ನವದೆಹಲಿ: ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಇಂದು ಬರೋಬ್ಬರಿ 629.03 ಕೋಟಿ ಹಣವನ್ನ ಪ್ರಕೃತಿ ವಿಕೋಪದ ಪರಿಹಾರವಾಗಿ ಬಿಡುಗಡೆ ಮಾಡಿದೆ.
ಕಳೆದ ಬಾರಿಯ ಮುಂಗಾರು ಮಳೆ ಸಂದರ್ಭದಲ್ಲಿ ಭಾರೀ ಪ್ರವಾಹ ಉಂಟಾಗಿತ್ತು. ಉತ್ತರ ಕರ್ನಾಟಕವು ಮಹಾಮಳೆಗೆ ನಲುಗಿ ಹೋಗಿತ್ತು. ಮಳೆಯಿಂದ ಪ್ರವಾಹ ಹಾಗೂ ಭೂಕುಸಿತ ಸಂಭವಿಸಿ ಅಪಾರ ಹಾನಿಯುಂಟಾಗಿತ್ತು. ಮಾತ್ರವಲ್ಲ ಮಹಾರಾಷ್ಟದಲ್ಲೂ ತೀವ್ರ ಹಾನಿಯಾಗಿತ್ತು.

ಇದೀಗ ಕೇಂದ್ರ ಸರ್ಕಾರ 2020ರಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಕ್ಕೆ ಪರಿಹಾರವನ್ನ ನೀಡಿದೆ. ಕರ್ನಾಟಕ ಹಾಗೂ ಮಹಾರಾಷ್ಟ್ರ ಎರಡೂ ರಾಜ್ಯಗಳಿಗೆ ಪರಿಹಾರವನ್ನ ನೀಡಿದ್ದು, ಕರ್ನಾಟಕಕ್ಕೆ ಬರೋಬ್ಬರಿ 629.03 ಕೋಟಿ ಹಣವನ್ನ ಬಿಡುಗಡೆ ಮಾಡಿದ್ರೆ ಮಹಾರಾಷ್ಟ್ರಕ್ಕೆ 701 ಕೋಟಿ ಹಣವನ್ನ ರಿಲೀಸ್ ಮಾಡಿದೆ. ಕರ್ನಾಟಕ ಹಾಗೂ ಮಹಾರಾಷ್ಟ್ರಕ್ಕೆ ಎನ್ಡಿಆರ್ಎಫ್ ನಡಿ ಒಟ್ಟ 133,003 ಕೋಟಿ ಹಣವನ್ನ ಬಿಡುಗಡೆ ಮಾಡಿದೆ.
Laxmi News 24×7