 5000 ರೂ.ಗಳ ನೆರವು ಸರಕಾರ ನೀಡಲಿದ್ದು, ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸಬೇಕು. ರೇಶನ್ ಕಾರ್ಡ ರಹಿತಿ 3416 ಕುಟುಂಭಗಳಿಗೆ 10 ಕೆ.ಜಿ.ಅಕ್ಕಿ ಮತ್ತು 2 ಕೆ.ಜಿ ಬೇಳೆ ವಿತರಣೆ ಮಾಡಲಿದೆ. ಕಾರ್ಮಿಕರು, ಮಡಿವಾಳರು ಮತ್ತು ಕ್ಷೌರಿಕರಿಗೂ ಸರಕಾರ ನೆರವು ಘೋಷಣೆ ಮಾಡಿದ್ದು, ಅರ್ಜಿ ಸಲ್ಲಿಸಿ ಇದರ ಲಾಭ ಪಡೆದುಕೊಳ್ಳಬೇಕು ಎಂದರು.

ಈ ಭಾಗದಲ್ಲಿ ಕಳೆದ ವರ್ಷ ಪ್ರವಾಹದಿಂದ 4688 ಬಿದ್ದಿರುವ ಮನೆಗಳನ್ನು ಗುರುತಿಸಲಾಗಿತ್ತು. ಆದರೆ ಬಹಳಷ್ಟು ಜನರು ಸರಕಾರದಿಂದ ಪರಿಹಾರ ಪಡೆದುಕೊಂಡಿದ್ದಾರೆ. ಮನೆ ಕಟ್ಟಲು ಮುಂದೆ ಬರುತ್ತಿಲ್ಲ. ಇದಕ್ಕೆ ಕಾರಣವೇನೂ ಎಂಬುದನ್ನು ತಿಳಿದುಕೊಂಡು ಆಯಾ ಪಿಡಿಓಗಳ ಮುಖಾಂತರ ಈ ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು. ಚಿಕ್ಕೋಡಿ ತಾಲೂಕಿನಲ್ಲಿ ನರೇಗಾ ಯೋಜನೆಯಲ್ಲಿ 3 ಕೋಟಿಗೂ ಮಿಕ್ಕಿ ಕೂಲಿಕಾರ್ಮಿಕರಿಗೆ ಕೂಲಿ ಪಾವತಿಸಲಾಗಿದ್ದು, 4604 ಕಾಮಗಾರಿಗಳ ಪ್ರಗತಿಯಲ್ಲಿವೆ. 10,8,669ಮಾನವ ದಿನಗಳನ್ನು ಸೃಜನೆ ಮಾಡಲಾಗಿದೆ ಎಂದರು.

ಪ್ರಧಾನ ಮಂತ್ರಿ ಕಿಸಾನ ಸಮ್ಮಾನ ಯೋಜನೆಯ ವಿಮೆ ಕಂಪನಿಗಳು ರೈತರಿಗೆ ಸರಿಯಾದ ಸಮಯಕ್ಕೆ ಹಣ ಪಾವತಿಸಿಲ್ಲ. ಆದ್ದರಿಂದ ರೈತರಿಗೆ ಹಣ ಪಾವತಿಸದ ವಿಮಾ ಕಂಪನಿಗಳನ್ನು ಬ್ಲ್ಯಾಕ್ ಲಿಸ್ಟ್‍ಗೆ ಸೇರಿಸಲು ಕೃಷಿ ಸಚಿವರಿಗೆ ಮನವಿ ಮಾಡಲಾಗಿದೆ ಎಂದರು.
ಜೂ. 16 ರಂದು 12 ಗಂಟೆಗೆ ಸಚಿವ ರಮೇಶ ಜಾರಕಿಹೋಳಿಯವರು ಕಲ್ಲೋಳ ಬ್ಯಾರೇಜ್‍ಗೆ ಬೇಟಿ ನೀಡಿ ಶಿಥಿಲಗೊಂಡಿರುವ ಬ್ಯಾರೇಜ್ ವೀಕ್ಷಣೆ ಮಾಡಲಿದ್ದು, ಖಡಕಲಾಟದಲ್ಲಿ ಮಹಾಲಕ್ಷ್ಮೀ ಏತ ನೀರಾವರಿ ಯೋಜನೆ ಕುರಿತು ಚರ್ಚಿಸಲು ಸಾರ್ವಜನಿಕರ ಸಭೆ ನಡೆಸಲಿದ್ದಾರೆ ಎಂದರು.

ಜಿಲ್ಲೆಯ ಬಿಜೆಪಿ ಯಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯವಿಲ್ಲ. ಪಕ್ಷದ ಹೈ ಕಮಾಂಡ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ನೀಡಿದೆ. ಈಗಾಗಲೇ ಡಾ. ಪ್ರಭಾಕರ ಕೋರೆಯವರಿಗೆ 2 ಬಾರಿ ರಾಜ್ಯ ಸದಸ್ಯರನ್ನಾಗಿಸಿ ಅವಕಾಶ ನೀಡಿದ್ದು, ಮುಂದೆ ಅವರಿಗೆ ಹೆಚ್ಚಿನ ಜವಾಬ್ದಾರಿ ನೀಡಲಿದೆ ಎಂದರು.


Spread the love

About Laxminews 24x7

Check Also

ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ವರ್ಷಪೂರ್ತಿ ರಾಜ್ಯದೆಲ್ಲೆಡೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. :C.M.

Spread the love1924 ರ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆ ಪೂರ್ವಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿದ್ದೇನೆ. ಗಾಂಧೀಜಿಯವರ ವಿಚಾರಧಾರೆಯನ್ನು ಪ್ರಚುರಪಡಿಸಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ