Breaking News

ನಾವು ಸನ್ಯಾಸಿಗಳಲ್ಲ. ಬೊಮ್ಮಾಯಿ ಆಯ್ಕೆ ಶ್ರೀಕೃಷ್ಣನ ತಂತ್ರಗಾರಿಕೆ: ಈಶ್ವರಪ್ಪ

Spread the love

ಶಿವಮೊಗ್ಗ: ಬೊಮ್ಮಾಯಿ ಸಂಪುಟದಲ್ಲಿ ನಾನು ಮಂತ್ರಿ ಆಗಲ್ಲ ಎಂದು ಜಗದೀಶ ಶೆಟ್ಟರ್​ ಘೋಷಿಸಿದ ಬೆನ್ನಲ್ಲೇ ಕೆ.ಎಸ್​.ಈಶ್ವರಪ್ಪ ಅವರು ಸುದ್ದಿಗೋಷ್ಠಿ ನಡೆಸಿ ಮಹತ್ವದ ತೀರ್ಮಾನ ಹೊರಹಾಕಿದ್ದಾರೆ.

ಗುರುವಾರ ಮಧ್ಯಾಹ್ನ 12ಕ್ಕೆ ಶಿವಮೊಗ್ಗದಲ್ಲಿ ಸುದ್ದಿಘೋಷ್ಠಿ ನಡೆಸಿದ ಈಶ್ವರಪ್ಪ, ಸಾವಿರಾರು ಕಾರ್ಯಕರ್ತರ ನಡುವೆ ನಾನು ಒಂದು ಬಿಂದು. ಸಿಎಂ ಸ್ಥಾನಕ್ಕೆ ನನಗಿಂತಲೂ ಹಿರಿಯರಿದ್ದರು. ಬೊಮ್ಮಾಯಿ ಆಯ್ಕೆ ರಾಜಕೀಯ ದಾಳ ಅಷ್ಟೆ. ಬಸವರಾಜ ಬೊಮ್ಮಾಯಿ ಅವರನ್ನು ಪಕ್ಷವು ಸಿಎಂ ಮಾಡಿದೆ. ಎಲ್ಲರೂ ಸಂತಸ ಪಟ್ಟಿದ್ದಾರೆ‌. ಯಡಿಯೂರಪ್ಪ ಅವರು ಬೊಮ್ಮಾಯಿ ಹೆಸರನ್ನು ಸೂಚಿಸಿದಾಗ ನಾನೇ ಅನುಮೋದಿಸಿದೆ. ಬಿಜೆಪಿಯಲ್ಲಿ ನಾನೇ ಪ್ರವೀಣ ಎನ್ನುವ ಸಂಸ್ಕೃತಿ ಇಲ್ಲ. ಸಿಎಂ ಸ್ಥಾನಕ್ಕೆ ನನಗಿಂತ ಹಿರಿಯರಿದ್ದಾರೆ. ಡಿಸಿಎಂ ಆಗು ಅಂದ್ರೆ ಆಗ್ತೀನಿ, ಮಂತ್ರಿ ಆಗು ಅಂದ್ರೆ ಅದಕ್ಕೂ ಓಕೆ, ಶಾಸಕನಾಗಿಯೇ ಇರು ಅಂದ್ರೆ ಅದಕ್ಕೂ ಸೈ. ನನಗೆ ಲಾಬಿ ಎಂಬ ಪದದ ಅರ್ಥವೇ ಗೊತ್ತಿಲ್ಲ. ನಾನು ಯಾವುದನ್ನೂ ಸಾಕು ಅನ್ನಲ್ಲ, ನಾನು ಡಿಸಿಎಂ ಆಗಬೇಕೆಂದು ಹಲವು ಹಿಂದುಳಿದ ವರ್ಗಗಳ ಸ್ವಾಮೀಜಿಗಳು, ಹಿರಿಯರು, ಮುಖಂಡರ ಆಸೆ ಎಂದರು.

ಬಿಜೆಪಿ ಪಕ್ಷದಲ್ಲಿ ಶ್ರೀರಾಮನ ಆಡಳಿತ, ಕೃಷ್ಣನ ತಂತ್ರಗಾರಿಕೆಯೂ ಗೊತ್ತಿದೆ‌. ನಾವೆಲ್ಲರೂ ರಾಜಕೀಯ ಮಾಡ್ತಾ ಇದ್ದೇವೆ.. ಸನ್ಯಾಸಿಗಳಲ್ಲ. ಬೊಮ್ಮಾಯಿ ಆಯ್ಕೆ ಶ್ರೀಕೃಷ್ಣನ ತಂತ್ರಗಾರಿಕೆ. ಮುಂದೆ ಬಹುಮತ ಬಂದ ಬಳಿಕ ಶ್ರೀರಾಮನ ಆದರ್ಶದಂತೆ ರಾಜ್ಯ ಆಳ್ವಿಕೆ ಮಾಡ್ತೀವಿ. ಆಡಿಯೋ, ವೀಡಿಯೋ ಬಹಳ ನೋಡಿದ್ದೇವೆ. ಯಾವುದಕ್ಕೂ ಸೊಪ್ಪು ಹಾಕಲ್ಲ. ರಾಜ್ಯದ ಹಿತದಿಂದ ಕ್ಯಾಬಿನೇಟ್ ರಚನೆಯಾಗಲಿದೆ. ಹೊಸಬರೋ, ಹಳಬರೋ ಕೇಂದ್ರ ನಾಯಕರು ತೀರ್ಮಾನಿಸುತ್ತಾರೆ. ಹಿರಿಯರ ತೀರ್ಮಾನಕ್ಕೆ ಬದ್ಧ ಎಂದು ಈಶ್ವರಪ್ಪ ಹೇಳಿದರು.

ಬೊಮ್ಮಾಯಿ ಸಂಪುಟಕ್ಕೆ ಸೇರಲ್ಲ ಎಂಬುದು ಮಾಜಿ ಸಚಿವ ಜಗದೀಶ ಶೆಟ್ಟರ್​ರ ವೈಯಕ್ತಿಕ ನಿರ್ಧಾರವದು, ಅದೇ ದಾರಿಯಲ್ಲಿ ನಾನು ಸಾಗುತ್ತೇನೆ ಎಂದು ಮಾಧ್ಯಮಗಳಲ್ಲಿ ಬಂದದ್ದು ಗಮನಿಸಿದೆ. ಅಂತಹದ್ದೇನಿಲ್ಲ, ಸಚಿವ ಪದವಿ ಸಾಕು ಎನ್ನಲ್ಲ. ಪಕ್ಷದ ನಾಯಕರು ಏನು ಹೇಳುತ್ತಾರೆ ಅದನ್ನು ಪಾಲಿಸುವೆ ಎಂದರು

ಕಾಂಗ್ರೆಸ್​ನಲ್ಲಿ ಎಲ್ಲರೂ ಸ್ವಯಂ ಘೋಷಿತ ಸಿಎಂಗಳೇ. ವೈಯಕ್ತಿಕವಾಗಿ ನಾನು ಡಿಸಿಎಂ ಆಗಬೇಕು ಎಂದು ಅನೇಕರು ಹೇಳುತ್ತಿದ್ದಾರೆ. ಡಿಸಿಎಂ ಆಗಬಹುದು. ಆಗಲ್ಲ ಎಂದು ಹೇಳಲ್ಲ. ಶೆಟ್ಟರ್ ಸಾಕು ಎಂದಿದ್ದಾರೆ. ನಾನು ಹಾಗೆ ಹೇಳಲ್ಲ. ಪಕ್ಷ ತಿಳಿಸಿದಂತೆ ನಡೆದುಕೊಳ್ಳುತ್ತೇನೆ ಎಂದರು.


Spread the love

About Laxminews 24x7

Check Also

ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ

Spread the loveಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ ಇಂದು ಬೆಳಗಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ