ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರ ಸ್ವೀಕರಿಸಿದ ದಿನದಿಂದಲೂ ರಾಜಕೀಯ ಅನಿಶ್ಚಿತತೆ ಇದೆ ಎಂದು ಹೇಳಿಕೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಅವರ ಆಡಳಿತ, ಜನರಿಗೆ ಕೊಟ್ಟ ಕೊಡುಗೆ ಎಂದರು. ಇನ್ನು ಬಿಎಸ್ವೈಗೆ ಹೈಕಮಾಂಡ್ನಿಂದ ಸಂದೇಶ ಬರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ಇವತ್ತು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಊರಲ್ಲಿಲ್ಲ ಅಂತ ಪರೋಕ್ಷವಾಗಿ ಇಂದು ಸಿಎಂ ಬದಲಾಗಲ್ಲವೆಂದು ಡಿ.ಕೆ.ಶಿವಕುಮಾರ್ ಹೇಳಿದರು.
ಕೊವಿಡ್ ಸ್ಥಿತಿ ಬಗ್ಗೆ ನಮ್ಮ ತಂಡ ಅಧ್ಯಯನ ವರದಿ ನೀಡಿದೆ. ಆಡಳಿತ ಪಕ್ಷದ ಸಚಿವರು, ಶಾಸಕರು ಕೂಡ ಮಾಡಿಲ್ಲ. ಕೊವಿಡ್ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ನಾವು ಸಮರ್ಥವಾಗಿ ಕೊವಿಡ್ ನಿರ್ವಹಣೆ ಮಾಡಿದ್ದೇವೆ. ಎರಡೂವರೆ ಕೋಟಿ ಜನರಿಗೆ ನಾವು ಸಹಾಯ ಮಾಡಿದ್ದೇವೆ. ಆಕ್ಸಿಜನ್ ಕೊರತೆಯಿಂದ ಯಾರೂ ಮೃತಪಟ್ಟಿಲ್ಲ ಅಂತಾರೆ. ಕೇಂದ್ರದ ಸಚಿವರೇ ಸಂಸತ್ನಲ್ಲಿ ಹೀಗೆ ಉತ್ತರ ಕೊಡುತ್ತಾರೆ. ಆದರೆ ಇಲ್ಲಿ ಮೃತರ ಕುಟುಂಬಕ್ಕೆ ಸಿಎಂ ಏಕೆ ಪರಿಹಾರ ಕೊಟ್ಟರು? ಎಂದು ಕೆಪಿಸಿಸಿ ಅಧ್ಯಕ್ಷ ಪ್ರಶ್ನಿಸಿದ್ದಾರೆ.
ಕಳೆದ ವರ್ಷ ಮನೆ ಕಳೆದುಕೊಂಡವರಿಗೇ ಪರಿಹಾರ ಸಿಕ್ಕಿಲ್ಲ. ಪರಿಹಾರ ನೀಡಿಲ್ಲ ಎಂದ ಮೇಲೆ ಸರ್ಕಾರ ಏಕೆ ನಡೆಸಬೇಕು. ಬಿಜೆಪಿಗೆ ಜನರ ಸೇವೆ ಮಾಡಲು ಆಗಲ್ಲ ಎಂಬುದಕ್ಕೆ ಇದೇ ಸಾಕ್ಷಿ. ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ನೆರೆ ವೇಳೆ ಹಿಂದೆ ಪ್ರಧಾನಿಗಳು ಬೇರೆ ರಾಜ್ಯಕ್ಕೆ ಹೋಗಿದ್ರು. ಆದರೆ ನಮ್ಮ ರಾಜ್ಯಕ್ಕೆ ಮಾತ್ರ ಪ್ರಧಾನಿ ಮೋದಿ ಬರಲಿಲ್ಲ. ಪ್ರಧಾನಿಯಿಂದ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟರು.