ಬಸವಕಲ್ಯಾಣ: ತಾಲೂಕಿನ ಘೋಟಾಳ ಗ್ರಾಮದ ಮುಚ್ಚಿಹೋದ ಕೆರೆಯನ್ನು ಮನರೇಗಾ ಯೋಜನೆಯಡಿ ಪುನ: ನಿರ್ಮಿಸುವ ಮೂಲಕ ಗ್ರಾಮಸ್ಥರ ಹಾಗೂ ರೈತರ ಮೊಗದಲ್ಲಿ ಮಂದಹಾಸ ಮುಡುವಂತೆ ಮಾಡಿದೆ.
ಗಡಿಭಾಗವಾದ ಈ ಗ್ರಾಮದಲ್ಲಿದ್ದ ಒಂದೇ ಒಂದು ಕೆರೆ ಸಂಪೂರ್ಣವಾಗಿ ಹೂಳು ಬಿದ್ದು ಮುಚ್ಚಿಹೋಗಿತ್ತು, ಇದರಿಂದ ಮಳೆ ನೀರು ಕೆರೆಯಲ್ಲಿ ನಿಲ್ಲದೆ ಯಾರಿಗೂ ಉಪಯೋಗಕ್ಕೆ ಬಾರದಂತೆ ಹರಿದು ಹೋಗುತ್ತಿದ್ದವು. ಇದನ್ನು ಕಂಡ ತಾ.ಪಂ.ಅಧಿಕಾರಿಗಳು ಮತ್ತು ಗ್ರಾ.ಪಂ.ಸದಸ್ಯರು ಮನರೇಗಾ ಯೋಜನೆಯಡಿ ಎರಡು ಹಂತದಲ್ಲಿ ಸುಮಾರು 10 ಲಕ್ಷ ರೂ. ಗಳಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿ ಕೊಂಡು ಅಭಿವೃದ್ಧಿ ಗೊಳಿಸಲಾಗುತ್ತಿದೆ.
ಇಗಾಗಲೇ ಸುಮಾರು 30 ಫೀಟ್ ಆಳವಾಗಿ ಹೂಳೆತ್ತುವ ಕಾಮಗಾರಿ ಮುಗದಿದ್ದು, ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೆರೆಯ ಮೈದುಂಬಿ ಕರಿಯುತ್ತಿರುವುದು ನೋಡುಗರ ಮನಸ್ಸು ಸೆಳೆಯುವಂತೆ ಮಾಡಿದೆ. ಇದರಿಂದ ಗ್ರಾಮದಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದ್ದು ಬಾವಿ ಹಾಗೂ ಕೊಳವೆ ಬಾವಿಯಲ್ಲಿ ನೀರಿನ ಮಟ್ಟ ಜಾಸ್ತಿಯಾಗಿದೆ ಎಂದು ಗ್ರಾಮಸ್ಥರ ಹಾಗೂ ಗ್ರಾ.ಪಂ.ಸದಸ್ಯರ ಅಭಿಪ್ರವಾಗಿದೆ.
ಒಟ್ಟಿನಲ್ಲಿ ಗ್ರಾಮಕ್ಕೆ ನೀರಿನ ಆಸರೆಯಾದ ಕೆರೆಯನ್ನು ಪುನ:ಅಭಿವೃದ್ಧಿ ಗೊಳಿಸುವ ಮೂಲಕ ಭವಿಷ್ಯದಲ್ಲಿ ನೀರಿನ ಸಮಸ್ಯೆ ಆಗದಂತೆ ಮಾಡಿರುವುದು ಮಾತ್ರ ವಿಶೇಷವಾಗಿದೆ.