ಬೀದರ್: ಲಂಚ ಪಡೆಯುತ್ತಿದ್ದರು ಎನ್ನಲಾದ ವೇಳೆ ತಹಶಿಲ್ದಾರ್ ಎಸಿಬಿ ಬಲೆಗೆ ಬಿದ್ದ ಘಟನೆ ಬೀದರ್ನಲ್ಲಿ ನಡೆದಿದೆ. ತಹಶಿಲ್ದಾರ್ ಗಂಗಾದೇವಿ ಎಸಿಬಿ ಬಲೆಗೆ ಬಿದ್ದ ಅಧಿಕಾರಿ.

ನಗರದ ಲೀಲಾಧರ್ ಎನ್ನುವವರಿಗೆ ಚಿದ್ರಿ ಸರ್ವೆ ನಂಬರ್ನಲ್ಲಿನ 15ರ ಭೂಮಿ ಮುಟೆಷನ್ ಮಾಡಲು ತಹಶೀಲ್ದಾರ್ ಗಂಗಾದೇವಿ ಅವರು 20 ಲಕ್ಷ ನೀಡುವಂತೆ ಡಿಮ್ಯಾಂಡ್ ಮಾಡಿದ್ದರು ಎನ್ನಲಾಗಿದೆ. 15 ಲಕ್ಷ ಕೊಡುವದಾಗಿ ಒಪ್ಪಿಕೊಂಡಿದ್ದ ಲೀಲಾಧರ್ ಎಸಿಬಿಗೆ ಮಾಹಿತಿ ನೀಡಿದ್ದರು.

15 ಲಕ್ಷ ಹಣವನ್ನು ತಹಶೀಲ್ದಾರ ತಮ್ಮ ಮನೆಯಲ್ಲಿ ಪಡೆಯುತ್ತಿದ್ದರು ಎನ್ನಲಾದ ವೇಳೆ ಎಸಿಬಿ ಎಸ್ಪಿ ಮಹೇಶ್ ಮೇಘಣ್ಣನವರ್ ನೇತೃತ್ವದಲ್ಲಿ ದಾಳಿ ನಡೆಸಿದ್ದು ತಹಶೀಲ್ದಾರ್ ಬಲೆಗೆ ಬಿದ್ದಿದ್ದಾರೆ. ಇನ್ನು ನಗರದಲ್ಲಿ ತಹಶೀಲ್ದಾರ್ ಗಂಗಾದೇವಿ ಹತ್ತು ಹಲವು ಭ್ರಷ್ಟಾಚಾರ ಆರೋಪಗಳನ್ನು ಹೊತ್ತಿದ್ದಾರೆ ಎನ್ನಲಾಗಿದೆ.
 Laxmi News 24×7
Laxmi News 24×7
				 
		 
						
					 
						
					 
						
					