ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಬದಲಾವಣೆ ಮಾಡುವ ಸಂಧರ್ಭದಲ್ಲಿ ಸಿಲಿಂಡರ್ ಗ್ಯಾಸ್ ಮತ್ತು ಸೈನಿಟೈಸರ್ ಮಿಲನವಾಗಿ ಆಕಸ್ಮಿಕವಾಗಿ ಭುಗಿಲೆದ್ದ ಬೆಂಕಿಗೆ ಇಬ್ಬರು ಗಾಯಗೊಂಡಿದ್ದಾರೆ.
ಜಿಲ್ಲಾ ಆಸ್ಪತ್ರೆಯ ಎಮರ್ಜನ್ಸೀ ವಾರ್ಡಿನಲ್ಲಿ ಸಿಲಿಂಡರ್ ಬದಲಾವಣೆ ಮಾಡುವಾಗ ಗ್ಯಾಸ್ ಲೀಕ್ ಆಗಿದೆ ,ಲೀಕ್ ಗ್ಯಾಸ್ ಮತ್ತು ಸೈನಿಟೈಸರ್ ಮಿಕ್ಸ್ ಆಗಿ ಬೆಂಕಿ ಕಾಣಿಸಿಕೊಂಡಿದೆ.ಅದೇ ವಾರ್ಡಿನಲ್ಲಿದ್ದ ಓರ್ವ ನರ್ಸ ಮತ್ತು ಡಾಕ್ಟರ್ ಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಈ ಘಟನೆ ನಡೆಯುತ್ತಿದ್ದಂತೆಯೇ ಸಿಲಿಂಡರ್ ಸ್ಪೋಟವಾಗಿದೆ ಎಂದು ಜನ ಭಯಭೀತರಾಗಿ ಓಡಾಡಿದ್ದರಿಂದ,ಕೆಲ ಕಾಲ ಜಿಲ್ಲಾ ಆಸ್ಪತ್ರೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.