Breaking News

ಈ ಹಿಂದೆ ತುಮಕೂರಿನಲ್ಲಿ ಯಡಿಯೂರಪ್ಪ ಕೊಟ್ಟಿದ್ದ ಕವರ್ ಕಾಣಿಕೆಯನ್ನ ತಿರಸ್ಕರಿಸಿದ್ದೆ: ಜಯ ಮೃತ್ಯುಂಜಯ ಸ್ವಾಮೀಜಿ

Spread the love

ಬೆಂಗಳೂರು: ಮುಖ್ಯಮಂತ್ರಿ ನಿವಾಸದಲ್ಲಿ ಮಠಾಧೀಶರು ಕವರ್ ಪಡೆದ ವಿಚಾರಕ್ಕೆ ಸಂಬಂಧಿಸಿ ಕವರ್ನಲ್ಲಿ ಏನಿತ್ತೆಂದು ಗೊತ್ತಿಲ್ಲ ಅಂತ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ಪುರಾಣ ಪುಸ್ತಕವಿತ್ತೋ, ವಚನ ಪುಸ್ತಕವಿತ್ತೋ ಗೊತ್ತಿಲ್ಲವೆಂದು ಹೇಳಿಕೆ ನೀಡಿದ ಸ್ವಾಮೀಜಿ, ಈ ಹಿಂದೆ ತುಮಕೂರಿನಲ್ಲಿ ಯಡಿಯೂರಪ್ಪ ಕೊಟ್ಟಿದ್ದ ಕಾಣಿಕೆ ತಿರಸ್ಕರಿಸಿದ್ದೆ. ಈಗ ಸ್ವಾಮೀಜಿಗಳಿಗೆ ಕೊಟ್ಟಿದ್ದ ಕವರ್ ಬಗ್ಗೆ ನನಗೆ ಗೊತ್ತಿಲ್ಲವೆಂದು ಹೇಳಿದ್ದಾರೆ.

ಒಬ್ಬರ ಪರವಾಗಿ ಸ್ವಾಮೀಜಿಗಳು ಬ್ಯಾಟ್ ಬೀಸಿದ್ದು ಪ್ರಜಾಪ್ರಭುತ್ವದಲ್ಲಿ ಮಾರಕ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಯ ಮೃತ್ಯುಂಜಯ ಸ್ವಾಮೀಜಿ, ಸುತ್ತೂರು ಶ್ರೀಗಳು, ಸಿದ್ದಗಂಗಾ ಶ್ರೀಗಳು, ಆದಿಚುಂಚನಗಿರಿ ಶ್ರೀಗಳು ಸಿರಿಗೆರೆ ಶ್ರೀಗಳು ಮಠಕ್ಕೆ ಕರೆದು ಸಲಹೆಗಳನ್ನು ಕೊಡುತ್ತಿದ್ದರು. ಆ ರೀತಿ ನಮ್ಮಲ್ಲಿ ಬಂದರೆ ಸಲಹೆ ಕೊಡುತ್ತೇನೆ. ಆದರೆ ನಾನು ಒಬ್ಬರ ಪರವಾಗಿ ಈ ರೀತಿ ಹೋಗೋದಿಲ್ಲ ಅಂತಾ ಹೇಳಿದರು.

ಮಠಾಧೀಶರಿಗೆ ಸಿಎಂ ಬದಲು ಮಾಡುವ ಶಕ್ತಿ ಇಲ್ಲ. ಅದನ್ನ ದೇಶದ ಪ್ರಧಾನಿ ನಿರ್ಣಯಿಸುತ್ತಾರೆ. ಅದನ್ನ ನಾವೆಲ್ಲರು ಸ್ವಾಗತಿಸಬೇಕು ಅಂತಾ ಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.


Spread the love

About Laxminews 24x7

Check Also

ಸ್ನಾನದ ಕೋಣೆಯಲ್ಲಿ ಕಾಲು ಜಾರಿ ಬಿದ್ದು ಹಿರಿಯ ನಟ ಉಮೇಶ್ ಅಸ್ವಸ್ಥ, ಆಸ್ಪತ್ರೆಗೆ ದಾಖಲು

Spread the loveಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಎಂ.ಎಸ್‌.ಉಮೇಶ್‌ ಅವರು ಮನೆಯ ಸ್ನಾನದ ಕೋಣೆಯಲ್ಲಿ ಕಾಲು ಜಾರಿ ಬಿದ್ದು ಗಾಯಗೊಂಡಿದ್ದು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ