Breaking News

ಸರ್ಕಾರ ಈರುಳ್ಳಿ ರಫ್ತು ನಿಷೇಧಿಸಿದ್ದರ ಹಿನ್ನೆಲೆಯಲ್ಲಿ ಪ್ರಮುಖ ಈರುಳ್ಳಿ ವ್ಯಾಪಾರಿಗಳು ಕಣ್ಣೀರುಡುವಂತೆ ಮಾಡಿದೆ.

Spread the love

ಬೆಂಗಳೂರು: ಇದ್ದಕ್ಕಿದ್ದಂತೆ ಸರ್ಕಾರ ಈರುಳ್ಳಿ ರಫ್ತು ನಿಷೇಧಿಸಿದ್ದರ ಹಿನ್ನೆಲೆಯಲ್ಲಿ ಪ್ರಮುಖ ಈರುಳ್ಳಿ ವ್ಯಾಪಾರಿಗಳು ಕಣ್ಣೀರುಡುವಂತೆ ಮಾಡಿದೆ. ಸದ್ಯದ ಪರಿಹಾರ ಎಂಬಂತೆ ವ್ಯಾಪಾರಿಗಳು ಈಗಾಗಲೇ ಅರ್ಧ ಬೆಲೆಗೆ ಮಾರಾಟ ಮಾಡಿ ನಷ್ಟ ಅನುಭವಿಸಿದ್ದಾರೆ.

ಸ್ಥಳೀಯ ಮಾರುಕಟ್ಟೆಯಲ್ಲಿನ ಕೊರತೆಯ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 14 ರಂದು ವಿದೇಶಿ ವ್ಯಾಪಾರ ನಿರ್ದೇಶನಾಲಯ ಈರುಳ್ಳಿ ರಫ್ತು ನಿಷೇಧಿಸಿತ್ತು, ಇದು ಕರ್ನಾಟಕ ಮತ್ತು ಮಹಾರಾಷ್ಟ್ರದ ಉತ್ಪಾದನಾ ಪ್ರದೇಶಗಳಲ್ಲಿ ಮಳೆ ಹಾನಿಗೊಳಗಾದ ನಂತರ ಬೆಲೆ ಏರಿಕೆಗೆ ಕಾರಣವಾಯಿತು.

ಈರುಳ್ಳಿ ರಫ್ಚು ನಿಷೇಧದಿಂದಾಗಿ ಬೆಂಗಳೂರಿನ ಬಹು ದೊಡ್ಡ ರಫ್ತುದಾರ ಎಸ್ ಆನಂದನ್ ಎಂಬುವರು ಅವರು ಅಗಾಧವಾದ ಮಾನಸಿಕ ಮತ್ತು ಆರ್ಥಿಕ ಒತ್ತಡದಲ್ಲಿದ್ದಾರೆ.

ಇವರು ಚಳ್ಳಕೆರೆ, ಚಿತ್ರದುರ್ಗ ಸೇರಿದಂತೆ ಹಿರಿಯೂರು, ಬೆಳಘಟ್ಟ ಮತ್ತಿತರ ಪ್ರದೇಶಗಳಲ್ಲಿ ರೈತರಿಂದ ಪ್ರತಿದಿನ ಈರುಳ್ಳಿ ಖರೀದಿಸಿ ದೇಶದಲ್ಲೇ ಅತಿ ದೊಡ್ಡ ಈರುಳ್ಳ ರಫ್ತುದಾರ ಎಂದು ಪ್ರಸಿದ್ಧರಾಗಿದ್ದಾರೆ.

ಈ ವಾರ ನಾನು ಸುಮಾರು 40 ಲಕ್ಷ ರು. ಹಣ ಕಳೆದುಕೊಂಡಿದ್ದೇನೆ, ದಿಢೀರನೇ ಈರುಳ್ಳಿ ರಫ್ತು ನಿಷೇಧಿಸಿದ ಹಿನ್ನೆಲೆಯಲ್ಲಿ ವಿವಿಧ ಬಂದರುಗಳನಲ್ಲಿ ನನ್ನ ಹಡಗುಗಳು ಸಿಲುಕಿಕೊಂಡಿವೆ. ಚೆನ್ನೈ ಬಂದರಿನಲ್ಲಿ 1,74,000ಕೆಜಿ, ಕೊಲ್ಕೋತ್ತಾ ಬಂದರಿನಲ್ಲಿ 1,50,000ಕೆಜಿ, ಮತ್ತು ಟುಟಿಕೋರಿನ್ ಮತ್ತು ಚೆನ್ನೈ ನಲ್ಲಿ 98ಸಾವಿರ ಕೆಜಿ ಈರುಳ್ಳಿ ಸಿಲುಕಿಕೊಂಡಿದೆ.

ಶ್ರೀಲಂಕಾ, ಬಾಂಗ್ಲಾದೇಶ, ಬಹ್ರೇನ್, ಮಲೇಷ್ಯಾ, ವಿಯೆಟ್ನಾಂ ಮತ್ತು ಹಾಂಗ್ ಕಾಂಗ್ ದೇಶಗಳಿಗೆ ರಫ್ತು ಮಾಡಲು ಉದ್ದೇಶಿಸಲಾಗಿದೆ, ‘ಎಂದು ಅವರು ಹೇಳಿದ್ದಾರೆ.

ಭಾರತೀಯ ಈರುಳ್ಳಿ ಮಾರುಕಟ್ಟೆಯು ವಾರ್ಷಿಕವಾಗಿ 17 ಲಕ್ಷದಿಂದ 18 ಲಕ್ಷ ಟನ್ ರಫ್ತು ಮಾಡುತ್ತದೆ. ರಫ್ತು ನಿಷೇಧ ಸಂಬಂಧ ಸೋಮವಾರ ಉನ್ನತ ಮಟ್ಟದ ಸಭೆ ನಡೆಸಲಾಗಿದ್ದು ಶೀಘ್ರದಲ್ಲೇ ಸಕಾರಾತ್ಮಕ ಫಲಿತಾಂಶ ಬರುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.


Spread the love

About Laxminews 24x7

Check Also

ಪ್ರತಿ ಟನ್ ಕಬ್ಬಿಗೆ​​ ಹೆಚ್ಚುವರಿ 50 ರೂ. ಕೊಡಲು ಸಾಧ್ಯವಿಲ್ಲ: ಸಕ್ಕರೆ ಮಿಲ್ಸ್ ಸಂಘಟನೆ ಅಧ್ಯಕ್ಷ

Spread the loveಬೆಂಗಳೂರು: ಪ್ರತಿ ಟನ್ ಕಬ್ಬಿಗೆ 3,200 ರೂ.‌ ಕೊಡಲು ಮಾತ್ರ ಸಾಧ್ಯ. 3,250 ರೂ. ಕೊಡುವುದು ಸಾಧ್ಯವಿಲ್ಲ ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ