Breaking News

ರಿಯಾಲಿಟಿ ಶೋ ಜಡ್ಜ್ ಸ್ಥಾನದಿಂದ ಶಿಲ್ಪಾ ಔಟ್? ರಾಜ್ ಕುಂದ್ರ ಪತ್ನಿ ಜಾಗಕ್ಕೆ ಸ್ಟಾರ್ ದಂಪತಿ ಎಂಟ್ರಿ

Spread the love

ಬಾಲಿವುಡ್ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಪತಿ ಉದ್ಯಮಿ ರಾಜ್ ಕುಂದ್ರ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಜುಲೈ 19ರಂದು ರಾಜ್ ಕುಂದ್ರ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಪತಿಯ ಬಂಧನದಿಂದ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಮುಜುಗರ ಅನುಭವಿಸಬೇಕಾಗಿದೆ. ಪತಿಯ ಬ್ಲೂ ಫಿಲ್ಮ್ ಪ್ರಕರಣ ಶಿಲ್ಪಾ ಶೆಟ್ಟಿ ಪರಿಣಾಮ ಬೀರಿದೆ. ಇತ್ತೀಚಿಗೆ ಮುಂಬೈ ಪೊಲೀಸರು ಶಿಲ್ಪಾ ಶೆಟ್ಟಿಯನ್ನು ವಿಚಾರಣೆ ನಡೆಸಿದ್ದರು. ಇದೆಲ್ಲದರ ನಡುವೆ ಶಿಲ್ಪಾ ಶೆಟ್ಟಿ ಡಾನ್ಸ್ ರಿಯಾಲಿಟಿ ಶೋನಿಂದ ದೂರ ಸರಿದ್ದಾರೆ.

ಶಿಲ್ಪಾ ಶೆಟ್ಟಿ ಹಿಂದಿಯ ಪ್ರಸಿದ್ಧ ಡಾನ್ಸ್ ರಿಯಾಲಿಟಿ ಶೋ, ಸೂಪರ್ ಡಾನ್ಸರ್-4 ನಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದರು. ಆದರೀಗ ಪತಿಯ ಬಂಧನದ ಬಳಿಕ ಶಿಲ್ಪಾ ಶೆಟ್ಟಿ ಶೋಗೆ ಗೈರಾಗಿದ್ದಾರೆ. ಶಿಲ್ಪಾ ಶೋನಿಂದ ಹೊರಬಂದ್ರಾ ಎನ್ನುವ ಅನುಮಾನ ಪ್ರೇಕ್ಷಕರಲ್ಲಿ ಕಾಡುತ್ತಿದೆ. ಮುಂದೆ ಓದಿ…

ಶಿಲ್ಪಾ ಶೆಟ್ಟಿ ಜಾಗ ತುಂಬಿದ್ದ ಕರಿಷ್ಮಾ

ತನ್ನದೆ ಶೈಲಿಯ ಹಾಸ್ಯ, ಸೂಪರ್ ಡಾನ್ಸ್ ಮೂಲಕ ಸೂಪರ್ ಡ್ಯಾನ್ಸರ್-4 ಶೋನ ಅಂದವನ್ನು ಹೆಚ್ಚಿಸಿದ್ದ ನಗುಮೊಗದ ಶಿಲ್ಪಾ ಈಗ ರಿಯಾಲಿಟಿ ಶೋನಿಂದ ದೂರ ಉಳಿದಿದ್ದಾರೆ. ಶಿಲ್ಪಾ ಗೈರು ಪ್ರಕ್ಷಕರಿಗೆ ಭಾರಿ ನಿರಾಸೆ ಮೂಡಿಸಿದೆ. ಆದರೆ ಶಿಲ್ಪಾ ಶೆಟ್ಟಿ ಜಾಗಕ್ಕೆ ಕಳೆದ ವಾರ ಬಾಲಿವುಡ್ ನ ಖ್ಯಾತ ನಟಿ ಕರಿಷ್ಮಾ ಕಪೂರ್ ಎಂಟ್ರಿ ಕೊಟ್ಟಿದ್ದರು. ಇನ್ನು ಈ ವಾರ ಕೂಡ ಶಿಲ್ಪಾ ಶೆಟ್ಟಿ ಭಾಗಿಯಾಗುತ್ತಿಲ್ಲ.

ಈ ವಾರ ಶಿಲ್ಪಾ ಜಾಗದಲ್ಲಿ ಸ್ಟಾರ್ ದಂಪತಿ

 

ಶಿಲ್ಪಾ ಸ್ಥಾನವನ್ನು ಖ್ಯಾತ ಸ್ಟಾರ್ ದಂಪತಿ ತುಂಬುತ್ತಿದ್ದಾರೆ. ರಿತೇಶ್ ದೇಶಮುಖ್ ಮತ್ತು ಜೆನಿಲಿಯಾ ಜೋಡಿ ಈ ವಾರ ಸೂಪರ್ ಡಾನ್ಸರ್-4 ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶಿಲ್ಪಾ ಶೆಟ್ಟಿಯ ಜಾಗವನ್ನು ವಾರಕ್ಕೊಬ್ಬರು ತುಂಬುತ್ತಿದ್ದಾರೆ. ಈ ವಾರ ಜೆನಿಲಿಯಾ ದಂಪತಿಯನ್ನು ಕಿರುತೆರೆಯಲ್ಲಿ ನೋಡಲು ಪ್ರೇಕ್ಷಕರು ಕಾತರರಾಗಿದ್ದಾರೆ.

ಸಿನಿಮಾ ಪ್ರಮೋಟ್ ಮಾಡಿ ಟ್ರೋಲ್ ಆಗಿದ್ದ ಶಿಲ್ಪಾ

ಅಂದಹಾಗೆ ಶಿಲ್ಪಾ ಶೆಟ್ಟಿ ರಿಯಾಲಿಟಿ ಶೋನಿಂದ ಹೊರಬಂದ್ರಾ ಎನ್ನುವ ಮಾಹಿತಿ ಅಧಿಕೃತವಾಗಿಲ್ಲ. ಪತಿ ಜೈಲಿಗೆ ಹೋಗಿರುವ ನೋವಿನಲ್ಲಿರುವ ಶಿಲ್ಪಾ ಯಾವುದೇ ಸಂಭ್ರಮದಲ್ಲಿ ಭಾಗಿಯಾಗಲು ಇಷ್ಟಪಡುತ್ತಿಲ್ಲ. ಅಲ್ಲದೇ ಇತ್ತೀಚಿಗೆ ಶಿಲ್ಪಾ ನಟನೆಯ ಹಂಗಾಮಾ-2 ಸಿನಿಮಾ ಬಿಡುಗಡೆಯಾಗಿದೆ. ಈ ವೇಳೆ ಚಿತ್ರದ ಪ್ರಮೋಷನ್ ಮಾಡಿ ನೆಟ್ಟಿಗರಿಂದ ಹಿಗ್ಗಾಮುಗ್ಗ ಟ್ರೋಲ್ ಆಗಿದ್ದರು. ಹಾಗಾಗಿ ಶಿಲ್ಪಾ ಸಾಧ್ಯವಾಷ್ಟು ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಅಂತರ ಕಾಯ್ದುಕೊಳ್ಳುತ್ತಿದ್ದಾರೆ.

14 ದಿನಗಳ ನ್ಯಾಯಾಂಗ ಬಂಧನದಲ್ಲಿ ಶಿಲ್ಪಾ ಪತಿ

ಶಿಲ್ಪಾ ಮತ್ತೆ ರಿಯಾಲಿಟಿ ಶೋಗೆ ಬರ್ತಾರಾ ಇಲ್ವೋ ಎನ್ನುವುದನ್ನು ಇನ್ನು ಸ್ವಲ್ಪ ದಿನಗಳಲ್ಲೇ ಬಹಿರಂಗವಾಗಲಿದೆ. ಇಂದು ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರ ಪೊಲೀಸ್ ಕಸ್ಟಡಿ ಮುಕ್ತಾಯವಾಗಿದ್ದು, ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿತ್ತು. ಜಾಮೀನು ನಿರಾಕರಿಸಿದ ಬಾಂಬೆ ಹೈಕೋರ್ಟ್ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.


Spread the love

About Laxminews 24x7

Check Also

ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ

Spread the love ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ ಕಲಬುರಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ