Breaking News

ಗೋಕಾಕ ಮತ್ತು ಮೂಡಲಗಿ ತಾಲೂಕಿನಲ್ಲಿ ಶುಕ್ರವಾರ ೮೭ ಕೊರೋನಾ ವರದಿಗಳು ದೃಢ

Spread the love

ಗೋಕಾಕ: ಗೋಕಾಕ ಮತ್ತು ಮೂಡಲಗಿ ತಾಲೂಕಿನಲ್ಲಿ ಶುಕ್ರವಾರ ೮೭ ಕೊರೋನಾ ವರದಿಗಳು ದೃಢಪಟ್ಟಿವೆ ಎಂದು ತಾಲೂಕಾ ವೈದ್ಯಾಧಿಕಾರಿ ಡಾ. ಜಗದೀಶ ಜಿಂಗಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿರುವ ಅವರು, ಗೋಕಾಕ ನಗರದಲ್ಲಿಯೆ ಇಂದು ಒಂದೇ ದಿನದಲ್ಲಿ ಹಾಪ್ ಸೆಂಚುರಿ ಸಮೀಪಿಸಿದ್ದು, ನಗರದಲ್ಲಿ ಕೊರೋನಾ ಪೀಡಿತರ ಸಂಖ್ಯೆ ಒಂದೇ ದಿನ ೪೭ ಕ್ಕೆ ಬಂದು ತಲುಪಿದೆ.

ಗ್ರಾಮೀಣ ಪ್ರದೇಶ ಅಂಕಲಗಿಯಲ್ಲಿ ೧೮ ಪ್ರಕರಣಗಳು ವರದಿಯಾಗಿದ್ದು ಆತಂಕ ಹೆಚ್ಚಿಸಿದೆ. ಉಳಿದಂತೆ ಮೂಡಲಗಿ ನಗರದಲ್ಲಿ ೫, ಕೊಣ್ಣೂರ ೫, ಸುಣದೋಳಿ ೨ ಮತ್ತು ಶಿಂಧಿಕುರಬೇಟ್, ಮಲ್ಲಾಪುರ ಪಿ.ಜಿ. ಘಟಪ್ರಭಾ, ಅಡಿಬಟ್ಟಿ, ಮಸಗುಪ್ಪಿ, ಉರುಬಿನಹಟ್ಟಿ, ಯಾದವಾಡ, ಮಮದಾಪುರ, ನಾಗನೂರ ಮತ್ತು ಹುಣಶ್ಯಾಳದಲ್ಲಿ ತಲಾ ಒಂದು ಪ್ರಕರಣಗಳು ದೃಢಪಟ್ಟಿವೆ ಎಂದು ಡಾ. ಜಿಂಗಿ ಮಾಹಿತಿ ನೀಡಿದ್ದಾರೆ.


Spread the love

About Laxminews 24x7

Check Also

ವಿದ್ಯಾರ್ಥಿಗಳು ಸತತ ಪ್ರಯತ್ನದಿಂದ ವಿಜಯಶಾಲಿಗಳಾಗಿ – ಇಕ್ಬಾಲ್ ಪೀರಜಾದೆ.

Spread the love ಹುಕ್ಕೇರಿ : ವಿದ್ಯಾರ್ಥಿಗಳು ಸತತ ಪ್ರಯತ್ನದಿಂದ ವಿಜಯಶಾಲಿಗಳಾಗಿ – ಇಕ್ಬಾಲ್ ಪೀರಜಾದೆ. ವಿದ್ಯಾರ್ಥಿಗಳು ಸತತ ಪ್ರಯತ್ನದಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ