ಬೆಂಗಳೂರು: ರಾಜರಾಜೇಶ್ವರಿನಗರ ವಿಧಾನಸಭಾ ಉಪ ಚುನಾವಣೆ ಪ್ರಚಾರದ ಬಿಸಿ ಹೆಚ್ಚಾಗುತ್ತಿದಂತೆ ಅಕ್ರಮ ಹಣ ಸಾಗಾಟದ ಮೇಲೆ ಪೊಲೀಸರು ಕಣ್ಗಾವಲು ವಹಿಸಿದ್ದಾರೆ.
ಮುತ್ತುರಾಯನಗರದ ಪೊಲೀಸ್ ಚೆಕ್‌ಪೋಸ್ಟ್‌ನಲ್ಲಿ ಸೋಮವಾರ ವಾಹನ ತಪಾಸಣೆ ವೇಳೆ ದ್ವಿಚಕ್ರ ವಾಹನದಲ್ಲಿ 7 ಲಕ್ಷ ರೂ. ಪತ್ತೆಯಾಗಿದೆ. ಫ್ಲೈಯಿಂಗ್ ಸ್ಕ್ವಾಡ್ ತಂಡ ಭೇಟಿ ಕೊಟ್ಟು ಮಹಜರ್ ಮಾಡಿ ಜಪ್ತಿ ಮಾಡಿರುವುದಾಗಿ ಪಶ್ಚಿಮ ವಿಭಾಗ ಡಿಸಿಪಿ ಡಾ. ಸಂಜೀವ್ ಎಂ. ಪಾಟೀಲ್ ತಿಳಿಸಿದ್ದಾರೆ. ಸ್ಕೂಟರ್ ಸವಾರರಾದ ರಮೇಶ್ ಮತ್ತು ಮಾಣಿಕ್‌ಚಂದ್ ಎಂಬುವರ ಬಳಿ ಹಣ ವಶಕ್ಕೆ ಪಡೆಯಲಾಗಿದೆ. ಸೂಕ್ತ ದಾಖಲೆ ಒದಗಿಸಿಲ್ಲ. ಆಭರಣ ಮಳಿಗೆಗೆ ಸೇರಿದ ಹಣ. ಗ್ರಾಹಕರಿಂದ ಹಣ ಪಡೆದು ಅಂಗಡಿಗೆ ಹೋಗುತ್ತಿರುವುದಾಗಿ ಹೇಳುತ್ತಿದ್ದಾರೆ. ಆದರೆ, ಸೂಕ್ತ ದಾಖಲೆ ಒದಗಿಸಿಲ್ಲ. ಜ್ಞಾನಭಾರತಿ ಪೊಲೀಸ್ oಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಡಿಸಿಪಿ ಡಾ.ಸಂಜೀವ್ ಎಂ. ಪಾಟೀಲ್ ಮಾಹಿತಿ ನೀಡಿದ್ದಾರೆ.ಈಗಾಗಲೇ ಆರ್.ಆರ್.ನಗರ ಉಪ ಚುನಾವಣೆಯಲ್ಲಿ ಸೆಟ್‌ಆ ಬಾಕ್ಸ್ ವಿತರಣೆ, ಹಣ ಹಂಚಿಕೆ ಸೇರಿದಂತೆ ಹಲವಾರು ರೀತಿಯಲ್ಲಿ ಮತದಾರರಿಗೆ ಆಮಿಷವೊಡ್ಡಿ ಮತ ಸೆಳೆಯುತ್ತಿರುವ ಆರೋಪ ಕೇಳಿಬಂದಿದೆ. ಇದರ ನಡುವೆ ಚುನಾವಣಾಧಿಕಾರಿಗಳು ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವ ಸಲುವಾಗಿ ಕಾರ್ಯಾಚರಣೆಯನ್ನು ಬಿಗಿಗೊಳಿಸಿದ್ದಾರೆ.
Laxmi News 24×7