ಬಾಗಲಕೋಟೆ: ಕೃಷ್ಣಾ ನದಿ ಈ ಬಾರಿ ಉಗ್ರ ರೂಪ ತಾಳಿದ ಪರಿಣಾಮ ಪ್ರವಾಹ ಅಕ್ಷರಶಃ ನದಿ ಪಾತ್ರದ ಜನರ ಬದುಕನ್ನು ಬರ್ಬರವಾಗಿಸಿ ಬಿಟ್ಟಿದೆ. ಕಣ್ಣು ಹಾಯಿಸಿದ ಕಡೆಯೆಲ್ಲ ಪ್ರವಾಹ, ಭೀಕರ ಮಳೆ ಜಿಲ್ಲೆಯನ್ನು ಆಘಾತಕ್ಕೆ ತಳ್ಳಿದೆ.

ಪ್ರವಾಹದ ರಣ ಕೇಕೆಗೆ ಗ್ರಾಮಗಳು ಜಲಾವೃತಗೊಂಡರೆ, ಗ್ರಾಮಕ್ಕೆ ಗ್ರಾಮಗಳೆ ನಡುಗಡ್ಡೆಯಾಗಿ ಹೋಗಿವೆ. ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ತಮದಡ್ಡಿ ಗ್ರಾಮ ಸಂಪೂರ್ಣ ಜಲಾವೃತಗೊಂಡಿದ್ದು ಅಪಾರ ಹಾನಿ ಉಂಟು ಮಾಡಿದೆ. ಜನಜೀವನವನ್ನು ಸಂಪೂರ್ಣ ಅಸ್ಯವ್ಯಸ್ತಗೊಳಿಸಿದೆ.

ಸಂತ್ರಸ್ಥರಿಗಾಗಿ ಜಿಲ್ಲಾಡಳಿತ ಕಾಳಜಿ ಕೇಂದ್ರ ತೆರೆದಿದ್ದು ತೇರದಾಳದ ನೀಲಕಂಠೇಶ್ವರ ಶಾಲೆಯಲ್ಲಿ ಸದ್ಯ 200 ಕುಟುಂಬಗಳು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿವೆ. ಗುರುಕುಲದಲ್ಲಿ 37 ಕುಟುಂಬಗಳು ಆಶ್ರಯ ಪಡೆಯುತ್ತಿವೆ.
 Laxmi News 24×7
Laxmi News 24×7
				 
		 
						
					 
						
					 
						
					