Breaking News

ಡಿ.ಕೆ. ಶಿವಕುಮಾರ್‌ ಅವರ ಭಾವೀ ಅಳಿಯ ಅಭ್ಯರ್ಥಿ

Spread the love

ಬೆಂಗಳೂರು: ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ “ಅಚ್ಚರಿಯ ಅಭ್ಯರ್ಥಿ’ಯಾಗಿ ಬಿಜೆಪಿ ನಾಯಕ, ಮಾಜಿ ಸಿಎಂ ಎಸ್‌.ಎಂ. ಕೃಷ್ಣ ಮೊಮ್ಮಗ, ಕಾಫಿ ಡೇ ಸಿದ್ಧಾರ್ಥ ಅವರ ಪುತ್ರ ಮತ್ತು ಡಿ.ಕೆ. ಶಿವಕುಮಾರ್‌ ಅವರ ಭಾವೀ ಅಳಿಯ ಅಮರ್ತ್ಯ ಕಣಕ್ಕಿಳಿಯುವ ಸಾಧ್ಯತೆಗಳಿವೆ.

ಉಪಚುನಾವಣೆಯಲ್ಲಿ ಈ ಕ್ಷೇತ್ರವನ್ನು ಹೇಗಾದರೂ ಕಾಂಗ್ರೆಸ್‌ ಬುಟ್ಟಿಗೆ ಹಾಕಿಕೊಳ್ಳಬೇಕು ಎಂಬುದು ಡಿ.ಕೆ. ಸಹೋದರರ ತಂತ್ರಗಾರಿಕೆ. ಹೀಗಾಗಿ ಅಚ್ಚರಿಯೆಂಬಂತೆ ಅಮರ್ತ್ಯ ಸುಬ್ರಮಣ್ಯ ಹೆಗ್ಡೆ ಅವರನ್ನು ಅಚ್ಚರಿ ಆಯ್ಕೆಯಾಗಿ ಕಣಕ್ಕಿಳಿಸಲು ತಯಾರಿ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಆದರೆ ಸ್ವತಃ ಅಮರ್ತ್ಯ ಮತ್ತು ಅವರ ಕುಟುಂಬದವರು ಈ ಕುರಿತು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಮನವೊಲಿಕೆ ಯಶಸ್ವಿಯಾದರೆ ಅವರೇ ಆರ್‌.ಆರ್‌.ನಗರಕ್ಕೆ ಅಭ್ಯರ್ಥಿಯಾಗುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.


Spread the love

About Laxminews 24x7

Check Also

ಪ್ರತಿ ಟನ್ ಕಬ್ಬಿಗೆ​​ ಹೆಚ್ಚುವರಿ 50 ರೂ. ಕೊಡಲು ಸಾಧ್ಯವಿಲ್ಲ: ಸಕ್ಕರೆ ಮಿಲ್ಸ್ ಸಂಘಟನೆ ಅಧ್ಯಕ್ಷ

Spread the loveಬೆಂಗಳೂರು: ಪ್ರತಿ ಟನ್ ಕಬ್ಬಿಗೆ 3,200 ರೂ.‌ ಕೊಡಲು ಮಾತ್ರ ಸಾಧ್ಯ. 3,250 ರೂ. ಕೊಡುವುದು ಸಾಧ್ಯವಿಲ್ಲ ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ