ಬಾಗಲಕೋಟೆ: ನೋ ಪಾರ್ಕಿಂಗ್ ನಲ್ಲಿ ಬೈಕ್ ನಿಲ್ಲಿಸಿದ ವಿಷಯಕ್ಕೆ ಪೊಲೀಸರೊಂದಿಗೆ ಗಲಾಟೆ ನಡೆದ ವೇಳೆ ಮಹಿಳೆಯೊಬ್ಬರು ಪೊಲೀಸನಿಗೆ ಕಪಾಳ ಮೋಕ್ಷ ಮಾಡಿದ ಘಟನೆ ಸೋಮವಾರ ನಗರದ ಬಸವೇಶ್ವರ ವೃತ್ತದಲ್ಲಿ ನಡೆದಿದೆ. ನವನಗರದ ಗರ್ಭಿಣಿ ತನ್ನ ಮೈದುನನ ಜತೆಗೆ ಬಸವೇಶ್ವರ ವೃತ್ತದ ಬಳಿ ಇರುವ ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ಬೈಕ್ ನಿಲ್ಲಿಸಿದ್ದರಿಂದ ಸಂಚಾರಿ ಪೊಲೀಸರು ಬೈಕ್‌ನ ಪ್ಲಗ್ ಕಿತ್ತುಕೊಂಡಿದ್ದರು.
ಬೈಕ್ ಪ್ಲಗ್ ಕೊಡಲು ಒತ್ತಾಯಿಸಿದ ವೇಳೆ ಪೊಲೀಸರೊಂದಿಗೆ ವಾಗ್ವಾದ ನಡೆದಿದೆ. ಈ ವೇಳೆ ನನ್ನ ಮೇಲೆ ಪೊಲೀಸ್ ಹಲ್ಲೆ ಮಾಡಿದ್ದಾನೆಂದು ಆರೋಪಿಸಿದ ಮಹಿಳೆ ಪೊಲೀಸ್‌ನಿಗೆ ಕಪಾಳ ಮೋಕ್ಷ ಮಾಡಿದರು. ಘಟನೆಯಿಂದ ಬಸವೇಶ್ವರ ವೃತ್ತದಲ್ಲಿ ಸುಮಾರು ಒಂದು ಗಂಟೆಗಳ ಕಾಲ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ಸಂಚಾರಿ ಪೊಲೀಸ್ ಪಿಎಸ್‌ಐ ಹಾಗೂ ಮಹಿಳೆ ಕುಟುಂಬದವರ ಮಧ್ಯೆ ಈ ವೇಳೆ ವಾಗ್ವಾದ ನಡೆಯಿತು.