Breaking News

ನೂತನ ‘ಸಂಪುಟ ರಚನೆ’ಯಲ್ಲಿ ಯಾರು ಇನ್.? ಯಾರು ಔಟ್.?

Spread the love

ಬೆಂಗಳೂರು : ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ( BS Yediyurappa Resignation ) ನೀಡುತ್ತಿದ್ದಂತೇ, ರಾಜ್ಯಪಾಲರು ಯಡಿಯೂರಪ್ಪ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ಇದರ ಬೆನ್ನಲ್ಲೇ.. ಯಡಿಯೂರಪ್ಪ ನೇತೃತ್ವದಲ್ಲಿ ರಚನೆಯಾಗಿದ್ದಂತ ಸಚಿವ ಸಂಪುಟ ವಿಸರ್ಜನೆಗೊಂಡಿದೆ. ಇನ್ನೇನಿದ್ದರೂ ನೂತನ ಸಿಎಂ, ನೂತನ ಸಚಿವ ಸಂಪುಟ ರಚನೆಯಾಗಬೇಕಿದೆ. ಹಾಗಾದ್ರೇ.. ಕರ್ನಾಟಕದ ನೂತನ ಮುಖ್ಯಮಂತ್ರಿ ( Karnataka New Chief Minister ) ನೇಮಕಗೊಂಡು, ಸಚಿವ ಸಂಪುಟ ( Karnataka Cabinet ) ರಚನೆಯಾದ್ರೇ ಯಾರು ಇನ್..? ಯಾರು ಔಟ್ ಎನ್ನುವ ಕುರಿತಂತೆ ಮುಂದೆ ಓದಿ..

 

ಬಿಎಸ್ ಯಡಿಯೂರಪ್ಪ ರಾಜೀನಾಮೆ ನಂತ್ರ, ಕರ್ನಾಟಕದ ನೂತನ ಮುಖ್ಯಮಂತ್ರಿ ಯಾರ್ ಆಗಲಿದ್ದಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ಜಾತಿ ಬಲದ ಲೆಕ್ಕಾಚಾರದಲ್ಲಿ ಮತ್ತೆ ರಾಜ್ಯದಲ್ಲಿ ಲಿಂಗಾಯತ ಸಮುದಾಯದವರಿಗೂ ಸಿಎಂ ಸ್ಥಾನವನ್ನು ನೀಡಲಿದೆ ಎನ್ನಲಾಗುತ್ತಿದೆ. ಈ ಹಿನ್ನಲೆಯಲ್ಲಿ ಮುಂಚೂಣಿಯಲ್ಲಿ ಮುರುಗೇಶ ನಿರಾಣಿ, ಪ್ರಹ್ಲಾದ ಜೋಶಿಯವರ ಹೆಸರು ಕೇಳಿ ಬರುತ್ತಿವೆ.

 

ಒಂದು ವೇಳೆ ನೂತನ ಸಿಎಂ ನೇಮಕಗೊಂಡ ನಂತ್ರ ರಾಜ್ಯ ಸಚಿವ ಸಂಪುಟ ಪುನಾರಚನೆ ಆಗೋದು ಶತಸಿದ್ಧ ಎನ್ನಲಾಗಿದೆ. ಹಾಲಿ ಮಂತ್ರಿಮಂಡಲದಲ್ಲಿನ ಕೆಲ ಸಚಿವರಿಗೆ ಕೋಕ್ ನೀಡಲಿದ್ದು, ನೂತನ ಸಚಿವ ಸಂಪುಟಕ್ಕೆ ಹೊಸಬರನ್ನು, ಯುವಕರನ್ನ ಸೇರ್ಪಡೆಗೊಳಿಸಿಕೊಳ್ಳಲಾಗುತ್ತದೆ ಎನ್ನಲಾಗಿದೆ.

 

ಅದರಲ್ಲಿ ಈಗಿನ 10 -12 ಸಚಿವರನ್ನು ನೂತನ ಸಚಿವ ಸಂಪುಟದಿಂದ ಕೈಬಿಟ್ಟು, ಹೊಸ ಮುಖಗಳಿಗೆ ಮಣೆ ಹಾಕುವಂತ ನಿರ್ಧಾರವನ್ನು ಬಿಜೆಪಿ ಹೈಕಮಾಂಡ್ ಸೂಚನೆಯಲ್ಲಿ ನಡೆಯಲಿದೆ. ಅದರಲ್ಲೂ ಒಂದು ಮೊಟ್ಟೆಯ ಕಥೆಯ ಮೂಲಕ ಸುದ್ದಿಯಾದಂತ ಶಶಿಕಲಾ ಜೊಲ್ಲೆ, ಬಿಸಿ ಪಾಟೀಲ್, ಪ್ರಭು ಚೌವ್ಹಾಣ್, ಸಿಸಿ ಪಾಟೀಲ್, ಶಿವರಾಮ್ ಹೆಬ್ಬಾರ್, ಸುರೇಶ್ ಕುಮಾರ್, ಶ್ರೀಮಂತ ಪಾಟೀಲ್, ಕೆಸಿ ನಾರಾಯಣಗೌಡ, ಕೋಟಾ ಶ್ರೀನಿವಾಸ ಪೂಜಾರಿ ಸೇರಿದಂತೆ ಅನೇಕರು ಸಚಿವ ಸ್ಥಾವನ್ನು ಕಳೆದುಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

 

ಹೀಗೆ ಸಚಿವರಾಗಿದ್ದಂತವರನ್ನು ಕೈಬಿಡಲು ನಿರ್ಧರಿಸಲಾಗಿದ್ದು, ಇವರ ಸ್ಥಾನಕ್ಕೆ ನೂತನ ಸಚವರನ್ನಾಗಿ ಹಾಲಪ್ಪ ಆಚಾರ್, ಪ್ರೀತಂ ಗೌಡ, ರೂಪಾಲಿ ನಾಯ್ಕ್, ಎಸ್ ಎ ರಾಮದಾಸ್, ಸುನೀಲ್ ಕುಮಾರ್, ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ಇತರರಿಗೆ ನೀಡುವ ಸಾಧ್ಯತೆ ಇದೆ. ಈ ಮೂಲಕ ಇವರಲ್ಲೇ ನೂತನ ಸಚಿವ ಸಂಪುಟಕ್ಕೆ ಇನ್ ಆಗಲಿದ್ದಾರೆ ಎನ್ನಲಾಗಿದೆ. ಆ ಬಗ್ಗೆ ಕಾದು ನೋಡಬೇಕಿದೆ.


Spread the love

About Laxminews 24x7

Check Also

ಶ್ರೀರಾಮುಲುಗೂ ವಿಜಯೇಂದ್ರ ಮುಂದುವರಿಯುವುದು ಬೇಕಿಲ್ಲ, ಅದನ್ನು ಚಾಣಾಕ್ಷತೆಯಿಂದ ಹೇಳುತ್ತಾರೆ!

Spread the loveಕೋಲಾರ: ಹಿರಿಯ ಬಿಜೆಪಿ ನಾಯಕ ಬಿ ಶ್ರೀರಾಮುಲು ಅವರಿಗೂ ಬಿವೈ ವಿಜಯೇಂದ್ರ ಪಕ್ಷದ ರಾಜ್ಯಾಧ್ಯಕ್ಷನಾಗಿ ಮುಂದುವರಿಯುವುದು ಬೇಕಿಲ್ಲ, ಅದರೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ