Breaking News

ಕೆಲ ದಿನಗಳ ಬಳಿಕ ಇತರ ಆನ್ಲೈನ್ ಮಾರಾಟ ಸಂಸ್ಥೆ ಮೂಲಕವೂ ಈ ಕಾರ್ಯ ಆರಂಭವಾಗಲಿದೆ ಎಂದು ಸಚಿವ ಹೇಳಿದ್ದಾರೆ‌.

Spread the love

ಬೆಳೆಗಾರನೇ ಬೆಲೆ ನಿಗದಿಮಾಡುತ್ತಾನೆ. ಇತಿಹಾಸದಲ್ಲೆ ಮೊದಲಬಾರಿಗೆ ಇಂತಹ ಅವಕಾಶ ರೈತರಿಗೆ ಒದಗಿಸಲಾಗಿದೆ. ಈ ಹಿಂದೆ ಮಾರುಕಟ್ಟೆಯಲ್ಲಿ ದರ ನಿಗದಾಡಲಾಗುತ್ತಿತ್ತು. ಈಗ ಆನ್ಲೈನ್ ನಲ್ಲಿ ಮಾವು ಮಾರಾಟ ಆರಂಭಿಸಲಾಗಿದ್ದು, ದರವನ್ನ ಮಾವು ಬೆಳೆಗಾರ ನಿಗದಿಮಾಡುತ್ತಾನೆ. ಇಲ್ಲಿ ಮಧ್ಯವರ್ತಿಗಳಿಗೆ ಅವಕಾಶ ಇಲ್ಲ ಎಂದು ತೋಟಗಾರಿಕೆ ಸಚಿವ ಡಾ| ನಾರಾಯಣಗೌಡ ಹೇಳಿದ್ದಾರೆ.

ವಿಕಾಸ ಸೌಧದಲ್ಲಿ ಫ್ಲಿಪ್ ಕಾರ್ಟ್ ಸಹಯೋಗದಲ್ಲಿ ಆನ್ಲೈನ್ ಮೂಲಕ ಮಾವು ಮಾರಾಟಕ್ಕೆ ಸಚಿವರು ಚಾಲನೆ ನೀಡಿದರು‌. ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಸಚಿವರು, ಆನ್ಲೈನ್ ಮೂಲಕ ಮಾವು ಮಾರಾಟ ಆರಂಭಿಸಿದ್ದೇವೆ. ಇದು ಪ್ರಾಯೋಗಿಕ. ಇದರಲ್ಲಿ ಇರುವ ನ್ಯೂನ್ಯತೆ ಸರಿಪಡಿಸಿ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ರೈತೋತ್ಪನ್ನವನ್ನ ಆನ್ಲೈನ್ ಮೂಲಕ ಮಾರಾಟ ಮಾಡುವ ಪ್ರಯತ್ನಾಡಲಾಗುವುದು. ಈಗ ಮಾವು ಮಾರಾಟ ಶುರುವಾಗಿದೆ. ಫ್ಲಿಪ್ ಕಾರ್ಟ್ ನಲ್ಲಿ ಗ್ರಾಹಕರು ಮಾವು ಖರೀದಿ ಮಾಡಬಹುದು. ಆದರೆ ದರ ನಿಗದಿ ಮಾಡುವ ಹಕ್ಕು ಮಾವು ಬೆಳೆಗಾರನದ್ದೇ ಆಗಿದೆ‌. ಮದ್ಯವರ್ತಿಗಳಿಗೆ ಅವಕಾಶ ಇಲ್ಲ. ಇಲ್ಲಿ ಬೆಳೆಗಾರ ನಿಗದಿ ಮಾಡಿದ್ದೇ ದರ ಎಂದು ಸಚಿವರು ಹೇಳಿದ್ದಾರೆ‌. ಫಾರ್ಮರ್ ಪ್ರೊಡ್ಯುಸ್ ಆರ್ಗನೈಸೇಶನ್ (FPO) ನಲ್ಲಿ ಮಾವು ಬೆಳೆಗಾರರು ಹೆಸರು ನೊಂದಾಯಿಸಿಕೊಳ್ಳಬೇಕು. ನೊಂದಾಯಿತ ರೈತರ ಹೆಸರನ್ನ ಫ್ಲಿಪ್ ಕಾರ್ಟ್ ನವರು ಪಡೆದುಕೊಳ್ಳುತ್ತಾರೆ. ಗ್ರಾಹಕರು ಆನ್ಲೈನ್ ನಲ್ಲಿ ಆರ್ಡರ್ ಮಾಡಿದಾಗ, ಸಂಬಂಧಿಸಿದ ತಳಿಯ ಮಾವನ್ನ ರೈತರಿಂದ ಪಡೆದು ಗ್ರಾಹಕರಿಗೆ ಫ್ಲಿಪ್ ಕಾರ್ಟ್ ನೀಡಲಿದೆ.

ಈಗ ಫ್ಲಿಪ್ ಕಾರ್ಟ್ ಮಾತ್ರ ಈ ಸೇವೆ ನೀಡಲು ಮುಂದಾಗಿದೆ‌. ಕೆಲ ದಿನಗಳ ಬಳಿಕ ಇತರ ಆನ್ಲೈನ್ ಮಾರಾಟ ಸಂಸ್ಥೆ ಮೂಲಕವೂ ಈ ಕಾರ್ಯ ಆರಂಭವಾಗಲಿದೆ ಎಂದು ಸಚಿವ ಹೇಳಿದ್ದಾರೆ‌. ಅಲ್ಲದೆ ರೈತರಿಗೆ ಅನುಕೂಲ ಆಗುವಂತ ಮಾರುಕಟ್ಟೆ ನಿರ್ಮಿಸುವ ಬಗ್ಗೆಯೂ ಚಿಂತನೆ ಇದೆ. ಕೃಷಿ ಉತ್ಪನ್ನ ಹಾಳಾಗದಂತೆ ನೋಡಿಕೊಳ್ಳಲು ಕೋಲ್ಡ್ ಸ್ಟೋರೇಜ್ ಸ್ಥಾಪನೆಗೆ ಮಂಜೂರಾತಿ ನೀಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.


Spread the love

About Laxminews 24x7

Check Also

ದಳಪತಿ ವಿಜಯ್ ಕೊನೆ ಸಿನಿಮಾ ‘ಜನನಾಯಗನ್’ ಓವರ್ ಸೀಸ್ ಹಕ್ಕಿಗೆ PHF film ಸಾರಥ್ಯ

Spread the loveದಾಖಲೆ‌ ಅಂದರೆ ದಳಪತಿ.. ದಳಪತಿ ಅಂದರೆ ದಾಖಲೆ ಅನ್ನೋದು ಪ್ರತಿ ಸಿನಿಮಾದಲ್ಲಿಯೂ ಸಾಬೀತು ಆಗುತ್ತಲೆ‌ ಇದೆ. ಅದರಲೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ