Breaking News

Tokyo Olympics 2020: ಪದಕ ಗೆಲ್ಲುವ ಭಾರತೀಯ ಕ್ರೀಡಾಪಟುಗಳ ಕೋಚ್​ಗಳಿಗೂ ನಗದು ಬಹಮಾನ ನೀಡುವ ಘೋಷಣೆ ಮಾಡಿದ ಐಒಎ

Spread the love

ಭಾರತದ ಕ್ರೀಡಾಪಟುಗಳು ಒಲಂಪಿಕ್ಸ್​ನಲ್ಲಿ ಪದಕ ಗೆದ್ದರೆ ಕೇವಲ ಅವರ ಬ್ಯಾಂಕ್ ಬ್ಯಾಲೆನ್ಸ್ ಮಾತ್ರ ಉಬ್ಬುವುದಿಲ್ಲ, ಅವರನ್ನು ಆ ಹಂತಕ್ಕೆ ತಯಾರು ಮಾಡಿದ ತರಬೇತುದಾರರು ಮತ್ತು ಕೋಚ್​ಗಳು ಸಹ ನಗದು ಇನಾಮು ಪಡೆಯಲಿದ್ದಾರೆ. ಶನಿವಾರದಂದು ಮಹಿಳೆಯರು ಭಾರ ಎತ್ತುವ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದು ದಾಖಲೆ ನಿರ್ಮಿಸಿ ದ ಮೀರಾಬಾಯಿ ಚಾನು ಅವರ ಕೋಚ್ ವಿಜಯ ಶರ್ಮ ಅವರಿಗೆ 10 ಲಕ್ಷ ರೂ. ಗಳ ಬಹುಮಾನ ನೀಡುವ ಘೋಡಣೆಯನ್ನು ಭಾರತೀಯ ಒಲಂಪಿಕ್ ಸಂಸ್ಥೆ (ಐಒಎ) ಮಾಡಿದೆ. ಸಂಸ್ಥೆ ಮಾಡಿರುವ ಘೋಷಣೆ ಪ್ರಕಾರ ಚಿನ್ನದ ಪದಕೆ ಗೆಲ್ಲುವ ಕ್ರೀಡಾಪಟುವಿನ ಕೋಚ್​ ರೂ. 12.5 ಲಕ್ಷಗಳನ್ನು ಬಹುಮಾನ ಪಡೆಯಲಿದ್ದಾರೆ ಮತ್ತು ಕಂಚಿನ ಪದಕ ಗೆಲ್ಲುವ ಅಥ್ಲೀಟ್​ನ ಕೋಚ್​ ರೂ.7.5 ಲಕ್ಷ ನಗದನ್ನು ರಿವಾರ್ಡ್​ ಆಗಿ ಪಡೆಯಲಿದ್ದಾರೆ.

ಒಲಂಪಿಕ್ಸ್​ನಲ್ಲಿ ಪದಕಗಳನ್ನು ಗೆಲ್ಲುವ ಮಟ್ಟಕ್ಕೆ ಕ್ರೀಡಾಪಟುವನ್ನು ಕೋಚ್​ಗಳು ಹುರಿಗೊಳಿಸುವುದರಿಂದ ಅವರೂ ಸಹ ಬಹಮಾನ ಮತ್ತು ಪ್ರೋತ್ಸಾಹಕ್ಕೆ ಅರ್ಹರಾಗಿರುತ್ತಾರೆ. ಅಥ್ಲೀಟ್​ಗಳನ್ನು ತಯಾರು ಮಾಡಲು ಕೋಚ್​ಗಳು ಹಗಲು ರಾತ್ರಿ ಶ್ರಮಪಡುತ್ತಾರೆ. ಅಥ್ಲೀಟ್​ಗಳಂತೆ ಅವರು ಸಹ ತ್ಯಾಗಗಳನ್ನು ಮಾಡಬೇಕಾಗುತ್ತದೆ,’ ಎಂದು ಐಒಎ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಹೇಳಿದ್ದಾರೆ.

ಟೊಕಿಯೋ ಒಲಂಪಿಕ್ಸ್​​ನಲ್ಲಿ ಸ್ವರ್ಣ ಪದಕೆ ಗೆಲ್ಲುವ ಅಥ್ಲೀಟ್​ಗೆ ರೂ. 75 ಲಕ್ಷ ನೀಡುವುದಾಗಿ ಐಒಎ ಗುರುವಾರದಂದು ಹೇಳಿತ್ತು. ಅದಲ್ಲದೆ ಚಿನ್ನದ ಪದಕ ಗೆಲ್ಲುವ ಕ್ರೀಡಾಪಟು ಪ್ರತಿನಿಧಿಸುವ ಕ್ರೀಡಾ ಸಂಸ್ಥೆಗಳಿಗೆ (ರಾಷ್ಟ್ರೀಯ ಕ್ರೀಡಾ ಒಕ್ಕೂಟ, ಎನ್​ಎಸ್​ಎಫ್) ಬೋನಸ್ ರೂಪದಲ್ಲಿ ರೂ. 25 ಲಕ್ಷ ನೀಡುವ ಘೋಷಣೆ ಯನ್ನೂ ಅದು ಮಾಡಿತ್ತು.

ಟೊಕಿಯೋ ಒಲಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಗೆಲ್ಲುವವರಿಗೆ ರೂ. 40 ಲಕ್ಷ ಮತ್ತು ಕಂಚಿನ ಪದಕ ಗೆಲ್ಲುವವರಿಗೆ ರೂ. 25 ಲಕ್ಷ ನೀಡುವ ಘೋಷಣೆಯನ್ನೂ ಐಒಎ ಮಾಡಿದೆ. ಹಾಗೆಯೇ, ಈ ಒಲಂಪಿಕ್ಸ್​ನಲ್ಲಿ ಬಾಗವಹಿಸಿರುವ ಪ್ರತಿಯೊಬ್ಬ ಅಥ್ಲೀಟ್​ಗೆ ರೂ. 1ಲಕ್ಷ ಮತ್ತು ಪದಕ ಗೆಲ್ಲುವ ಎನ್​ಎಸ್​ಎಫ್​ಗಳಿಗೆ ರೂ. 30 ಲಕ್ಷ ನೀಡುವುದಾಗಿ ಐಒಎ ಹೇಳಿದೆ.


Spread the love

About Laxminews 24x7

Check Also

ಕುಪ್ಪಟಗಿರಿ ಕ್ರಾಸ್ ಬಳಿ ಹೊಸ ಟ್ರಾನ್ಸ್’ಫಾರ್ಮರ್ ಲೋಕಾರ್ಪಣೆಗೊಳಿಸಿದ ಮಾಜಿ ಶಾಸಕ ಅರವಿಂದ ಪಾಟೀಲ್

Spread the love ಕುಪ್ಪಟಗಿರಿ ಕ್ರಾಸ್ ಬಳಿ ಹೊಸ ಟ್ರಾನ್ಸ್’ಫಾರ್ಮರ್ ಲೋಕಾರ್ಪಣೆಗೊಳಿಸಿದ ಮಾಜಿ ಶಾಸಕ ಅರವಿಂದ ಪಾಟೀಲ್ ಖಾನಾಪೂರ ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ