Breaking News

ಬಾಲಿವುಡ್ ನ ‘ಬ್ಯಾಡ್ ಬಾಯ್’ ಮದುವೆನೇ ಆಗಿಲ್ಲ ಅನ್ನೋದು ದೊಡ್ಡ ಸುಳ್ಳಾ..? ದುಬೈನಲ್ಲಿದ್ದಾರಾ ಪತ್ನಿ – ಮಗಳು..?

Spread the love

ಬಾಲಿವುಡ್ ನ ಬ್ಯಾಡ್ ಬಾಯ್, ಸುಲ್ತಾನ , ಬಿ ಟೌನ್ ನ ಮೋಸ್ಟ್ ಎಲಿಜಿಬಲ್ ಬ್ಯಾಚ್ಯುಲರ್ ಎಂದೆಲ್ಲಾ ಕರೆಸಿಕೊಳ್ಳುವ ಸಲ್ಮಾನ್ ಖಾನ್ ಗೆ ಈಗ 55 ವರ್ಷ. ಆದ್ರೂ ಮದುವೆಯಾಗಿಲ್ಲ. ಸಲ್ಮಾನ್ ಖಾನ್ ಏಕೆ ಮದುವೆ ಆಗಿಲ್ಲ ಎಂಬ ಪ್ರಶ್ನೆ ಆಗಾಗ ಕೇಳಿ ಬರ್ತಾನೆ ಇದೆ. ಹಲವು ನಟಿಯರ ಜೊತೆಗೆ ಸಲ್ಮಾನ್ ಖಾನ್ ಹೆಸರು ಕೂಡ ಕೇಳಿ ಬರುತ್ತಿರುತ್ತೆ.. ಆದ್ರೆ ಇದೀಗ ಶಾಕಿಂಗ್ ವಿಚಾರವೊಂದು ತಿಳಿದುಬಂದಿದೆ..

ಹೌದು.. ಸಲ್ಮಾನ್‌ ಗೆ ಈಗಾಗಲೇ ಮದುವೆ ಆಗಿದೆ, ಆದರೆ ಪತ್ನಿ ಮಕ್ಕಳು ದುಬೈನಲ್ಲಿದ್ದಾರೆ.. ಅಲ್ಲಿಯೇ ಅವರನ್ನ ರಹಸ್ಯವಾಗಿ ಇರಿಸಲಾಗಿದೆ ಎಂಬ ಸುದ್ದಿ ಈಗ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿ ಮಾಡಿದೆ. ನಟ ಸಲ್ಮಾನ್ ಖಾನ್‌ ಗೆ ದುಬೈನಲ್ಲಿ ಪತ್ನಿ ಮತ್ತು 17 ವರ್ಷದ ಮಗಳು ಇದ್ದಾರೆ ಎನ್ನುವ ವಿಚಾರ ಭಾರೀ ಸೌಂಡ್ ಮಾಡ್ತಿದೆ. ಈ ಕುರಿತು ಸ್ವತಃ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಪ್ರಶ್ನಿಸಿದ್ದಾರೆ.

ಅರ್ಬಾಜ್ ಖಾನ್ ನಿರೂಪಣೆ ಮಾಡುವ ಹೊಸ ಟಾಕ್ ಶೋನ ಮೊದಲ ಸಂಚಿಕೆಯಲ್ಲಿ ಸಹೋದರ ಸಲ್ಮಾನ್ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂವಾದದಲ್ಲಿ ಸಲ್ಮಾನ್ ಖಾನ್‌ ಗೆ ದುಬೈನಲ್ಲಿ ಪತ್ನಿ ಮತ್ತು 17 ವರ್ಷದ ಮಗಳು ಇದ್ದಾರೆ. ಸಲ್ಮಾನ್ ಅವರನ್ನು ಬಚ್ಚಿಟ್ಟಿದ್ದಾರೆ ಎಂದು ನೆಟ್ಟಿಗನೊಬ್ಬ ಕಾಮೆಂಟ್ ಮಾಡಿರುವ ವಿಚಾರವನ್ನು ಸ್ವತಃ ಅರ್ಬಾಜ್ ಖಾನ್ ಹೇಳಿದರು. ಅದಕ್ಕೆ ಪಾಸಿಟಿವ್ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದೂ ತಿಳಿಸಿದರು. ಈ ಆರೋಪಕ್ಕೆ ಸಲ್ಲು ಸ್ಪಷ್ಟನೆ ನೀಡಿದ್ದಾರೆ.

ನಿನ್ನ ಪತ್ನಿ ನೂರ್ ಮತ್ತು 17 ವರ್ಷದ ಮಗಳು ದುಬೈನಲ್ಲಿದ್ದಾರೆ ಎಂದು ಭಾರತೀಯರಿಗೆ ತಿಳಿದಿದೆ. ಎಷ್ಟು ದಿನ ನಮ್ಮನ್ನೂ ಮೂರ್ಖರನ್ನಾಗಿಸುತ್ತೀಯಾ, ಎಂದು ನೆಟ್ಟಿಗ ಮಾಡಿದ್ದ ಕಾಮೆಂಟ್ ಅರ್ಬಾಜ್ ಓದಿ ಹೇಳಿದರು. ಇನ್ನೂ ಇದಕ್ಕೆ ಪ್ರತಿಕ್ರಿಯಿಸಿದ ಸಲ್ಮಾನ್, ಈ ಜನರು ತಿಳಿದವರು. ಇವೆಲ್ಲ ಅನಗತ್ಯ ವಿಷಯ. ಅವರು ಯಾರ ಕುರಿತು ಮಾತನಾಡುತ್ತಿದ್ದಾರೆ ಎಂದು ನನಗೆ ತಿಳಿದಿಲ್ಲ. ನನಗೆ ಪತ್ನಿ ಇಲ್ಲ, ನಾನು ಹಿಂದೂಸ್ತಾನ್ ಗ್ಯಾಲೆಕ್ಸಿ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದೇನೆ. ಇದು ಭಾರತೀಯರಿಗೆ ತಿಳಿದಿದೆ ಎಂದು ಹೇಳಿದ್ದಾರೆ.


Spread the love

About Laxminews 24x7

Check Also

ಕಾಂಗ್ರೆಸ್ ಪಕ್ಷಕ್ಕೆ ಮುಜುಗರಕ್ಕಿಡಾಗಿಸಿದ ಬಿಜೆಪಿ; ನಾಟಿ ಕೋಳಿ ಸರ್ಕಾರದ ಘೋಷಣೆಗಳು* ನಾಟಿ ಕೋಳಿ ಸರ್ಕಾರಕ್ಕೆ ವಿಜಯಪುರದಲ್ಲಿ ಬಿಜೆಪಿ ಸೆಡ್ಡು!

Spread the love ಕಾಂಗ್ರೆಸ್ ಪಕ್ಷಕ್ಕೆ ಮುಜುಗರಕ್ಕಿಡಾಗಿಸಿದ ಬಿಜೆಪಿ; ನಾಟಿ ಕೋಳಿ ಸರ್ಕಾರದ ಘೋಷಣೆಗಳು* ನಾಟಿ ಕೋಳಿ ಸರ್ಕಾರಕ್ಕೆ ವಿಜಯಪುರದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ