ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ಮತ್ತು ಉದ್ಯಮಿ ರಾಜ್ ಕುಂದ್ರಾ ಮನೆ ಮೇಲೆ ದಾಳಿ ಮಾಡಿದಾಗ 70 ನೀಲಿ ಚಿತ್ರಗಳು ಸಿಕ್ಕವೂ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ರಾಜ್ ಕುಂದ್ರಾ ಮಾಜಿ ಆಪ್ತ ಸಹಾಯಕ ಉಮೇಶ್ ಕಾಮತ್ ಇತರೆ ಪ್ರೊಡಕ್ಷನ್ ಹೌಸ್ನೊಂದಿಗೆ ಸೇರಿಕೊಂಡು ಈ 70 ನೀಲಿ ಚಿತ್ರಗಳನ್ನು ಮಾಡಿದ್ದರು ಎನ್ನಲಾಗಿದೆ.
ನೀಲಿ ಚಿತ್ರಗಳ ತಯಾರಿಕೆಯಿಂದ ಇದುವರೆಗೆ ಸುಮಾರು 7.5ಕೋಟಿ ರೂಪಾಯಿಗಳಿಗೂ ಅಧಿಕ ಹಣ ತನ್ನ ವಿವಿಧ ಖಾತೆಗಳಿಗೆ ಜಮಾವಣೆಯಾಗಿದೆ. ಈತ ಇದರಿಂದ ಪ್ರತಿದಿನ ಲಕ್ಷಗಟ್ಟಲೆ ಆದಾಯ ಸಂಪಾದಿಸುತ್ತಿದ್ದ. ಸುಮಾರು 6-8 ಕೋಟಿ ರೂಪಾಯಿಗಳು ದಿನನಿತ್ಯ ಆದಾಯ ಬರುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರಾಜ್ ಕುಂದ್ರಾ ವಿವಿಧ ಬ್ಯಾಂಕ್ ಖಾತೆಗಳಿಗೆ ಸಾವಿರಾರು ಬಾರಿ ಲಕ್ಷಾಂತರ ರೂಪಾಯಿ ಹಣ ಸಂದಾಯವಾಗಿದೆ ಎಂದು ಪೊಲೀಸರ ಬಳಿ ಇರುವ ದಾಖಲೆಗಳು ಹೇಳುತ್ತಿವೆ. ಇಷ್ಟು ಹಣವೂ ಅಪರಾಧ ಪ್ರಕರಣದಿಂದಲೇ ಸಂಪಾದಿಸಿದ್ದು ಎಂದು ಪರಿಶೀಲಿಸಿ ಪೊಲೀಸರು ಒಂದು ನಿರ್ಧಾರಕ್ಕೆ ಬರಬೇಕಿದೆ.
ಇನ್ನು, ನೀಲಿಚಿತ್ರಗಳನ್ನು ಅಪ್ಲೋಡ್ ಮಾಡುತ್ತಿದ್ದ ಹಾಟ್ಶಾಟ್ ಆಯಪ್ ಅನ್ನು ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದಿತ್ತು. ಇತ್ತೀಚೆಗಷ್ಟೇ ಹಾಟ್ಶಾಟ್ ಅನ್ನು ಪ್ಲೇಸ್ಟೋರ್ ಮತ್ತು ಆಪಲ್ ಸ್ಟೋರ್ಗಳು ನೀಲಿಚಿತ್ರಗಳಿದ್ದ ಕಾರಣ ನಿಷೇಧಿಸಿದ್ದವು.
ಸದ್ಯ ಪೊಲೀಸರು ಸಂಗ್ರಹಿಸಿರುವ ಸಾಕ್ಷ್ಯಗಳಲ್ಲಿ ಹಾಟ್ಶಾಟ್ನ ಚಿತ್ರಗಳು, ವಿಡಿಯೊಗಳು, ವಾಟ್ಸ್ಆಪ್ ಚಾಟ್ಗಳು ಇವೆ. ಇವು ರಾಜ್ ಕುಂದ್ರಾ ಮೇಲಿನ ಆರೋಪಗಳನ್ನು ಸ್ಪಷ್ಟೀಕರಿಸುತ್ತಿವೆ.