Breaking News

ಈ ಮೂಲಕ ಬೆಳಗಾವಿ ಜಿಲ್ಲೆಗೆ ತಬ್ಲಿಗಿ, ಅಜ್ಮೀರ್, ಮುಂಬಯಿ ನಂಟಿನ ಜೊತೆಗೆ ಜಾರ್ಖಂಡ್ ನಂಟು ನಿಖರವಾಗಿದೆ.

Spread the love

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಇಂದು ಮಂಗಳವಾರ(ಮೇ 26) ಮತ್ತೆ 13 ಜನರಿಗೆ ಕೋವಿಡ್-19 ಸೋಂಕು ತಗುಲಿರುವುದು  ಹೆಲ್ತ್  ಬುಲೆಟಿನ್ ದೃಢಪಡಿಸಿದೆ. ಈ ಮೂಲಕ ಬೆಳಗಾವಿ ಜಿಲ್ಲೆಗೆ ತಬ್ಲಿಗಿ,  ಅಜ್ಮೀರ್, ಮುಂಬಯಿ ನಂಟಿನ ಜೊತೆಗೆ ಜಾರ್ಖಂಡ್ ನಂಟು ನಿಖರವಾಗಿದೆ.
ಕ್ವಾರಂಟೈನ್ ಇದ್ದವರಲ್ಲಿ ಹದಿಮೂರು ಜನರಿಗೆ ಕೊರೊನಾ ತಗುಲಿದೆ. ತಾಲೂಕಿನ ಸವದಿ ಗ್ರಾಮದಲ್ಲಿ ಕ್ವಾರಂಟೈನ್ ಆಗಿದ್ದವರಲ್ಲಿ ಕೊರೋನಾ ಕಾಣಿಸಿದೆ.

ಹುಕ್ಕೇರಿ -1 ಸೇರಿದಂತೆ ಅಥಣಿ  ತಾಲೂಕಿನ  ಸವದಿ-7, ಬೆಳವಕ್ಕಿ-1, ನಂದಗಾವ -3, ಜುಂಜರವಾಡ-1 ಕೇಸ್ ಬೆಳಕಿಗೆ ಬಂದಿವೆ.  ತಾಲ್ಲೂಕು ಆಡಳಿತ ಜಾರ್ಖಂಡ್ ರಾಜ್ಯದಿಂದ ಮರಳಿ ಬಂದವರನ್ನು ಕ್ವಾರಂಟೈನ್ ಮಾಡಿತ್ತು. ಈಗ ಅವರನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ .

ಇಂದಿನ 13 ಹೊಸ ಪ್ರಕರಣ ಸೇರಿದಂತೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 141 ಕ್ಕೆ ಏರಿದೆ.  ರಾಜ್ಯದಲ್ಲಿ ಇಂದಿನ ಹೊಸ 100 ಪ್ರಕರಣಗಳು ಸೇರಿ ಒಟ್ಟು ಸೋಂಕಿತರ ಸಂಖ್ಯೆ 2282 ಕ್ಕೆ ಏರಿದೆ.


Spread the love

About Laxminews 24x7

Check Also

ಪಂಥ ಬಾಳೆಕುಂದ್ರಿಯಲ್ಲಿ ಆಪರೇಷನ್ ಸಿಂಧೂರ್ ಯಶಸ್ವಿಗಾಗಿ ತಿರಂಗಾ ಯಾತ್ರಾ

Spread the love ಬೆಳಗಾವಿ : ಪಂಥ ಬಾಳೆಕುಂದ್ರಿಯಲ್ಲಿ ಆಪರೇಷನ್ ಸಿಂಧೂರ್ ಯಶಸ್ವಿಗಾಗಿ ತಿರಂಗಾ ಯಾತ್ರಾ ಆಪರೇಷನ್ ಸಿಂಧೂರ ಕಾರ್ಯಾಚರಣೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ