Breaking News

ಪ್ರತಿದಿನ 2GB ಡೇಟಾ, 28 ದಿನ ವ್ಯಾಲಿಡಿಟಿ: ನಂ. 1 ಸ್ಥಾನಕ್ಕೆ ಏರ್ಟೆಲ್-ಜಿಯೋ ನಡುವೆ ಗುದ್ದಾಟ

Spread the love

ಟೆಲಿಕಾಂ ಕ್ಷೇತ್ರದಲ್ಲಿ ಜಿಯೋ (Jio) ಹಾಗೂ ಏರ್‌ಟೆಲ್​ಗಳ (Airtel) ನಡುವೆ ಸಮತ ಮುಂದುವರೆಯುತ್ತಲೇ ಇದೆ. ನಂಬರ್ ಒನ್ ಪಟ್ಟಕ್ಕೇರಲು ಏರ್ಟೆಲ್ ಹರಸಾಹಸ ಪಡುತ್ತಿದ್ದು, ಹೊಸ ಹೊಸ ಆಕರ್ಷಕ ಪ್ಲಾನ್​ಗಳನ್ನು ಬಿಡುಗಡೆ ಮಾಡುತ್ತಿದೆ. ಜಿಯೋ ಕೂಡ ಎಂದಿನಂತೆ ಕಡಿಮೆ ಬೆಲೆಗೆ ಆಕರ್ಷಕ ಡೇಟಾ ಪ್ಲಾನ್​ಗಳನ್ನು ಪರಿಚಯಿಸುತ್ತಿದೆ. ಗ್ರಾಹಕರನ್ನು ತನ್ನತ್ತ ಸೆಳೆಯರಲು ಎರಡೂ ನೆಟ್​ವರ್ಕ್ ಪೈಪೋಟಿಗೆ ಬಿದ್ದಂತೆ ಕಾಣುತ್ತಿದೆ. ಇದರ ನಡುವೆ ಸರ್ಕಾರಿ ಸ್ವಾಮ್ಯದ ಬಿಎಸ್​ಎನ್​ಎಲ್ (BSNL) ಮತ್ತು ವೊಡಾಫೋನ್ – ಐಡಿಯಾ (Vi) ಕೂಡ ಹಿಂದೆ ಉಳಿದಿಲ್ಲ. ಬಿಎಸ್​ಎನ್​ಎಲ್ ಇತ್ತೀಚೆಗಷ್ಟೆ ಈದ್ ಪ್ರಯುಕ್ತ ಹೊಸ ಆಫರ್ ಪರಿಚಯಿಸಿ ಭಾರೀ ಸುದ್ದಿಯಾಗಿತ್ತು.

ಏರ್ಟೆಲ್​ನಲ್ಲಿ ಪ್ರಮುಖವಾಗಿ 28 ದಿನಗಳ ಮಾನ್ಯತೆಯೊಂದಿಗೆ 500 ರೂ. ಗಿಂತ ಕಡಿಮೆ ಬೆಲೆಯ ಯೋಜನೆಗಳು ಹೆಚ್ಚು ಉಪಯುಕ್ತವಾಗಿದೆ. ಇದರಲ್ಲಿ 298 ರೂ. ಪ್ರಿಪೇಯ್ಡ್ ಯೋಜನೆಯು ದಿನಕ್ಕೆ 2GB ಡೇಟಾದ ಜೊತೆ ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್‌ಎಂಎಸ್ ನೀಡುತ್ತದೆ ಮತ್ತು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ಯೋಜನೆಯ ಹೆಚ್ಚುವರಿ ಪ್ರಯೋಜನಗಳಲ್ಲಿ ಏರ್ಟೆಲ್​​ ಎಕ್ಸ್‌ಸ್ಟ್ರೀಮ್ ಚಂದಾದಾರಿಕೆ ಮತ್ತು ಉಚಿತ ಆನ್‌ಲೈನ್ ಕೋರ್ಸ್‌ಗಳಿಗೆ ಪ್ರವೇಶ ಹೊಂದಿರುವ ವಿಂಕ್ ಸಂಗೀತ ಮತ್ತು ಫಾಸ್ಟ್ಯಾಗ್‌ನಲ್ಲಿ 150 ರೂ.ಕ್ಯಾಶ್‌ಬ್ಯಾಕ್‌ ಪಡೆಯಬಹುದಾಗಿದೆ.

ವಿಶೇಷ ಎಂದರೆ ಏರ್ಟೆಲ್​​ ಥ್ಯಾಂಕ್ ಅಪ್ಲಿಕೇಶನ್‌ನಿಂದ ರೀಚಾರ್ಜ್ ಪಡೆಯುವ ಬಳಕೆದಾರರು ಈ ಪ್ರಿಪೇಯ್ಡ್ ಯೋಜನೆಗಾಗಿ 50 ರೂ. ಮತ್ತು 2GB ಹೆಚ್ಚುವರಿ ಡೇಟಾವನ್ನು ರಿಯಾಯಿತಿಯಲ್ಲಿ ಪಡೆಯುತ್ತಾರೆ.

ಇತ್ತ ಜಿಯೋ 249 ರೂ. ಯೋಜನೆಯು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು ದಿನಕ್ಕೆ 2GB ಡೇಟಾವನ್ನು ನೀಡುತ್ತದೆ. ಒಟ್ಟು 56GB ಡೇಟಾವನ್ನು ನೀಡುತ್ತದೆ. ಏರ್ಟೆಲ್​ಗೆ ಹೋಲಿಸಿದರೆ ಇದು ಕಡಿಮೆ ಬೆಲೆಗೆ ಲಭ್ಯವಿದೆ. ಈ ಯೋಜನೆಯು ಜಿಯೋದಿಂದ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ದೇಶೀಯ ಕರೆಗಳನ್ನು ಮಾಡಬಹುದು.

ಇನ್ನೂ ವೋಡಾಫೋನ್ ಐಡಿಯಾದ 299 ರೂ. ಪ್ರಿಪೇಯ್ಡ್ ಪ್ಲಾನ್​ ವಾರಾಂತ್ಯದ ರೋಲ್‌ಓವರ್ ಡೇಟಾ ಲಾಭದೊಂದಿಗೆ ಬರುತ್ತದೆ. ಅಂದರೆ ಈ ಯೋಜನೆಯು ವಾರಾಂತ್ಯದ ರೋಲ್‌ಓವರ್ ಡೇಟಾ ಲಾಭದ ಜೊತೆಗೆ 28 ದಿನಗಳವರೆಗೆ 2 ಪ್ಲಸ್ 2, 4GB ದೈನಂದಿನ ಡೇಟಾವನ್ನು ನೀಡುತ್ತದೆ, ಇದು ಬಳಕೆದಾರರಿಗೆ ವಾರದ ದಿನಗಳಲ್ಲಿ ಡೇಟಾವನ್ನು ಸಂಗ್ರಹಿಸಲು ಮತ್ತು ವಾರಾಂತ್ಯದಲ್ಲಿ ಒಟ್ಟಿಗೆ ಬಳಸಲು ಅನುವು ಮಾಡಿಕೊಡುತ್ತದೆ, ಇದು ಸ್ಟ್ರೀಮಿಂಗ್‌ಗೆ ಸೂಕ್ತವಾಗಿದೆ.


Spread the love

About Laxminews 24x7

Check Also

ಮೈಸೂರಿನಿಂದ ಉದಯಪುರಕ್ಕೆ ತೆರಳುತ್ತಿದ್ದ ರೈಲಿನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.

Spread the loveರಾಮನಗರ: ಬೊಂಬೆನಗರಿ ಚನ್ನಪಟ್ಟಣದ ಬಳಿ ಚಲಿಸುತ್ತಿದ್ದ ರೈಲಿನ ಇಂಜಿನ್​​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು (ಗುರುವಾರ) ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ