ಟೋಕಿಯೊ: “ನನಗೆ ಪಿಜಾ, ಐಸ್‌ಕ್ರೀಮ್ ತಿನ್ನಬೇಕೆಂದು ಬಹಳ ಆಸೆಯಾಗುತ್ತಿದೆ. ಕಳೆದೊಂದು ತಿಂಗಳಿಂದ ನಾನಿದನ್ನು ತಿಂದಿಲ್ಲ…’ ಹೀಗೆಂದು ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಗೆದ್ದ ಬಳಿಕ ಮೀರಾಬಾಯಿ ಚಾನು ತಮ್ಮ ಅಭಿಲಾಷೆಯನ್ನು ತೋಡಿಕೊಂಡಿದ್ದರು. ಅವರ ಈ ಮಾತನ್ನು ಆಲಿಸಿದ “ಡೊಮಿನೋಸ್ ಇಂಡಿಯಾ’ ದೊಡ್ಡದೊಂದು ಆಫರ್ ನೀಡಿದೆ. ಚಾನು ಅವರಿಗೆ ಜೀವಮಾನದುದ್ದಕ್ಕೂ ಉಚಿತವಾಗಿ ಪಿಜಾ ನೀಡುವುದಾಗಿ ಘೋಷಿಸಿದೆ.
“ದೇಶಕ್ಕಾಗಿ ಪದಕ ಗೆದ್ದ ನಿಮಗೆ ಅಭಿನಂದನೆಗಳು. ಭಾರತದ ಕೋಟ್ಯಂತರ ಮಂದಿಯ ಕನಸನ್ನು ನೀವು ನನಸು ಮಾಡಿದ್ದೀರಿ. ನಿಮಗೆ ಜೀವಮಾನದುದ್ದಕ್ಕೂ ಉಚಿತವಾಗಿ ಪಿಜಾ ನೀಡುವುದು ನಮ್ಮ ಭಾಗ್ಯ. ಮತ್ತೂಮ್ಮೆ ಅಭಿನಂದನೆಗಳು’ ಎಂದು ಡೊಮಿನೋಸ್ ಇಂಡಿಯಾ ಟ್ವೀಟ್ ಮಾಡಿದೆ. ಆದರೆ ಐಸ್‌ಕ್ರೀಮ್ ಆಫರ್ ಯಾರಿಂದಲೂ ಬಂದಿಲ್ಲ!
ಇಂದು ಆಗಮನ: ಮೀರಾಬಾಯಿ ಚಾನು ಸೋಮವಾರ ತವರಿಗೆ ಆಗಮಿಸಲಿದ್ದಾರೆ. ಸಂಜೆ 4.45ಕ್ಕೆ ಹೊಸದಿಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Laxmi News 24×7